ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಿತಾಂಶ ಹಿಂಪಡೆದ ಕುವೆಂಪು ವಿ.ವಿ

Last Updated 1 ಏಪ್ರಿಲ್ 2022, 18:42 IST
ಅಕ್ಷರ ಗಾತ್ರ

ಶಿವಮೊಗ್ಗ: ಪರೀಕ್ಷೆ ಇಲ್ಲದೇ ಪ್ರಕಟಿಸಿದ್ದ ದೂರಶಿಕ್ಷಣ ವಿಭಾಗದ ಫಲಿತಾಂಶವನ್ನುಕುವೆಂಪು ವಿಶ್ವವಿದ್ಯಾಲಯದ ಹಿಂಪಡೆದಿದೆ. ಏಪ್ರಿಲ್‌ ಮೂರನೇ ವಾರದಿಂದ ಪರೀಕ್ಷೆ ನಡೆಸಲು ಪರೀಕ್ಷಾಂಗ ಕುಲಸಚಿವ ಪ್ರೊ. ನವೀನ್ ಕುಮಾರ್‌ ಆದೇಶ ಹೊರಡಿಸಿದ್ದಾರೆ.

2019-20ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ಮತ್ತು ದ್ವಿತೀಯ ಆವೃತ್ತಿಗೆ ಪ್ರವೇಶ ಪಡೆದ ದೂರಶಿಕ್ಷಣದ ಸ್ನಾತಕ ಪದವಿಗಳ ಪ್ರಥಮ, ದ್ವಿತೀಯ ವರ್ಷ, ಸ್ನಾತಕೋತ್ತರ ಪದವಿಗಳ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೇ ಮುಂದಿನ ಸೆಮಿಸ್ಟರ್‌ಗಳಿಗೆ ಮುಂಬಡ್ತಿ ನೀಡಲು ನಿರ್ಧರಿಸಿ ಫೆ.9ರಂದು ಆದೇಶ ಹೊರಡಿಸಲಾಗಿತ್ತು.

ಆದರೆ ಮಾರ್ಚ್ ತಿಂಗಳಿನಲ್ಲಿ ನಡೆದ ಸಿಂಡಿಕೇಟ್ ಸಾಮಾನ್ಯ ಸಭೆ, ವಿದ್ಯಾವಿಷಯಕ ಪರಿಷತ್ ಸಭೆಗಳ ನಿರ್ಣಯದಂತೆ ಈ ಕ್ರಮವನ್ನು ರದ್ದುಗೊಳಿಸಲಾಗಿತ್ತು.

ಪರೀಕ್ಷೆ ಇಲ್ಲದೇ ಫಲಿತಾಂಶ ಪ್ರಕಟಿಸಿದ್ದಲ್ಲದೇ, ಆಯ್ದ ಅಧ್ಯಯನ ಕೇಂದ್ರಗಳಿಗೆ ಮಾತ್ರ ಫಲಿತಾಂಶ ರವಾನಿಸಲಾಗಿತ್ತು. ಈ ಕುರಿತು ‘ಪ್ರಜಾವಾಣಿ’ಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT