ಶುಕ್ರವಾರ, ಡಿಸೆಂಬರ್ 3, 2021
20 °C

Mysuru Dasara: ಜಂಬೂ ಸವಾರಿ ಮೆರವಣಿಗೆ: ಗಮನ ಸೆಳೆದ ಕೋವಿಡ್ ಸ್ತಬ್ಧಚಿತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಅರಮನೆ ಆವರಣಕ್ಕೆ ಸೀಮಿತವಾಗಿ ನಡೆಯುತ್ತಿರುವ ದಸರಾ ಮೆರವಣಿಗೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದು, ಸ್ತಬ್ಧಚಿತ್ರಗಳು  ಗಮನ ಸೆಳೆಯುತ್ತಿವೆ. ಕಲಾವಿದರು ವೈವಿಧ್ಯಮಯ ಪ್ರದರ್ಶನ ನೀಡುತ್ತಿದ್ದಾರೆ. 

ಮುಡಾ ವತಿಯಿಂದ ಮೈಸೂರಿನಲ್ಲಿ ಸದ್ಯದಲ್ಲೇ ನಿರ್ಮಾಣವಾಗಲಿರುವ ಗುಂಪು ವಸತಿ ಯೋಜನೆಯನ್ನು  ಈ ಬಾರಿ ಸ್ತಬ್ಧಚಿತ್ರದಲ್ಲಿ  ಬಿಂಬಿಸಿ ಪ್ರಚಾರ ನೀಡಲಾಗಿದೆ. 

ಸ್ವಾತಂತ್ರ್ಯದ ಅಮೃತಮಹೋತ್ಸವ  ಅಂಗವಾಗಿ ನಿರ್ಮಿಸಿರುವ ಸ್ತಬ್ಧಚಿತ್ರ  ಆಕರ್ಷಕವಾಗಿದೆ. 

ಕೋವಿಡ್‌ ಮೂರನೇ ಅಲೆ ಕುರಿತು ಜಾಗೃತಿ ಮೂಡಿಸುವ ಸ್ತಬ್ಧಚಿತ್ರ ಕೂಡ ಮೆರವಣಿಗೆಯಲ್ಲಿ ಹಾದು ಹೋಗುತ್ತಿದೆ. ಪರಿಸರ ಸಂರಕ್ಷಣೆ ಮತ್ತು ಅದರ ಪ್ರಾಮುಖ್ಯತೆ ಬಿಂಬಿಸುವ ಸ್ತಬ್ಧಚಿತ್ರ ಗಮನ ಸೆಳೆಯುತ್ತಿದೆ.  ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸ್ತಬ್ಧಚಿತ್ರ ಹಾಗೂ ಆನೆ ಗಾಡಿ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗುತ್ತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು