ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದನೇ ಸುತ್ತಿನಲ್ಲಿ 26,954 ಮತಗಳ ಭಾರಿ ಮುನ್ನಡೆ, ನಿರಾಣಿ ಗೆಲುವು ಬಹುತೇಕ ಖಚಿತ

Last Updated 15 ಜೂನ್ 2022, 17:47 IST
ಅಕ್ಷರ ಗಾತ್ರ

ಬೆಳಗಾವಿ: ವಾಯವ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಣಮಂತ ನಿರಾಣಿ ಸತತ ಐದನೇ ಸುತ್ತಿನಲ್ಲಿ 26,954 ಮತಗಳ ಭಾರಿ ಮುನ್ನಡೆ ಸಾಧಿಸಿದರು. ಈ ಮೂಲಕ ಅವರ ಗೆಲುವು ಬಹುತೇಕ ಖಚಿತವಾಗಿದ್ದು, ಘೋಷಣೆ ಮಾತ್ರ ಬಾಕಿ ಇದೆ.

ಐದನೇ ಸುತ್ತಿನಲ್ಲಿ ನಿರಾಣಿ ಅವರಿಗೆ 34,495 ಮತ ಬಂದರೆ, ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಸುನೀಲ ಸಂಕ 7,495 ಮತ ಗಳಿಸಿದರು. ಈ ಕ್ಷೇತ್ರಕ್ಕೆ ಒಟ್ಟು 65,914 ಮತ ಚಲಾ ವಣೆಯಾಗಿದ್ದು, ಈವರೆಗೆ 50 ಸಾವಿರ ಮಗಳ ಎಣಿಕೆ ಮುಗಿದಿದೆ. ಇದರಲ್ಲಿ 6,707 ಮತಗಳು ಅಸಿಂಧುವಾಗಿವೆ.

ಇನ್ನೂ 15,707 ಮತಗಳ ಎಣಿಕೆ ಮಾತ್ರ ಬಾಕಿ ಇದೆ. ಆದರೆ, ಇದಕ್ಕಿಂತಲೂ ಮುನ್ನಡೆ ಸಾಧಿಸಿದ ಮತಗಳೇ ಹೆಚ್ಚಾಗಿವೆ. ಹೀಗಾಗಿ, ನಿರಾಣಿ ಗೆಲುವು ಖಚಿತವಾಗಿದೆ.

ಇಲ್ಲಿ ಗಮನಾರ್ಹ ಸಂಗತಿಯೆಂದರೆ, ನಾಲ್ಕು ಸುತ್ತುಗಳಲ್ಲೇ 6,707 ಮತಗಳು ಅಸಿಂಧುವಾಗಿವೆ! ಇನ್ನೊಂದೆಡೆ, ಮೂರನೇ ಸ್ಥಾನದಲ್ಲಿರುವ ಪಕ್ಷೇತರ ಅಭ್ಯರ್ಥಿ ದೀಪಿಕಾ ಎಸ್. ಅವರು ಕೇವಲ 283 ಮತ ಪಡೆದಿದ್ದಾರೆ. ಉಳಿದ ಪಕ್ಷೇತರ ಅಭ್ಯರ್ಥಿಗಳು ಸಹ ಎರಡಂಕಿ ದಾಟಿಲ್ಲ.

ಇದೆಲ್ಲವನ್ನೂ ತಾಳೆ ಹಾಕಿರುವ ಬಿಜೆಪಿ ಕಾರ್ಯಕರ್ತರು, ಹಣಮಂತ ನಿರಾಣಿ ಅವರ ಗೆಲುವು ಖಚಿತ ಎಂಬ ನಿರ್ಧಾರಕ್ಕೆ ಬಂದರು. ಇನ್ನೂ ನಾಲ್ಕು ಸುತ್ತುಗಳ ಮತ ಎಣಿಕೆ ನಡೆಯಬೇಕಿದೆ. ಆದರೂ ಮತ ಎಣಿಕೆ ಕೇಂದ್ರದ ಸುತ್ತ ರಾತ್ರಿ ಹಲವು ಕಾರ್ಯಕರ್ತರು ವಿಜಯೋತ್ಸವವನ್ನೂ ಆಚರಿಸಿದರು.

ಹಣಮಂತ ಅವರು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಅವರ ಕಿರಿಯ ಸಹೋದರ. ವಿವಿಧ ಉದ್ಯಮಗಳಲ್ಲಿ ತೊಡಗಿರುವ ಅವರು, ಪದವೀಧರರಿಗೆ ಉದ್ಯೋಗಗಳನ್ನೂ ಒದಗಿಸಿದ್ದಾರೆ. ಈ ಹಿಂದಿನ ಅವಧಿಯಲ್ಲೂ ಪರಿಷತ್‌ ಪ್ರವೇಶಿಸಿದ್ದ ಅವರು, ಪದವೀಧರರ ಸಮಸ್ಯೆಗಳ ಕುರಿತು ಸದನದಲ್ಲಿ ಮೇಲಿಂದ ಮೇಲೆ ಧ್ವನಿ ಎತ್ತಿದ್ದಾರೆ ಎಂಬ ಚರ್ಚೆಯೂ ಅವರಿಗೆ ‘ಬಲ’ ತಂದುಕೊಟ್ಟಿದೆ ಎನ್ನುವುದು ಮುಖಂಡರ ಲೆಕ್ಕಾಚಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT