ನಿಮ್ಮ ಸರ್ಕಾರದ ಘನ ಕಾರ್ಯ ತಿಳಿದುಕೊಳ್ಳಿ: ಸುರ್ಜೇವಾಲಗೆ ಬಿಜೆಪಿ ತಿರುಗೇಟು

ಬೆಂಗಳೂರು: ಪಕ್ಷದ ನಾಯಕರು ಎಲ್ಲ ಧರ್ಮಕ್ಕೂ ಮೋಸ ಮಾಡಿದ್ದಾರೆ ಎಂಬ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಹೇಳಿಕೆಗೆ ಬಿಜೆಪಿ ಕಟುವಾಗಿ ತಿರುಗೇಟು ನೀಡಿದೆ.
ಸುರ್ಜೇವಾಲ ಹೇಳಿಕೆಗೆ ಪ್ರತಿಕ್ರಿಯಿಸಿ ರಾಜ್ಯ ಬಿಜೆಪಿ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು, ‘ನಿಮ್ಮ ಕಾಂಗ್ರೆಸ್ ಪಕ್ಷದ ಸರ್ಕಾರವಿದ್ದಾಗ ಮಾಡಿದ ಘನ ಕಾರ್ಯಗಳನ್ನು ಒಮ್ಮೆ ಕೇಳಿ ತಿಳಿದುಕೊಳ್ಳಿ. ವೀರಶೈವ, ಲಿಂಗಾಯತ ಎಂದು ಧರ್ಮಾಗ್ನಿ ಹಚ್ಚಿದರು. ದಲಿತರು ಮೇಲ್ವರ್ಗದವರು ಎಂಬ ಕಂದಕ ಸೃಷ್ಟಿಸಿದರು. ಸಮುದಾಯ ಆಧಾರಿತ ಭಾಗ್ಯ ಕರುಣಿಸಿದರು. ಹಿಂದೂಗಳಿಗೆ ಹತ್ಯಾಭಾಗ್ಯ ನೀಡಿದರು’ ಎಂದು ಉಲ್ಲೇಖಿಸಲಾಗಿದೆ.
ಓದಿ: ರಾಜಕೀಯ ಉಳಿವಿಗಾಗಿ ಕಾಂಗ್ರೆಸ್ನಿಂದ ಹೊಲಸು ರಾಜಕಾರಣ: ಬಿಜೆಪಿ ವಾಗ್ದಾಳಿ
Dear @rssurjewala
ನಿಮ್ಮ @INCKarnataka ಪಕ್ಷದ ಸರ್ಕಾರವಿದ್ದಾಗ ಮಾಡಿದ ಘನ ಕಾರ್ಯಗಳನ್ನು ಒಮ್ಮೆ ಕೇಳಿ ತಿಳಿದುಕೊಳ್ಳಿ.
☑️ವೀರಶೈವ, ಲಿಂಗಾಯತ ಎಂದು ಧರ್ಮಾಗ್ನಿ ಹಚ್ಚಿದರು.
☑️ದಲಿತರು ಮೇಲ್ವರ್ಗದವರು ಎಂಬ ಕಂದಕ ಸೃಷ್ಟಿಸಿದರು.
☑️ಸಮುದಾಯ ಆಧಾರಿತ ಭಾಗ್ಯ ಕರುಣಿಸಿದರು.
☑️ಹಿಂದೂಗಳಿಗೆ ಹತ್ಯಾಭಾಗ್ಯ ನೀಡಿದರು. pic.twitter.com/dYtPPzH3N8— BJP Karnataka (@BJP4Karnataka) April 12, 2021
ಬಿಜೆಪಿ ನಾಯಕರು ಚುನಾವಣೆ ವೇಳೆ ಮರಾಠ ಸಮುದಾಯವನ್ನು 2(ಎ) ಅಡಿ ತರುವುದಾಗಿ, ಪಂಚಮಸಾಲಿ ಜನಾಂಗದವರಿಗೆ ಮೀಸಲಾತಿ ನೀಡುವುದಾಗಿ ಮತ್ತು ಆರನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸುವುದಾಗಿ ಸಾರಿಗೆ ಸಿಬ್ಬಂದಿಗೆ ಭರವಸೆ ನೀಡಿದ್ದರು. ಆದರೆ ಎಲ್ಲ ಧರ್ಮದವರಿಗೂ ಮೋಸ ಮಾಡಿದ್ದಾರೆ ಎಂದು ಸುರ್ಜೇವಾಲ ಹೇಳಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.