ಗುರುವಾರ , ಅಕ್ಟೋಬರ್ 29, 2020
20 °C

ಅಯೋಧ್ಯೆಯ ಅಖಂಡ ಜ್ಯೋತಿ, ರಘುಪತಿ ಲಡ್ಡುಗೆ ನಂದಿನಿ ತುಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರ ಸ್ಥಳದಲ್ಲಿ ಸ್ಥಾಪಿಸಿರುವ ಅಖಂಡ ಜ್ಯೋತಿಗೆ ನಂದಿನಿ ತುಪ್ಪ ನೀಡಲಾಗುತ್ತಿದೆ’ ಎಂದು ಕೆಎಂಎಫ್‌ (ಕರ್ನಾಟಕ ಹಾಲು ಒಕ್ಕೂಟ) ತಿಳಿಸಿದೆ.

ಪಟ್ನಾದ ಮಹಾವೀರ ಮಂದಿರ ಟ್ರಸ್ಟ್‌ ಮೂಲಕ ತುಪ್ಪ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ. ಈ ಟ್ರಸ್ಟ್‌ನ ದೇವಾಲಯವು ಅಯೋಧ್ಯೆಯ ರಾಮ ಜನ್ಮಭೂಮಿ ಪಕ್ಕದಲ್ಲೇ ಇದ್ದು, ಆ ದೇವಾಲಯದ ಮೂಲಕ ನಂದಿನಿ ತುಪ್ಪದಲ್ಲಿ ರಘುಪತಿ ಲಡ್ಡು ಪ್ರಸಾದ ತಯಾರಿಸಿ ಭಕ್ತರಿಗೆ ವಿತರಿಸಲಾಗುತ್ತಿದೆ. ಈವರೆಗೆ 1.50 ಲಕ್ಷ ಲಡ್ಡು ವಿತರಿಸಲಾಗಿದೆ‘ ಎಂದು ಹೇಳಿದೆ.

‘300 ಟನ್ ಕೆನೆ ರಹಿತ ಹಾಲಿನ ಪುಡಿಯನ್ನು ಬಾಂಗ್ಲಾದೇಶಕ್ಕೆ ನೇರವಾಗಿ ರಫ್ತು ಮಾಡಲಾಗುವುದು’ ಎಂದು ಕೆಎಂಎಫ್ ತಿಳಿಸಿದೆ.

‘ಸ್ವಾತಂತ್ರ್ಯೋತ್ಸವ ಮತ್ತು ಗೌರಿ ಗಣೇಶ ಹಬ್ಬದ ಅಂಗವಾಗಿ ತುಪ್ಪ, ಬೆಣ್ಣೆ ಹಾಗೂ ಇತರ ಉತ್ಪನ್ನಗಳ ಬೆಲೆಯನ್ನು ಸೆಪ್ಟೆಂಬರ್ 15ರವರೆಗೆ ಇಳಿಕೆ ಮಾಡಲಾಗಿದೆ’ ಎಂದು ವಿವರಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು