ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಧಿಕ ಪರಾಮರ್ಶೆಗೊಳಪಟ್ಟ ಪ್ರವಾಸಿ ತಾಣ; ತಾಜ್‌ ಮಹಲ್‌ ಮೀರಿಸಿದ ಮೈಸೂರು ಅರಮನೆ!

ಗೂಗಲ್‌ ಮ್ಯಾಪ್‌ನಲ್ಲಿ ಅತಿ ಹೆಚ್ಚು ಪರಾಮರ್ಶೆಗೊಳಪಟ್ಟ ವಿಶ್ವ ಪ್ರವಾಸಿ ತಾಣಗಳಲ್ಲಿ 15ನೇ ಸ್ಥಾನ
Last Updated 20 ಫೆಬ್ರುವರಿ 2022, 1:45 IST
ಅಕ್ಷರ ಗಾತ್ರ

ಮೈಸೂರು: ಜಗತ್ತಿನ ಅಸಂಖ್ಯಾತ ಪ್ರವಾಸಿಗರನ್ನು ಸೆಳೆಯುತ್ತಿರುವ ಆಗ್ರಾದ ತಾಜ್‌ ಮಹಲ್‌ಗಿಂತ ಮೈಸೂರು ಅರಮನೆಯು ಗೂಗಲ್‌ ಮ್ಯಾಪ್‌ನಲ್ಲಿ ಹೆಚ್ಚು ಪರಾಮರ್ಶೆಗೊಳಪಟ್ಟಿದೆ. ಅತ್ಯಧಿಕ ಪರಾಮರ್ಶೆಗೊಳಪಟ್ಟ ಪ್ರವಾಸಿ ತಾಣಗಳಲ್ಲಿ ವಿಶ್ವದಲ್ಲೇ ಅರಮನೆಯು 15ನೇ ಸ್ಥಾನದಲ್ಲಿದೆ.

ಗೂಗಲ್‌ ಮ್ಯಾಪ್‌ನಲ್ಲಿ ಅತಿ ಹೆಚ್ಚುಪರಾಮರ್ಶಿತವಾದ ಅಗ್ರ 20 (ಮೋಸ್ಟ್‌ ರಿವ್ಯೂವ್ಡ್‌) ತಾಣಗಳ ಪಟ್ಟಿಯನ್ನುwww.top-rated.online ವೆಬ್‌ಸೈಟ್‌ ಪ‍್ರಕಟಿಸಿದ್ದು, ಅರಮನೆಗೆ 1.93 ಲಕ್ಷ ಹಾಗೂ ಪ್ರೇಮಸೌಧ ತಾಜ್‌ ಮಹಲ್‌ಗೆ 1.87 ಲಕ್ಷ ಪರಾಮರ್ಶೆ ದೊರಕಿದೆ.

ಮೆಕ್ಕಾದ ಮಸೀದ್‌ ಅಲ್‌ ಹರಮ್‌ ಮೊದಲ ಸ್ಥಾನ ಪಡೆದಿದ್ದು, 3.31 ಲಕ್ಷ ಪರಾಮರ್ಶೆಗಳು ಲಭಿ
ಸಿವೆ. ಮುಂಬೈನ ಗೇಟ್‌ವೇ ಆಫ್‌ ಇಂಡಿಯಾ (2.58 ಲಕ್ಷ ಪರಾಮರ್ಶೆ)5ನೇ ಸ್ಥಾನ ಹಾಗೂ ನವದೆಹಲಿಯ ಇಂಡಿಯಾ ಗೇಟ್‌ (2.01 ಲಕ್ಷ ಪರಾಮರ್ಶೆ) 14ನೇ ಸ್ಥಾನ ಗಿಟ್ಟಿಸಿಕೊಂಡಿವೆ.

‘ದಸರೆ, ಮಾಗಿ ಉತ್ಸವ, ಯುಗಾದಿ ಸಂಗೀತ, ಯೋಗ ದಿನ ಸೇರಿ ಅರಮನೆಯಲ್ಲಿ ವರ್ಷಕ್ಕೆ ನಾಲ್ಕು ಕಾರ್ಯಕ್ರಮ ಆಯೋಜಿಸುತ್ತೇವೆ. ವಾರದಲ್ಲಿ ಆರು ದಿನ ಧ್ವನಿ ಮತ್ತುಬೆಳಕು ಕಾರ್ಯಕ್ರಮ ನಡೆಯುತ್ತಿದ್ದು, ಪ್ರವಾಸಿಗರಿಗೆ ಬಹಳ ಇಷ್ಟವಾಗುತ್ತಿದೆ’ ಎಂದು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್‌.ಸುಬ್ರಮಣ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT