ಗುರುವಾರ , ಮೇ 26, 2022
26 °C

IPS ರವಿ ಚನ್ನಣ್ಣನವರ್‌ ವರ್ಗಾವಣೆ: ಪೊಲೀಸ್‌ ಅಧಿಕಾರಿ ಈಗ ವಾಲ್ಮೀಕಿ ನಿಗಮದ ಎಂಡಿ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಿಐಡಿ ಎಸ್‌ಪಿ ರವಿ ಡಿ ಚನ್ನಣ್ಣನವರ್ ಸೇರಿದಂತೆ 9 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.

ರವಿ ಚನ್ನಣ್ಣನವರ್ ಅವರಿಗೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಜಾತಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನಿಯೋಜಿಸಲಾಗಿದೆ.

ಸಿಐಡಿ ಎಸ್‌ಪಿ ಭೀಮಾಶಂಕರ್ ಗುಳೇದ್ ಅವರನ್ನು ಬೆಂಗಳೂರು ಪೂರ್ವ ವಲಯದ ಡಿಸಿಪಿಯಾಗಿ ವರ್ಗಾಯಿಸಲಾಗಿದೆ.

ಎಸಿಬಿ ಎಸ್‌ಪಿ ಅಬ್ದುಲ್ ಅಹಾದ್ ಅವರನ್ನು ಕೆಎಸ್‌ಆರ್‌ಟಿಸಿಯ ಭದ್ರತೆ ಮತ್ತು ವಿಚಕ್ಷಣಾ ದಳದ ನಿರ್ದೇಶಕರನ್ನಾಗಿ ವರ್ಗಾಯಿಸಲಾಗಿದೆ.

ಕೊಪ್ಪಳ ಎಸ್‌ಪಿ ಟಿ. ಶ್ರೀಧರ್ ಅವರನ್ನು ಡಿಸಿಆರ್‌ಇ ಎಸ್‌ಪಿಯಾಗಿ ವರ್ಗಾಯಿಸಲಾಗಿದೆ. ಎಸಿಬಿ ಎಸ್‌ಪಿ ಅರುನಾಂಗ್‌ಶು ಗಿರಿ ಅವರನ್ನು ಕೊಪ್ಪಳ ಎಸ್‌ಪಿಯಾಗಿ ವರ್ಗಾಯಿಸಲಾಗಿದೆ.

ಕಾರಾಗೃಹ ಇಲಾಖೆಯ ಎಸ್‌ಪಿ ಟಿ.ಪಿ. ಶಿವಕುಮಾರ್ ಅವರನ್ನು ಚಾಮರಾಜನಗರ ಎಸ್‌ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಚಾಮರಾಜನಗರ ಎಸ್‌ಪಿಯಾಗಿದ್ದ ದಿವ್ಯಾ ಸಾರಾ ಥಾಮಸ್ ಅವರನ್ನು ಮೈಸೂರು ಪೊಲೀಸ್ ಅಕಾಡೆಮಿಯ ಉಪ ನಿರ್ದೇಶಕರನ್ನಾಗಿ ವರ್ಗಾಯಿಸಲಾಗಿದೆ.

ಸ್ಥಳ ನಿರೀಕ್ಷೆಯಲ್ಲಿದ್ದ ಐಪಿಎಸ್ ಅಧಿಕಾರಿ ಡೆಕ್ಕಾ ಸುರೇಶ್ ಬಾಬು ಅವರನ್ನು ಬೀದರ್ ಎಸ್‌ಪಿಯಾಗಿ ವರ್ಗಾಯಿಸಲಾಗಿದೆ. ಬೀದರ್ ಎಸ್‌ಪಿ ನಾಗೇಶ್ ಡಿಎಲ್‌ ಅವರನ್ನು ಬೆಂಗಳೂರು ಸಿಐಡಿ ಎಸ್‌ಪಿಯಾಗಿ ವರ್ಗಾಯಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು