ಆಡಳಿತದಲ್ಲಿ ಸಿಎಂ ಕುಟುಂಬದ ಹಸ್ತಕ್ಷೇಪ ಇಲ್ಲ: ಗಣಿ ಸಚಿವ ಮುರುಗೇಶ ನಿರಾಣಿ

ಚಿತ್ರದುರ್ಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಸಚಿವನಾಗಿ ಆರು ತಿಂಗಳ ಅನುಭವದಿಂದಲೇ ಈ ಮಾತು ಹೇಳುತ್ತಿದ್ದೇನೆ ಎಂದು ಗಣಿ ಸಚಿವ ಮುರುಗೇಶ ನಿರಾಣಿ ತಿಳಿಸಿದರು.
ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಈ ವಯಸ್ಸಿನಲ್ಲಿಯೂ ಯಡಿಯೂರಪ್ಪ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಅವರು ಆನೆ ಇದ್ದಂತೆ. ಸೊಂಡಿಲು, ಕಾಲು, ಬಾಲ ಮುಟ್ಟಿದವರಿಗೆ ಒಂದೊಂದು ರೀತಿ ಅನುಭವ ಆಗುತ್ತದೆ. ನೋಡುವ ದೃಷ್ಟಿಕೋನವೂ ಮುಖ್ಯ’ ಎಂದು ಪ್ರತಿಕ್ರಿಯೆ ನೀಡಿದರು.
‘ಲಿಂಗಾಯತ ಸಮುದಾಯ ಮುನ್ನೆಲೆಗೆ ಬಂದಿದ್ದೇ ಯಡಿಯೂರಪ್ಪ ಅವರಿಂದ. ಅವರು ಮುಖ್ಯಮಂತ್ರಿ ಆಗಿರುವ ಕಾರಣಕ್ಕೆ ನಮ್ಮಂತವರು ಸಚಿವರಾಗಿದ್ದೇವೆ. ಅವರಲ್ಲಿ ಇರುವ ಒಳ್ಳೆಯ ಗುಣಗಳನ್ನು ನೋಡಬೇಕು. ಒಂದೆರಡು ತಪ್ಪುಗಳು ಆಗಿದ್ದರೆ ಕುಳಿತು ಚರ್ಚಿಸಲು ಅವಕಾಶವಿದೆ. ಅಂತಹ ತಪ್ಪುಗಳನ್ನು ತಿದ್ದಿಕೊಳ್ಳಲು ಅವರೂ ಸಿದ್ಧರಿದ್ದಾರೆ. ಕಿರಿಯ ವಯಸ್ಸಿನವರು ಮುಖ್ಯಮಂತ್ರಿ ಟೀಕಿಸುವುದು ಸರಿಯಲ್ಲ’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.