ಶುಕ್ರವಾರ, ಆಗಸ್ಟ್ 19, 2022
25 °C

ಸ್ಥಳೀಯ ಸಂಸ್ಥೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಮಾರ್ಗಸೂಚಿ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ನಿಗದಿ ಮಾಡುವ ಸಂಬಂಧ ರಾಜ್ಯ ಸರ್ಕಾರ ಮಾರ್ಗಸೂಚಿಯನ್ನು ಹೊರಡಿಸಿದೆ.

ನಗರ ಸ್ಥಳೀಯ ಸಂಸ್ಥೆಗಳಿಗೆ 2018 ರಿಂದ ಚುನಾವಣೆ ನಡೆಸಿಲ್ಲ, ತ್ವರಿತವಾಗಿ ಚುನಾವಣೆ ನಡೆಸುವ ಉದ್ದೇಶದಿಂದ ಆವರ್ತನೆ ತತ್ವದ ಆಧಾರದ ಮೇಲೆ ಮೀಸಲಾತಿ ನಿಗದಿಪಡಿಸುವ ಬದಲು ಹಿಂದಿನ ಅವಧಿಯ ಮೀಸಲಾತಿ ಪುನರಾವರ್ತನೆ ಆಗದಂತೆ ಮತ್ತು ಆಯಾಯಾ ವರ್ಗಗಳಿಗೆ ಲಭ್ಯವಾಗದಂತೆ ಮೀಸಲಾತಿ ನಿಗದಿ ಮಾಡಬೇಕು ಎಂದು ಅಧಿಸೂಚನೆ ತಿಳಿಸಿದೆ.

ಮಾರ್ಗಸೂಚಿಯ ಪ್ರಮುಖ ಅಂಶಗಳು

* ಕರ್ನಾಟಕ ಮುನ್ಸಿಪಾಲಿಟಿ (ಅಧ್ಯಕ್ಷ ಉಪಾಧ್ಯಕ್ಷ)(ಚುನಾವಣೆ)(ತಿದ್ದುಪಡಿ) ನಿಯಮಾವಳಿ ಪ್ರಕಾರ ಮೀಸಲಾತಿ ನಿಗದಿ ಮಾಡಬೇಕು.

*ಎಸ್‌ಸಿ, ಎಸ್‌ಸಿ ಮಹಿಳೆ, ಎಸ್‌ಟಿ, ಎಸ್‌ಟಿ ಮಹಿಳೆ, ಹಿಂದುಳಿದ ವರ್ಗ–ಎ, ಹಿಂದುಳಿದ ವರ್ಗ–ಎ ಮಹಿಳೆ, ಹಿಂದುಳಿದ ವರ್ಗ–ಬಿ, ಹಿಂದುಳಿದ ವರ್ಗ–ಬಿ ಮಹಿಳೆ ಮತ್ತು ಸಾಮಾನ್ಯ ಮಹಿಳೆಯರಿಗೆ ಈ ಹಿಂದೆ ಮೀಸಲು ನಿಗದಿ ಮಾಡಿದಂತೆ ಅದೇ ಸಮುದಾಯಕ್ಕೆ ಮೀಸಲು ನಿಗದಿ ಮಾಡಬಾರದು.

*ಟಿಎಂಸಿ(ಪುರಸಭೆ)ಯಿಂದ ಸಿಎಂಸಿ(ನಗರಸಭೆ) ಮತ್ತು ಟಿಪಿ(ಪಟ್ಟಣ ಪಂಚಾಯಿತಿ)ಯಿಂದ ಟಿಎಂಸಿಗೆ(ಪುರಸಭೆ) ಮೇಲ್ದರ್ಜೆಗೇರಿಸಲ್ಪಟ್ಟ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ಹಿಂದಿನ ಅವಧಿಯಲ್ಲಿ ಟಿಎಂಸಿ ಮತ್ತು ಟಿಪಿಯಲ್ಲಿ ಇದ್ದಂತೆ ಪರಿಗಣಿಸಬೇಕು.

*ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿಯನ್ನು ಈ ಸಮುದಾಯಗಳ ಅತಿ ಹೆಚ್ಚು ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳನ್ನು ಆಧರಿಸಿ ನಿಗದಿ ಮಾಡಬೇಕು. ಆಯಾ ನಗರ, ಪಟ್ಟಣದ ಒಟ್ಟಾರೆ ಜನಸಂಖ್ಯೆಯ ಹಿನ್ನೆಲೆಯಲ್ಲಿ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು. ಇದಕ್ಕೆ 2011ರ ಜನಗಣತಿಯನ್ನು ಆಧಾರವಾಗಿ ಇಟ್ಟುಕೊಳ್ಳಬೇಕು.

*ಇತರ ವರ್ಗಗಳ ಮೀಸಲಾತಿಯನ್ನು ಹಿಂದಿನ ಸಾಲಿನಲ್ಲಿ ನಿಗದಿ ಮಾಡಿದ್ದ ಮೀಸಲು ಪುನರಾವರ್ತನೆ ಆಗದಂತೆ ಕ್ರಮ ತೆಗೆದುಕೊಳ್ಳಬೇಕು (ಸಾಮಾನ್ಯ ವರ್ಗ ಹೊರತುಪಡಿಸಿ).

* ಮಹಿಳಾ ಅಭ್ಯರ್ಥಿಗಳು ಮಹಿಳಾ ಮೀಸಲಾತಿ ಇಲ್ಲದ ಯಾವುದೇ ಕ್ಷೇತ್ರದಿಂದಾದರೂ ಸ್ಪರ್ಧಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು