ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಲಜ್ಜತನದಿಂದ ಸಾರ್ವಜನಿಕರಿಗೆ ಕಾಂಗ್ರೆಸ್ ತಪ್ಪು ಮಾಹಿತಿ ಹಂಚುತ್ತಿದೆ: ಬಿಜೆಪಿ

ಅಕ್ಷರ ಗಾತ್ರ

ಬೆಂಗಳೂರು: ಭ್ರಷ್ಟಾಚಾರದ ವರದಿ ಕುರಿತು ನಿರ್ಲಜ್ಜತನದ ಮೂಲಕ‌ ಸಾರ್ವಜನಿಕರಿಗೆ ಕಾಂಗ್ರೆಸ್ ತಪ್ಪು ಮಾಹಿತಿ ಹಂಚುತ್ತಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

2017ರಲ್ಲಿ ರಾಜ್ಯದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಕುರಿತಾದ ವರದಿಯನ್ನು ಉಲ್ಲೇಖಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಲಂಚಗುಳಿತನ: ರಾಜ್ಯಕ್ಕೆ ಅಗ್ರಸ್ಥಾನ’ ಎಂದು ಪ್ರಕಟವಾದ ಮಾಧ್ಯಮ ವರದಿಯ ದಿನಾಂಕವನ್ನೂ ಓದಲಾರದಷ್ಟು ದೊಡ್ಡ ದೃಷ್ಟಿದೋಷ ಕಾಂಗ್ರೆಸ್ಸಿಗರನ್ನು ಕಾಡುತ್ತಿದೆಯೇ’ ಎಂದು ಪ್ರಶ್ನಿಸಿದೆ.

‘2017ರಲ್ಲಿ ಕಾಂಗ್ರೆಸ್‌ ಸರ್ಕಾರದ ಕುರಿತು ಪತ್ರಿಕೆಗಳು ಪ್ರಕಟಿಸಿದ್ದ ವರದಿಗೆ ಬೊಮ್ಮಾಯಿ ಅವರ ಫೋಟೊ ಹಾಕಿ ಡಿಕೆಶಿ ಬಣ ವೈರಲ್‌ ಮಾಡುತ್ತಿದೆ. ಕಾಂಗ್ರೆಸ್ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ಜಾತ್ರೆಯನ್ನು ಕಾಂಗ್ರೆಸ್‌ ಕಾರ್ಯಕರ್ತರೇ ಮುನ್ನಲೆಗೆ ತಂದಿರುವುದು ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕುವುದಾಗಿಯೇ’ ಎಂದು ಬಿಜೆಪಿ ಗುಡುಗಿದೆ.

2017‌ರಲ್ಲಿ ಆಂಗ್ಲ ದೈನಿಕ ಸೇರಿದಂತೆ ಕನ್ನಡದ ಪತ್ರಿಕೆಗಳಲ್ಲಿ ‘ಕರ್ನಾಟಕ ದಿ‌ ಮೋಸ್ಟ್ ಕರಪ್ಟ್ ಸ್ಟೇಟ್’, ‘ಲಂಚಗುಳಿತನ, ರಾಜ್ಯಕ್ಕೆ ಪ್ರಥಮ ಸ್ಥಾನ’ ಎಂಬ ತಲೆಬರಹದಡಿ ಖಾಸಗಿ ಸಂಸ್ಥೆ ನಡೆಸಿದ್ದ ವರದಿಯನ್ನು ಪ್ರಕಟಿಸಿದ್ದವು. ಸಿದ್ದರಾಮಯ್ಯನವರೇ ‘ಭ್ರಷ್ಟಾಚಾರದ ಜನಕ’ ಎಂದು ಹೇಳಲು ಇದಕ್ಕಿಂತ ಬೇರೆ ಸಾಕ್ಷಿ ಬೇಕೇ’ ಎಂದು ಬಿಜೆಪಿ ಕಿಡಿಕಾರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT