ಶನಿವಾರ, ನವೆಂಬರ್ 28, 2020
26 °C

ಶೀಘ್ರದಲ್ಲೇ ಸಿಎಂ ಬದಲಾವಣೆ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಉಪಚುನಾವಣೆ ಫಲಿತಾಂಶದ ಬಳಿಕ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡಲಾಗುತ್ತದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬುಧವಾರ ಇಲ್ಲಿ ಹೇಳಿದರು.

‘ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ತಯಾರಿ ನಡೆದಿದೆ. ದೆಹಲಿಯಿಂದ ನನಗೆ ಲಭಿಸಿರುವ ಮಾಹಿತಿಯಂತೆ ಈ ಮಾತು ಹೇಳಿದ್ದೇನೆ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಬಿಜೆಪಿಯಲ್ಲಿ ಮೊದಲಿನಿಂದಲೂ ಚರ್ಚೆ ನಡೆಯುತ್ತಾ ಇದೆ. ಆ ಚರ್ಚೆ ಈಗ ಇನ್ನಷ್ಟು ಗಟ್ಟಿಗೊಂಡಿದೆ’ ಎಂದು ತಿಳಿಸಿದರು.

ಗೆಲ್ಲುವ ವಿಶ್ವಾಸ: ‘ಶಿರಾ ಮತ್ತು ಆರ್‌.ಆರ್‌.ನಗರದಲ್ಲಿ ನಾವು ಗೆಲ್ಲುವ ಸಾಧ್ಯತೆ ಇದೆ. ನನಗೆ ದೊರೆತ ಮಾಹಿತಿಯಂತೆ ಮತಗಳು ಕಾಂಗ್ರೆಸ್‌ ಪರವಾಗಿ ಬಿದ್ದಿವೆ. ಶಿರಾದಲ್ಲಿ ಕಳೆದ ಸಲ ಅಪಪ್ರಚಾರದ ಕಾರಣ ನಮ್ಮ ಅಭ್ಯರ್ಥಿ ಸೋತಿದ್ದರು. ಈ ಸಲ ಜನರು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ’ ಎಂದರು.

ಶಾಲೆಗಳ ಆರಂಭ ಬೇಡ: ‘ಈ ವರ್ಷ ಶಾಲೆಗಳನ್ನು ಆರಂಭಿಸುವುದು ಬೇಡ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಆನ್‌ಲೈನ್‌ನಲ್ಲೇ ಪಾಠ ಮುಂದುವರಿಸಿ ಎಲ್ಲರನ್ನೂ ಉತ್ತೀರ್ಣಗೊಳಿಸಲಿ. ಕೊರೊನಾದಿಂದ ಸಂಪೂರ್ಣವಾಗಿ ಮುಕ್ತವಾದ ಬಳಿಕವೇ ಶಾಲೆಗಳು ಪ್ರಾರಂಭವಾಗಲಿ’ ಎಂದು ಹೇಳಿದರು.

ದೆಹಲಿಯಿಂದ ನನಗೆ ದೊರೆತಿರುವ ಮಾಹಿತಿ ಪ್ರಕಾರ ಉಪಚುನಾವಣೆ ನಂತರ ಬಿಜೆಪಿಯಲ್ಲಿ ಸಿಎಂ ಬದಲಾವಣೆ ಮಾಡ್ತಾರೆ. I am very confident ಯಡಿಯೂರಪ್ಪ...

Posted by Siddaramaiah on Wednesday, November 4, 2020

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು