ಬೆಂಗಳೂರು: ಪ್ರಸಕ್ತ ಆರ್ಥಿಕ ವರ್ಷದಲ್ಲಿ ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡಿದ್ದ ಅನುದಾನದ ಮೊತ್ತವನ್ನು ಕೋವಿಡ್ ಕಾರಣದಿಂದ ಕಡಿತಗೊಳಿಸಿದ್ದ ರಾಜ್ಯ ಸರ್ಕಾರ, ಅಭಿವೃದ್ಧಿ ಕಾಮಗಾರಿಗಳಿಗೂ ತಡೆ ವಿಧಿಸಿತ್ತು. ಆದರೆ, ಆರ್ಥಿಕ ವರ್ಷದ ಕೊನೆಯಲ್ಲಿ ವಿವಿಧ ಮಠ, ಮಂದಿರಗಳು ಮತ್ತು ಜಾತಿವಾರು ಸಂಘ ಸಂಸ್ಥೆಗಳಿಗೆ ಒಂದೇ ಕಂತಿನಲ್ಲಿ ₹ 80.25 ಕೋಟಿ ಅನುದಾನ ಬಿಡುಗಡೆ ಮಾಡಿದೆ.

ಧಾರ್ಮಿಕ ದತ್ತಿ ಇಲಾಖೆಯ ಮೂಲಕ ಮಾರ್ಚ್ 19ರಂದು ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಲಾಗಿದೆ. ರಾಜ್ಯದಾದ್ಯಂತ 436 ಮಠ, ಮಂದಿರ, ದೇವಸ್ಥಾನ ಹಾಗೂ ಜಾತಿ ಕೇಂದ್ರಿತ ಸಂಸ್ಥೆಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ. ಮಂಜೂರಾಗಿರುವ ಅನುದಾನವನ್ನು ತಕ್ಷಣವೇ ಆಯಾ ಜಿಲ್ಲಾಧಿಕಾರಿಗಳ ಖಾತೆಗೆ ಬಿಡುಗಡೆ ಮಾಡುವಂತೆ ಖಜಾನೆ ಇಲಾಖೆಗೆ ನಿರ್ದೇಶನ ನೀಡಲಾಗಿದೆ.

ಲೋಕಸಭಾ ಕ್ಷೇತ್ರದ ಉಪ ಚುನಾವಣೆ ನಡೆಯುತ್ತಿರುವ ಬೆಳಗಾವಿ ಜಿಲ್ಲೆಗೆ ₹ 7.7 ಕೋಟಿ ಮತ್ತು ಉಪ ಚುನಾವಣೆಯ ಕಣವಾಗಿರುವ ಬಸವಕಲ್ಯಾಣ ಕ್ಷೇತ್ರದ ಹಾವಗಿಲಿಂಗೇಶ್ವರ ಹಿರೇಮಠಕ್ಕೆ ₹ 10 ಲಕ್ಷ ನೀಡಿದ್ದರೆ, ಸಿಂದಗಿ ಕ್ಷೇತ್ರದ ಎರಡು ಮಠಗಳಿಗೆ ಒಟ್ಟು ₹ 25 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಯಾವುದೇ ಅನುದಾನ ನೀಡಿಲ್ಲ. ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯೂ ದಿಢೀರ್ ಅನುದಾನ ಬಿಡುಗಡೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಶಿವಮೊಗ್ಗಕ್ಕೆ ಸಿಂಹಪಾಲು

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರತಿನಿಧಿಸುವ ಶಿವಮೊಗ್ಗ ಜಿಲ್ಲೆಗೆ ಅತ್ಯಧಿಕ (₹15.33 ಕೋಟಿ) ಅನುದಾನ ಬಿಡುಗಡೆ ಮಾಡಲಾಗಿದೆ. ₹ 2 ಲಕ್ಷದಿಂದ ₹ 1 ಕೋಟಿಯವರೆಗೆ 146 ದೇವಸ್ಥಾನ, ಮಠ, ಮಂದಿರ, ಸಂಘ ಸಂಸ್ಥೆಗಳಿಗೆ ಅನುದಾನ ನೀಡಲಾಗಿದೆ. ಈ ಪೈಕಿ ಮುಖ್ಯಮಂತ್ರಿ ಪ್ರತಿನಿಧಿಸುವ ಶಿಕಾರಿಪುರ ವಿಧಾನಸಭಾ ಕ್ಷೇತ್ರಕ್ಕೆ ₹ 2.5 ಕೋಟಿ ಒದಗಿಸಲಾಗಿದೆ. ಬಿಜೆಪಿ ಸರ್ಕಾರದ ಜತೆ ಸಂಘರ್ಷಕ್ಕೆ ಇಳಿದಿರುವ ಕಾಂಗ್ರೆಸ್ ಶಾಸಕ ಸಂಗಮೇಶ್ವರ್ ಪ್ರತಿನಿಧಿಸುವ ಭದ್ರಾವತಿ ಕ್ಷೇತ್ರಕ್ಕೆ ಅತ್ಯಲ್ಪ ಮೊತ್ತ ನೀಡಲಾಗಿದೆ.

ಮಂಡ್ಯ (₹ 8ಕೋಟಿ), ಬೆಳಗಾವಿ (₹ 7.78 ಕೋಟಿ), ತುಮಕೂರು (₹5.40 ಕೋಟಿ), ಉಡುಪಿ (₹5.25 ಕೋಟಿ), ಚಿತ್ರದುರ್ಗ (₹ 4 ಕೋಟಿ), ಮೈಸೂರು (₹ 3.83 ಕೋಟಿ) ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ದೊರಕಿದೆ. ಚಿಕ್ಕಬಳ್ಳಾಪುರ ಜಿಲ್ಲೆಗೆ ಕೇವಲ ₹ 2 ಲಕ್ಷ ದೊರಕಿದ್ದರೆ, ಬೆಂಗಳೂರು ಗ್ರಾಮಾಂತರ, ಗದಗ, ಕೊಡಗು ಮತ್ತು ಕೋಲಾರ ಜಿಲ್ಲೆಗಳಿಗೆ ತಲಾ ₹ 20 ಲಕ್ಷ ನೀಡಲಾಗಿದೆ. ಕೊಪ್ಪಳ ಜಿಲ್ಲೆಗೆ ₹ 25 ಲಕ್ಷ ನೀಡಿದ್ದರೆ, ಬೆಂಗಳೂರು ನಗರ ಜಿಲ್ಲೆಗೆ ₹ 40 ಲಕ್ಷ ಮಂಜೂರು ಮಾಡಲಾಗಿದೆ.

ಕೆಲವರಿಗೆ ಪ್ರಾಶಸ್ತ್ಯ

ಮಂಡ್ಯ ಜಿಲ್ಲೆಗೆ ನೀಡಿರುವ ₹ 8 ಕೋಟಿ ಮೊತ್ತದಲ್ಲಿ ₹ 7.05 ಕೋಟಿಯಷ್ಟು ಸಚಿವ ಕೆ.ಸಿ. ನಾರಾಯಣಗೌಡ ಪ್ರತಿನಿಧಿಸುವ ಕೆ.ಆರ್. ಪೇಟೆ ಕ್ಷೇತ್ರದ ಪಾಲಾಗಿದೆ. ದಾವಣಗೆರೆ ಜಿಲ್ಲೆಗೆ ಮಂಜೂರಾಗಿರುವ ₹ 2.89 ಕೋಟಿ ಅನುದಾನದಲ್ಲಿ ₹ 2.64 ಕೋಟಿಯನ್ನು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಪ್ರತಿನಿಧಿಸುವ ಹೊನ್ನಾಳಿ ವಿಧಾನಸಭಾ ಕ್ಷೇತ್ರಕ್ಕೆ ಹಂಚಿಕೆ ಮಾಡಲಾಗಿದೆ. ಇತ್ತೀಚೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಮೇಶ ಜಾರಕಿಹೊಳಿ ಪ್ರತಿನಿಧಿಸುವ ಗೋಕಾಕ ವಿಧಾನಸಭಾ ಕ್ಷೇತ್ರಕ್ಕೆ ₹ 2 ಕೋಟಿಯಷ್ಟು ಅನುದಾನ ಮಂಜೂರು ಮಾಡಲಾಗಿದೆ. ವಿಜಯಪುರ ಜಿಲ್ಲೆಗೆ ₹ 2.02 ಕೋಟಿ ಅನುದಾನ ಒದಗಿಸಿದ್ದು, ಬಸನಗೌಡ ಪಾಟೀಲ ಯತ್ನಾಳ ಅವರ ಕ್ಷೇತ್ರಕ್ಕೆ ₹ 1 ಕೋಟಿ ನೀಡಲಾಗಿದೆ.

ಜೆಡಿಎಸ್ ಶಾಸಕಿ ಅನಿತಾ ಕುಮಾರಸ್ವಾಮಿ ಪ್ರತಿನಿಧಿಸುವ ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ನಿರ್ದಿಷ್ಟ ಕಾಮಗಾರಿಗಳ ಪಟ್ಟಿ ಇಲ್ಲದೆ ₹ 1 ಕೋಟಿ ಒದಗಿಸಲಾಗಿದೆ. ಹಾಸನ ಜಿಲ್ಲೆಗೆ ₹ 2.31 ಕೋಟಿ ಒದಗಿಸಿದ್ದರೂ, ಎಚ್.ಡಿ. ರೇವಣ್ಣ ಅವರ ಕ್ಷೇತ್ರಕ್ಕೆ ಯಾವುದೇ ಅನುದಾನ ನೀಡಿಲ್ಲ. ಬಾಗಲಕೋಟೆ ಜಿಲ್ಲೆಗೆ ₹ 1.05 ಕೋಟಿ ಅನುದಾನ ಮಂಜೂರಾಗಿದ್ದು, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿನಿಧಿಸುವ ಬದಾಮಿ ಕ್ಷೇತ್ರಕ್ಕೆ ₹ 5 ಲಕ್ಷ ಮಾತ್ರ ಒದಗಿಸಲಾಗಿದೆ.

‘ಯಾವ ಲೋಪವೂ ಆಗಿಲ್ಲ’

‘ಶಾಸಕರು, ಸಂಸದರು, ಸಾಧು ಸಂತರ ಮನವಿ ಆಧರಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಠ, ಮಂದಿರಗಳಿಗೆ ಅನುದಾನ ಬಿಡುಗಡೆ ಮಾಡಿದ್ದಾರೆ. ಧಾರ್ಮಿಕ ದತ್ತಿ ಇಲಾಖೆಯಲ್ಲಿ ಲಭ್ಯವಿದ್ದ ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಇದರಲ್ಲಿ ಯಾವ ಲೋಪವೂ ಆಗಿಲ್ಲ’ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದರು.

ಮನವಿಗಳ ಆಧಾರದಲ್ಲಿ ಹಣ ಬಿಡುಗಡೆ ಆಗಿದೆ. ರಾಜಕೀಯ ಮತ್ತಿತರ ಕಾರಣಗಳಿಂದ ತಾರತಮ್ಯ ಮಾಡುವ ಪ್ರಶ್ನೆಯೇ ಇಲ್ಲ ಎಂದರು.

ಭರಪೂರ ನೆರವು ಪಡೆದವರು

ಸೋಮೇಶ್ವರ ಹಾಗೂ ಶಂಭುಲಿಂಗೇಶ್ವರ ದೇವಸ್ಥಾನ, ಸಾಸಲು, ಕೆ.ಆರ್. ಪೇಟೆ ತಾಲ್ಲೂಕು– ₹ 2 ಕೋಟಿ

ವೀರ ಸಿಂಹಾಸನ ಮಠ, ಸೋಮಳ್ಳಿ, ಗುಂಡ್ಲುಪೇಟೆ ತಾಲ್ಲೂಕು– ₹ 1.5 ಕೋಟಿ

ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಇಂಚಲದ ಶಿವಯೋಗೀಶ್ವರ ಸಾಧುಸಂಸ್ಥಾನ ಮಠ– ₹ 1ಕೋಟಿ

ಚಿಕ್ಕಮಗಳೂರು ಜಿಲ್ಲೆಯ ಹರಿಹರಪುರದ ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮೀ ನರಸಿಂಹ ಪೀಠ– ₹ 1ಕೋಟಿ

ತರಳಬಾಳು ಜಗದ್ಗುರು ಶಾಖಾ ಮಠ, ಸಾಣೇಹಳ್ಳಿ, ಹೊಸದುರ್ಗ (ರಂಗ ಚಟುವಟಿಕೆಗೆ)– ₹ 1 ಕೋಟಿ

ಮಡಿವಾಳೇಶ್ವರ ಮಠ, ಗರಗ, ಧಾರವಾಡ– ₹ 1ಕೋಟಿ

ಹಿರೇಕಲ್ಮಠ, ಹೊನ್ನಾಳಿ– ₹ 1ಕೋಟಿ

ಗುರು ಚನ್ನರುದ್ರ ಮುನೀಶ್ವರ ಜನಕಲ್ಯಾಣ ಪ್ರತಿಷ್ಠಾನ ಸಂಸ್ಥಾನ ಹಿರೇಮಠ, ಸೂಗೂರ, ಚಿತ್ತಾಪುರ ತಾಲ್ಲೂಕು– ₹ 1 ಕೋಟಿ

ಮುಡುಕುತೊರೆ ಮಲ್ಲಿಕಾರ್ಜುನ ಸ್ವಾಮಿ ಮತ್ತು ಭ್ರಮರಾಂಭ ದೇವಾಲಯ, ಟಿ. ನರಸೀಪುರ ತಾಲ್ಲೂಕು– ₹ 1 ಕೋಟಿ

ಹೊಂಬುಜ ಜೈನ ಮಠ, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ– ₹ 1 ಕೋಟಿ

ಮಾರಿಕಾಂಬ ದೇವಿ ದೇವಸ್ಥಾನ, ಸಾಗರ– ₹ 1ಕೋಟಿ

ಮೃಡ ಬಸವೇಶ್ವರ ಸೇವಾ ಸಮಿತಿ, ಸೂಗೂರು, ಶಿವಮೊಗ್ಗ– ₹ 1ಕೋಟಿ

ಅಲ್ಲಮಪ್ರಭು ಅನುಭಾವ ಪೀಠ, ವಿರಕ್ತಮಠ, ಬಳ್ಳಿಗಾವಿ, ಶಿಕಾರಿಪುರ ತಾಲ್ಲೂಕು– ₹ 1ಕೋಟಿ

ಬಾಳೆಹೊನ್ನೂರು ರಂಭಾಪುರಿ ಮಠದ ಶಾಖಾ ಮಠ, ಎಡೆಯೂರು, ಕುಣಿಗಲ್ ತಾಲ್ಲೂಕು– ₹ 1ಕೋಟಿ

ಕುಪ್ಪೂರು ಗದ್ದಿಗೆ ಸಂಸ್ಥಾನ ಮಠ, ಚಿಕ್ಕನಾಯಕನಹಳ್ಳಿ ತಾಲ್ಲೂಕು– ₹ 1ಕೋಟಿ

ಪಲಿಮಾರು ಮಠ, ಉಡುಪಿ– ₹ 1 ಕೋಟಿ

ಅದಮಾರು ಪರ್ಯಾಯ ಮಠ, ಶ್ರೀಕೃಷ್ಣ ದೇವಾಲಯ ಉಡುಪಿ– ₹ 50 ಲಕ್ಷ

ಅದಮಾರು ಪೀಠ, ಉಡುಪಿ– ₹ 25 ಲಕ್ಷ

ಶೃಂಗೇರಿ ಶಾರದಾ ಪೀಠ– ₹ 50 ಲಕ್ಷ

ಮುರುಘರಾಜೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಶೈಕ್ಷಣಿಕ ಸಂಸ್ಥೆ, ಬಸವ ಕೇಂದ್ರ, ಮುರುಘಾ ಮಠ, ರಾವಂದೂರು, ಪಿರಿಯಾಪಟ್ಟಣ ತಾಲ್ಲೂಕು– ₹ 1 ಕೋಟಿ

ಕೆ.ಆರ್. ಪೇಟೆಯಲ್ಲಿ ವೀರಶೈವ ಲಿಂಗಾಯತ ಭವನ ನಿರ್ಮಾಣ– ₹ 2 ಕೋಟಿ

ಕೆ.ಆರ್. ಪೇಟೆಯಲ್ಲಿ ವೀರಶೈವ ವಿದ್ಯಾರ್ಥಿ ನಿಲಯ ನಿರ್ಮಾಣ– ₹ 1ಕೋಟಿ

ಕರ್ನಾಟಕ ಪ್ರದೇಶ ಹಿಂದೂ ಕ್ಷತ್ರಿಯ ಸಂಘ, ಗೋಕಾಕ್, ಬೆಳಗಾವಿ ಜಿಲ್ಲೆ– ₹ 1 ಕೋಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.