ಜಾನಪದ ಲೋಕೋತ್ಸವ ಪ್ರಶಸ್ತಿ ಪ್ರದಾನ

ರಾಮನಗರ: ಇಲ್ಲಿನ ಜಾನಪದ ಲೋಕದಲ್ಲಿ ಭಾನುವಾರ ಸಂಜೆ ನಾಡಿನ 27 ಕಲಾವಿದರಿಗೆ ಕರ್ನಾಟಕ ಜಾನಪದ ಪರಿಷತ್ತಿನ 2022ರ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಜಾನಪದ ಅಕಾಡೆಮಿಯಿಂದ ನೀಡಲಾಗುವ ₹25 ಸಾವಿರ ನಗದು ಸಹಿತ ವಾರ್ಷಿಕ ಪ್ರಶಸ್ತಿಗಳನ್ನು ಯಕ್ಷಗಾನ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ (ಎಚ್.ಎಲ್.ನಾಗೇಗೌಡ ಜಾನಪದ ಲೋಕಶ್ರೀ ಪ್ರಶಸ್ತಿ), ಜಾನಪದ ವಿದ್ವಾಂಸ ಬಿ.ಎ. ವಿವೇಕ ರೈ (ಜೀ.ಶಂ.ಪರಮಶಿವಯ್ಯ ಜಾನಪದ ಪ್ರಶಸ್ತಿ),₹15 ಸಾವಿರ ನಗದು ಸಹಿತ ಪ್ರಶಸ್ತಿಯನ್ನು ರಾಮನಗರದ ಜಾನಪದ ವಿದ್ವಾಂಸ ಎಂ.ಬೈರೇಗೌಡ (ಜಿ.ನಾರಾಯಣ ಜಾನಪದ ಲೋಕ ಪ್ರಶಸ್ತಿ) ಸ್ವೀಕರಿಸಿದರು.
ತುಮಕೂರಿನ ಜನಪದ ಹಾಡುಗಾರ್ತಿ ಪುಟ್ಟಲಕ್ಕಮ್ಮ (ಲಕ್ಷ್ಮಮ್ಮ ನಾಗೇಗೌಡ ಪ್ರಶಸ್ತಿ), ಚಾಮರಾಜನಗರದ ಹೊನ್ನೂರು ಗೌರಮ್ಮ (ಸೋಬಾನೆ ಚಿಕ್ಕಮ್ಮ ಪ್ರಶಸ್ತಿ), ಕೊಪ್ಪಳದ ಬಯಲಾಟ ಕಲಾವಿದ ಭೀಮಪ್ಪ ಯಲ್ಲಪ್ಪ ಪೂಜಾರ (ದೊಡ್ಡಮನೆ ಪ್ರಶಸ್ತಿ), ಧಾರವಾಡದ ಕಣಿ ವಾದನ ಕಲಾವಿದ ಸುಭಾಷ್ ಚಂದ್ರ ಹೊಸಮನಿ (ದೊಡ್ಡಮನೆ ಲಿಂಗೇಗೌಡ ಪ್ರಶಸ್ತಿ),ರಾಮನಗರ ಜಿಲ್ಲೆಯವರಾದ ನೀಲಗಾರ ಕಲಾವಿದ ಮಾಧು ನಾಯ್ಕ, ಸೋಬಾನೆ ಕಲಾವಿದೆ ಕೆಂಪಮ್ಮ, ಜನಪದ ಗಾಯಕ ಚಿಕ್ಕಮರೀಗೌಡ ಪ್ರಶಸ್ತಿ ಸ್ವೀಕರಿಸಿದರು.
ಶಿವಮೊಗ್ಗದ ಡೊಳ್ಳು ಕಲಾವಿದ ದೊಂಬರ ಹುಚ್ಚಪ್ಪ ಕೊಟ್ಟ, ಮಂಡ್ಯದ ಜನಪದ ಗಾಯಕ ವಿ .ಈ.ಲೋಕೇಶ್, ಕಲಬುರ್ಗಿ ಜಿಲ್ಲೆಯ ತತ್ವಪದ ಕಲಾವಿದೆ ಶರಣಮ್ಮ ಪಿ.ಸಜ್ಜನ, ಚಿಕ್ಕಮಗಳೂರು ಜಿಲ್ಲೆಯ ಅಲೆಮಾರಿ ಸಮುದಾಯದ ಗಾಯಕಿಯರಾದ ನ್ಯೂಸ್‌ಜೀ ಮತ್ತು ಚಿಟ್ಟಿನ್‌ಬಿ, ಉತ್ತರ ಕನ್ನಡ ಜಿಲ್ಲೆಯ ಜನಪದ ವೈದ್ಯ ಹನುಮಂತಗೌಡ ಬೆಳಂಬಾರ, ದಕ್ಷಿಣ ಕನ್ನಡ ಜಿಲ್ಲೆಯ ದೈವಪಾತ್ರಿ ಕಲಾವಿದ ಭೋಜ ಪೂಜಾರಿ, ಗದಗದ ಲಂಬಾಣಿ ಕಸೂತಿ ಕಲಾವಿದೆ ಸೋಮವ್ವ ಲಮಾಣಿ,ಬಳ್ಳಾರಿಯ ಬಯಲಾಟ ಪ್ರಸಾದನ ಕಲಾವಿದ ಕೊಟ್ಗೆ ಹಾಲೇಶಪ್ಪ, ಮಂಡ್ಯದ ಪೂಜಾ ಕುಣಿತ ಕಲಾವಿದ ಸಿದ್ದೇಗೌಡ, ಕೋಲಾಟ ಕಲಾವಿದ ಹೊನ್ನಯ್ಯ, ಗದಗದ ಜೋಗತಿ ನೃತ್ಯ ಕಲಾವಿದ ಶಂಕರಪ್ಪ ಸಂಕಣ್ಣವರ, ಉತ್ತರ ಕನ್ನಡ ಜಿಲ್ಲೆಯ ಜನಪದ ಹಾಡುಗಾರ್ತಿ ಕೇಶಿ ಗೋವಿಂದಗೌಡ, ಯಾದಗಿರಿಯ ಜನಪದ ಗಾಯಕ ನೀಲಪ್ಪ ಚೌದರಿ, ಹಾಸನದ ರಂಗದ ಕುಣಿತ ಕಲಾವಿದ ಬಿ.ಟಿ.ಮಾನವ, ರಾಯಚೂರಿನ ಹಗಲುವೇಷ ಕಲಾವಿದ ಜಂಬಣ್ಣ ಶಂಕ್ರಪ್ಪ ಹಸಮಕಲ್, ರಾಮನಗರದ ಪಟ ಕುಣಿತ ಕಲಾವಿದ ರಂಗಯ್ಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.