ಭಾನುವಾರ, ಜೂನ್ 20, 2021
28 °C

ಮಲಬಾರ್‌: ಫೆ.18ರವರೆಗೆ ಜೆಮ್‌ಸ್ಟೋನ್ಸ್‌ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಲಬಾರ್ ಗೋಲ್ಡ್‌ ಆ್ಯಂಡ್ ಡೈಮಂಡ್ಸ್‌ನ ಎಲ್ಲ ಮಳಿಗೆಗಳಲ್ಲಿ ‘ಜೆಮ್‌ಸ್ಟೋನ್ಸ್‌ ಜ್ಯುವೆಲ್ಲರಿ ಉತ್ಸವ’ವನ್ನು ಫೆ.18ರವರೆಗೆ ಆಯೋಜಿಸಲಾಗಿದೆ.

‘ಸಂಸ್ಥೆಯ ಉಪ ಬ್ರ್ಯಾಂಡ್‌ನ ಸಂಗ್ರಹಗಳಾದ ಪ್ರೀಶಿಯಾ, ರತ್ನದ ಆಭರಣಗಳು ಮತ್ತು ಅನ್‌ಕಟ್‌ ವಜ್ರದ ಆಭರಣಗಳು, ಚಿನ್ನದಲ್ಲಿ ಹೆಣೆದ ಆಭರಣಗಳು, ಎಮರಾಲ್ಡ್, ರೂಬಿ, ಸಫೈರ್ ಹಾಗೂ ಚಿನ್ನದಿಂದ ತಯಾರಿಸಲಾದ ಆಭರಣಗಳನ್ನು ಉತ್ಸವದಲ್ಲಿ ಅನಾವರಣಗೊಳಿಸಲಾಗಿದೆ’ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. 

‘ಆಭರಣಗಳ ಮೇಲೆ ಉಚಿತ ನಿರ್ವಹಣೆ, ಒಂದು ವರ್ಷದ ವಿಮೆ, ಬೈಬ್ಯಾಕ್ ಗ್ಯಾರಂಟಿ ಹಾಗೂ ವಿವರಗಳೊಂದಿಗೆ ಪಾರದರ್ಶಕ ಬೆಲೆಯ ಸೌಲಭ್ಯಗಳನ್ನು ಗ್ರಾಹಕರು ಉತ್ಸವದಲ್ಲಿ ಪಡೆಯಲಿದ್ದಾರೆ’.

‘ಎಲ್ಲ ಶ್ರೇಣಿಯ ಆಭರಣಗಳನ್ನು ಹೊರ ತಂದಿರುವ ಸಂಸ್ಥೆಯು ಎಲ್ಲ ವಯೋಮಾನದವರ ಅಭಿರುಚಿಯನ್ನು ಪೂರೈಸುತ್ತದೆ. ವಿವಾಹದ ಖರೀದಿಗೆ ವಿಶೇಷವಾದ ಪ್ರಯೋಜನಗಳನ್ನು ನೀಡುತ್ತಿದ್ದು, ಶೇ 10ರಷ್ಟು ಮುಂಗಡ ಬುಕಿಂಗ್ ಸೌಲಭ್ಯವೂ ಇದೆ. ಸಂಸ್ಥೆ ಪ್ರಸ್ತುತ 10 ದೇಶಗಳಲ್ಲಿ 270ಕ್ಕೂ ಹೆಚ್ಚು ಮಳಿಗೆಗಳೊಂದಿಗೆ ಬಲವಾದ ಜಾಲವನ್ನು ಹೊಂದಿದೆ’ ಎಂದು ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು