ಭಾನುವಾರ, ನವೆಂಬರ್ 28, 2021
22 °C

ವಕೀಲರ ಪರಿಷತ್‌ ಕಲ್ಯಾಣ ನಿಧಿ ಪಾವತಿಗೆ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ವಕೀಲರು ಪ್ರಸಕ್ತ 2021ರ ಸಾಲಿನ ಕಲ್ಯಾಣ ನಿಧಿ ಪಾವತಿಸಲು ಡಿಸೆಂಬರ್ 31 ಕಡೆಯ ದಿನವಾಗಿರುತ್ತದೆ.

ಈ ಕುರಿತಂತೆ ಪರಿಷತ್ ಅಧ್ಯಕ್ಷ ಎಲ್‌.ಶ್ರೀನಿವಾಸಬಾಬು ಸುತ್ತೋಲೆ ಹೊರಡಿಸಿದ್ದು, ‘ದಂಡರಹಿತವಾಗಿ ಪಾವತಿಸಲು ಡಿಸೆಂಬರ್ 31 ಕಡೆಯ ದಿನವಾಗಿರುತ್ತದೆ. ನಂತರ ಪ್ರತಿ ತಿಂಗಳೂ ₹ 100 ದಂಡದಂತೆ 2022ರ ಜೂನ್‌ ಅಂತ್ಯದವರೆಗೂ ಭರ್ತಿ ಮಾಡಬಹುದು’ ಎಂದು ತಿಳಿಸಿದ್ದಾರೆ.

15 ವರ್ಷಕ್ಕೂ ಹೆಚ್ಚಿನ ವೃತ್ತಿನಿರತ ವಕೀಲರು ₹ 2 ಸಾವಿರ ಮತ್ತು 15 ವರ್ಷಕ್ಕಿಂತಲೂ ಕಡಿಮೆ ವೃತ್ತಿ ನಡೆಸಿರುವ ವಕೀಲರು ಒಂದು ಸಾವಿರ ಪಾವತಿಸಬೇಕು. ಆನ್‌ಲೈನ್‌ಲ್ಲಿಯೂ ಹಣ ಪಾವತಿಗೆ ಅವಕಾಶ ಕಲ್ಪಿಸಲಾಗಿದ್ದು ಹೆಚ್ಚಿನ ವಿವರಗಳಿಗೆ https://ksbc.org.in ವೆಬ್‌ಸೈಟ್‌ ಸಂಪರ್ಕಿಸಬಹುದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.