Live | ಮೇಕೆದಾಟು: ಕಾಂಗ್ರೆಸ್‌ನಿಂದ ‘ನೀರಿಗಾಗಿ ನಡಿಗೆ’, ಸಂಗಮದಿಂದ ಪಾದಯಾತ್ರೆ ಆರಂಭ
LIVE
ಕನಕಪುರ ತಾಲ್ಲೂಕಿನ ಕಾವೇರಿಯ ತಟ, ಸಂಗಮ ಬಳಿಯಿಂದ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಆರಂಭಿಸಲಿದೆ. ಪಾದಯಾತ್ರೆಗೆ ತಡೆಯೊಡ್ಡಲು ರಾಜ್ಯ ಸರ್ಕಾರವೂ ಪ್ರತಿತಂತ್ರ ರೂಪಿಸತೊಡಗಿದ್ದು, ‘ನೀರಿಗಾಗಿ ನಡಿಗೆ’ ಸೋಮವಾರಕ್ಕೂ ಮುಂದುವರಿಯುತ್ತದೆಯೇ ಎಂಬುದು ಸದ್ಯದ ಕುತೂಹಲವಾಗಿದೆ.ಕನಕಪುರದಲ್ಲಿ ಶನಿವಾರ ಸಂಜೆ ಕಾಂಗ್ರೆಸ್ ನಾಯಕರೆಲ್ಲ ಒಗ್ಗಟ್ಟಾಗಿ ಪಾದಯಾತ್ರೆಯ ರಣಕಹಳೆ ಊದಿದರು. ‘ಜೈಲಿಗೆ ಕಳುಹಿಸಿದರೂ ಸಿದ್ಧ. ಎಲ್ಲಿ ನಮ್ಮನ್ನು ಬಂಧಿಸಿ ಬಿಡುಗಡೆ ಮಾಡುತ್ತೀರೋ ಅಲ್ಲಿಂದಲೇ ಮತ್ತೆ ನಡೆಯುತ್ತೇವೆ’ ಎಂದು ಗುಡುಗಿದರು. ಇಂದು ಕಾಂಗ್ರೆಸ್‌ನ ನೂರಕ್ಕೂ ಹೆಚ್ಚು ಶಾಸಕರು, ವಿಧಾನ ಪರಿಷತ್ ಸದಸ್ಯರ ಜೊತೆಗೆ ಜಿಲ್ಲೆಯ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.