ಗುರುವಾರ , ಆಗಸ್ಟ್ 11, 2022
21 °C

ನರಸಿಂಹ ಭಟ್ ಸೇರಿ ಐವರಿಗೆ ಗೌರವ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಕೊಡಮಾಡುವ 2020ನೇ ಸಾಲಿನ ಗೌರವ ಪ್ರಶಸ್ತಿಗೆ ಅನುವಾದಕರಾದ ಕಾಸರಗೋಡಿನ ಎ. ನರಸಿಂಹ ಭಟ್, ಬೆಂಗಳೂರಿನ ಡಾ.ಎಂ. ಶಿವಕುಮಾರ ಸ್ವಾಮಿ ಸೇರಿದಂತೆ ಐವರು ಭಾಜನರಾಗಿದ್ದಾರೆ.

ಪ್ರಾಧಿಕಾರದ ಸರ್ವಸದಸ್ಯರ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಗೌರವ ಪ್ರಶಸ್ತಿಯು ತಲಾ ₹ 50 ಸಾವಿರ ನಗದು ಹಾಗೂ ಫಲಕವನ್ನು ಒಳಗೊಂಡಿದೆ. 2019ನೇ ಸಾಲಿನಲ್ಲಿ ಪ್ರಥಮಾವೃತ್ತಿಯಲ್ಲಿ ಅನುವಾದಗೊಂಡಿರುವ ಐದು ಅನುವಾದಿತ ಪುಸ್ತಕಗಳಿಗೆ ‘ಪುಸ್ತಕ ಬಹುಮಾನ’ ಪ್ರಕಟಿಸಲಾಗಿದೆ. ಈ ಬಹುಮಾನವು ತಲಾ ₹ 25 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ.

ಗೌರವ ಪ್ರಶಸ್ತಿ: ಎ. ನರಸಿಂಹ ಭಟ್ (ಕಾಸರಗೋಡು), ಡಾ.ಎಂ. ಶಿವಕುಮಾರ ಸ್ವಾಮಿ (ಬೆಂಗಳೂರು), ಲಕ್ಷ್ಮೀಕಾಂತ ಎಸ್. ಹೆಗಡೆ (ಬೆಂಗಳೂರು), ಡಿ.ಎನ್. ಶ್ರೀನಾಥ್ (ಶಿವಮೊಗ್ಗ) ಹಾಗೂ ಡಾ.ಸಿ. ಶಿವಕುಮಾರಸ್ವಾಮಿ (ಬೆಂಗಳೂರು) ಅವರು ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪುಸ್ತಕ ಬಹುಮಾನ: ‘ಡಬ್ಲ್ಯೂ.ಬಿ.ಯೇಟ್ಸ್ ಕವಿತೆಯ ಎಪ್ಪತ್ತು ಕವನಗಳು’–ಪ್ರೊ.ವಿ. ಕೃಷ್ಣಮೂರ್ತಿ ರಾವ್ (ಇಂಗ್ಲಿಷ್‌ನಿಂದ ಕನ್ನಡ), ‘ಇಂದಿರಾ ಬಾಯಿ’–ಪ್ರೊ.ವನಮಾಲಾ ವಿಶ್ವನಾಥ್ ಮತ್ತು ಡಾ.ಶಿವರಾಮ ಪಡಿಕ್ಕಲ್ (ಕನ್ನಡದಿಂದ ಇಂಗ್ಲಿಷ್‌), ‘ನಾನೆಂಬ ಭಾರತೀಯ’–ಬಿ. ನರಸಿಂಗರಾವ್ (ಭಾರತೀಯ ಭಾಷೆಗಳಿಂದ ಕನ್ನಡಕ್ಕೆ), ‘ವಿಮುಕ್ತ’–ಅಜಯ್ ವರ್ಮಾ ಅಲ್ಲೂರಿ (ಭಾರತೀಯ ಭಾಷೆಗಳಿಂದ ಕನ್ನಡಕ್ಕೆ) ಹಾಗೂ ‘ಕುರ್ರೋಡು ತ್ರಿಶುಲಂ ಪಟ್ಟಿನ ಕಥ’–ರಂಗನಾಥ ರಾಮಚಂದ್ರ ರಾವ್ (ಕನ್ನಡದಿಂದ ಬೇರೆ ಭಾರತೀಯ ಭಾಷೆಗಳಿಗೆ) ಅವರು ‘ಪುಸ್ತಕ ಬಹುಮಾನಕ್ಕೆ’ ಆಯ್ಕೆಯಾಗಿದ್ದಾರೆ ಎಂದು ಪ್ರಾಧಿಕಾರದ ರಿಜಿಸ್ಟ್ರಾರ್ ಈಶ್ವರ ಕು. ಮಿರ್ಜಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.