ಭಾನುವಾರ, ಜೂನ್ 26, 2022
26 °C

ಎಂಟಿಬಿಗೆ ನಿಂಬೆಹಣ್ಣು ಹಿಡಿದು ಡ್ಯಾನ್ಸ್ ಮಾಡುವುದರಲ್ಲೇ ಆಸಕ್ತಿ: ಕಾಂಗ್ರೆಸ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ್ ಅವರಿಗೆ ನಿಂಬೆಹಣ್ಣು ಹಿಡಿದು ಡ್ಯಾನ್ಸ್ ಮಾಡುವುದರಲ್ಲಿ ಇರುವ ಆಸಕ್ತಿ ಜನರ ಕಷ್ಟಕ್ಕೆ ಸ್ಪಂದಿಸುವುದರಲ್ಲಿ ಇಲ್ಲ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. 

ಸಚಿವರು ಕಾರ್ಯವೈಖರಿ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಮಿಸ್ಟರ್ ನಾಗರಾಜ್ ಅವರೇ, ಒಬ್ಬ ಜನಪ್ರತಿನಿಧಿಯಾಗಿ ನಿಮಗೆ ನಿಂಬೆಹಣ್ಣು ಹಿಡಿದು ನೃತ್ಯ ಮಾಡುವುದರಲ್ಲಿ ಇರುವ ಆಸಕ್ತಿ ತನ್ನ ಕ್ಷೇತ್ರದ ರೈತರು ಅನುಭವಿಸುತ್ತಿರುವ ನೋವುಗಳನ್ನು ನಿವಾರಿಸಿ ಅವರ ಕಷ್ಟಕ್ಕೆ ಸ್ಪಂದಿಸುವುದರಲ್ಲಿ ಇಲ್ಲವಲ್ಲ’ ಎಂದು ಕಿಡಿಕಾರಿದೆ. 

ಬಿಜೆಪಿಯವರೇ ಇದೇನಾ ನಿಮ್ಮ ರೈತ ಪ್ರೀತಿ ರೈತಪರ ನಿಲುವು ಎಂದು ಕಾಂಗ್ರೆಸ್ ಪ್ರಶ್ನಿಸಿದೆ. 

ಓದಿ... ಮುನಿರಾಜು ಅವರಿಂದ ಬಿಜೆಪಿಯ ಅನೈತಿಕತೆ, ಕೊಳಕು ಕೃತ್ಯ ಬಯಲಾಗಿದೆ: ಕಾಂಗ್ರೆಸ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು