ಸೋಮವಾರ, ಜೂನ್ 21, 2021
28 °C

ಕೇಂದ್ರದಿಂದ ರೆಮ್‌ಡೆಸಿವಿರ್‌ ಮರುಹಂಚಿಕೆ: ರಾಜ್ಯಕ್ಕೆ 1.22 ಲಕ್ಷ ಡೋಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೆಮ್‌ಡೆಸಿವಿರ್‌-ಸಾಂದರ್ಭಿಕ ಚಿತ್ರ

ಬೆಂಗಳೂರು: ರೆಮ್‌ಡೆಸಿವಿರ್‌ ಔಷಧವನ್ನು 19 ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಶನಿವಾರ ಮರುಹಂಚಿಕೆ ಮಾಡಿದೆ. ಇದರಿಂದ ಕರ್ನಾಟಕಕ್ಕೆ 1.22 ಲಕ್ಷ ಡೋಸ್‌ (Vials) ರೆಮ್‌ಡೆಸಿವಿರ್‌ ದೊರೆಯಲಿದೆ.

ರೆಮ್‌ಡೆಸಿವಿರ್‌ ಮರುಹಂಚಿಕೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಸದಾನಂದ ಗೌಡ ಪ್ರಕಟಿಸಿದ್ದು, 'ವಿವಿಧ ರಾಜ್ಯಗಳ ಬೇಡಿಕೆಗೆ ಅನುಗುಣವಾಗಿ ಇಂದು ರೆಮ್‌ಡೆಸಿವಿರ್‌ ಮರುಹಂಚಿಕೆ ಮಾಡಿದ್ದೇವೆ. ಕರ್ನಾಟಕದ ಪಾಲು 1.22 ಲಕ್ಷ ವೈಯಲ್ಸ್‌ಗೆ ಏರಿಕೆಯಾಗಿದೆ' ಎಂದಿದ್ದಾರೆ.

ಔಷಧ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಉನ್ನತಾಧಿಕಾರದ ಸಮಿತಿಯು ಈ ನಿರ್ಣಯ ಕೈಗೊಂಡಿದ್ದು, 'ಕೊರೊನಾ ವಿರುದ್ಧದ ಹೋರಾಟದಲ್ಲಿ ರಾಜ್ಯಕ್ಕೆ ನಾವು ಸಂಪೂರ್ಣ ಸಹಕಾರ, ನೆರವು ನೀಡುತ್ತೇವೆ' ಎಂದು ಟ್ವೀಟಿಸಿದ್ದಾರೆ.

ಅತಿ ಹೆಚ್ಚು ಕೋವಿಡ್‌ ಪ್ರಕರಣಗಳು ಪತ್ತೆಯಾಗಿರುವ ಮಹಾರಾಷ್ಟ್ರಕ್ಕೆ 4.35 ಲಕ್ಷ ಹಾಗೂ ಗುಜರಾತ್‌ಗೆ 1.65 ಲಕ್ಷ, ಉತ್ತರ ಪ್ರದೇಶಕ್ಕೆ 1.61 ಲಕ್ಷ, ಮಧ್ಯಪ್ರದೇಶಕ್ಕೆ 95 ಸಾವಿರದಷ್ಟು ಡೋಸ್‌ಗಳನ್ನು ಕೇಂದ್ರ ಸರ್ಕಾರ ಹಂಚಿಕೆ ಮಾಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು