ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು: ಕಾಂಗ್ರೆಸ್ ಪಾದಯಾತ್ರೆಯಿಂದ ಹೊಟ್ಟೆ ಉರಿ ಇಲ್ಲ– ಎಚ್‌.ಡಿ.ದೇವೇಗೌಡ

ಸಮಸ್ಯೆ ಬಗೆಹರಿಯುವುದಾದರೆ ಮಾಡಲಿ: ಎಚ್‌.ಡಿ.ದೇವೇಗೌಡ
Last Updated 29 ಡಿಸೆಂಬರ್ 2021, 15:42 IST
ಅಕ್ಷರ ಗಾತ್ರ

ಹಾಸನ:‘ಮೇಕೆದಾಟುಯೋಜನೆಜಾರಿಗಾಗಿಕಾಂಗ್ರೆಸ್‌ಹಮ್ಮಿಕೊಂಡಿರುವಪಾದಯಾತ್ರೆಯಿಂದಸಮಸ್ಯೆಬಗೆಹರಿಯುವುದಾದರೆಒಳ್ಳೆಯದು. ಆ ಬಗ್ಗೆ ನನಗೆ ಹೊಟ್ಟೆ ಉರಿ ಇಲ್ಲ’ ಎಂದು ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಹೇಳಿದರು.

ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಬುಧವಾರ ಕುಟುಂಬ ಸಮೇತ ಮನೆ ದೇವರಿಗೆ ಪೂಜೆ ಸಲ್ಲಿಸಿ ಬಳಿಕ ಮಾತನಾಡಿದ ಅವರು, ‘ಕುಮಾರಸ್ವಾಮಿ ಸರ್ಕಾರದಲ್ಲಿ ಡಿ.ಕೆ.ಶಿವಕುಮಾರ್ ಅವರೇ ನೀರಾವರಿ ಸಚಿವರಾಗಿದ್ದರು. ಆಗ ಮಾಡಿದ್ದರೆ ಬಹುಶಃ ನಮಗೇನಾದ್ರೂ ಕೀರ್ತಿ ಬರುತ್ತೆ ಅಂತಾ ಈ ಬಗ್ಗೆ ಯೋಚನೆ ಮಾಡಲಿಲ್ಲವೇ? ನಾನೂ ಹಲವು ಪಾದಯಾತ್ರೆ ಮಾಡಿದ್ದೇನೆ. ರಾಜ್ಯದಲ್ಲಿ ಕೃಷ್ಣ, ಮಹಾದಾಯಿ ಇಲ್ಲವೇ? ಕೇವಲ ಮೇಕೆದಾಟು ವಿಚಾರವೇ ಕಾಂಗ್ರೆಸ್‌ಗೆ ಯಾಕೆ ಮುಖ್ಯ’ ಎಂದು ಪ್ರಶ್ನಿಸಿದರು.

‘ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ಯಾರಿಗೆ ಬೇಕು? ನಾನು ಮುಖ್ಯಮಂತ್ರಿ, ಪ್ರಧಾನಿಯಾಗಿದ್ದೆ. ನನ್ನ ಕಾಲದಲ್ಲಿ ಮತಾಂತರ ಆಗುವ ಒಂದು ಘಟನೆ ನಡೀತಾ? ನನ್ನ ಆಡಳಿತದಲ್ಲಿ ಹಿಂದೂಸ್ತಾನ ಮತ್ತು ಕರ್ನಾಟದಲ್ಲಿ ಮತಾಂತರ ಆಗಿದಿಯಾ? ಈಗ ಯಾಕೆ ಶುರುವಾಯ್ತು. ಅಧಿಕಾರ ನಡೆಸುವವರು ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಆಡಳಿತ ನಡೆಸಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT