ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಜಿಟಿ: ರಾಜ್ಯ ಸರ್ಕಾರಕ್ಕೆ ₹2,900 ಕೋಟಿ ದಂಡ

ಅವೈಜ್ಞಾನಿಕ ಕಸ ವಿಲೇವಾರಿ*ಎನ್‌ಜಿಟಿ ಆದೇಶ
Last Updated 15 ಅಕ್ಟೋಬರ್ 2022, 18:50 IST
ಅಕ್ಷರ ಗಾತ್ರ

ನವದೆಹಲಿ: ಪರಿಸರಕ್ಕೆ ಹಾನಿ ಉಂಟು ಮಾಡುವ ಘನ ಹಾಗೂ ದ್ರವ್ಯ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವ ಹಿಸದ ಕಾರಣಕ್ಕೆ ಕರ್ನಾಟಕ ಸರ್ಕಾರಕ್ಕೆ ಪರಿಸರ ಪರಿಹಾರದಲ್ಲಿ ₹2,900 ಕೋಟಿ ದಂಡ ವಿಧಿಸಿ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ (ಎನ್‌ಜಿಟಿ) ಪ್ರಧಾನ ಪೀಠವು ಆದೇಶಿಸಿದೆ.

ವೈಜ್ಞಾನಿಕವಾಗಿ ಕಸ ವಿಲೇವಾರಿ ಆಗದ ಬಗ್ಗೆ ಸುಪ್ರೀಂ ಕೋರ್ಟ್‌ 2014ರಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.

ಈ ಸಂಬಂಧ 2017ರಲ್ಲಿ ಆದೇಶ ಹೊರಡಿಸಿತ್ತು. ರಾಜ್ಯಗಳು ಕೈಗೊಂಡ ಕ್ರಮಗಳ ಬಗ್ಗೆ ನಿಗಾ ಇಡುವಂತೆ ಎನ್‌ಜಿಟಿಗೆ ಸೂಚಿಸಿತ್ತು. 2016ರ ಕಸ ವಿಲೇವಾರಿ ನಿಯಮ (ತಿದ್ದುಪಡಿ) ಅನುಷ್ಠಾನಕ್ಕೆ ರಾಜ್ಯ ಸರ್ಕಾರಗಳು ಕೈಗೊಂಡ ಕ್ರಮಗಳ ಬಗ್ಗೆ ಎನ್‌ಜಿಟಿ ಪ್ರಧಾನ ಪೀಠವು ನಿಗಾ ಇರಿಸಿದೆ. ವೈಜ್ಞಾನಿಕ ಕಸ ವಿಲೇವಾರಿಗೆ ರಾಜ್ಯ ಸರ್ಕಾರಗಳಿಗೆ ಪೀಠವು ಹಲವು ಗಡುವುಗಳನ್ನು ನೀಡಿತ್ತು. ಕಸ ವಿಲೇವಾರಿಗೆ ಕೈಗೊಂಡ ಉಪಕ್ರಮಗಳ ಬಗ್ಗೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಎನ್‌ಜಿಟಿಗೆ ಮಂಗಳವಾರ ಪ್ರಮಾಣಪತ್ರ ಸಲ್ಲಿಸಿದ್ದರು.

ಈ ವರದಿಯನ್ನು ಪರಿಶೀಲಿಸಿದ ಎನ್‌ಜಿಟಿ ಮುಖ್ಯಸ್ಥ ನ್ಯಾಯಮೂರ್ತಿ ಆದರ್ಶ ಕುಮಾರ್‌ ಗೋಯೆಲ್‌, ನ್ಯಾಯಮೂರ್ತಿ ಸುಧೀರ್ ಅಗರವಾಲ್‌, ತಜ್ಞ ಸದಸ್ಯರಾದ ಪ್ರೊ.ಸೆಂಥಿಲ್‌ ವೇಲ್‌, ಡಾ.ಅಫ್ರೋಜ್‌ ಅಹ್ಮದ್‌ ಅವರನ್ನು ಒಳಗೊಂಡ ಪೀಠವು, ‘ದ್ರವ ಹಾಗೂ ಘನ ತ್ಯಾಜ್ಯ ವಿಲೇವಾರಿಯಲ್ಲಿ ಗಣನೀಯ ಸುಧಾರಣೆ ಆಗಿಲ್ಲ. ಇದರಿಂದ ಪರಿಸರದ ಮೇಲೆ ಭಾರಿ ಹಾನಿ ಆಗುತ್ತಿದೆ’ ಎಂದು ಪೀಠ ಅಭಿಪ್ರಾಯಪಟ್ಟಿದೆ.

‘ಕೇಂದ್ರ ಸರ್ಕಾರದ 2016ರ ಘನತ್ಯಾಜ್ಯ ನಿಯಮದ (ತಿದ್ದುಪಡಿ) ಪ್ರಕಾರ, ಹಸಿ ಕಸ ವಿಂಗಡಿಸಿ ಗೊಬ್ಬರ ಮಾಡಬೇಕು ಹಾಗೂ ಒಣ ಕಸವನ್ನು ವಿಲೇವಾರಿ ಮಾಡಬೇಕು. ಭೂಭರ್ತಿ ಘಟಕಗಳಿಗೆ ಮಿಶ್ರ ಕಸ ಸಾಗಿಸುವಂತಿಲ್ಲ. ಆದರೆ, ಕರ್ನಾಟಕದಲ್ಲಿ ಈಗಲೂ 191 ಭೂಭರ್ತಿ ಘಟಕಗಳಿದ್ದು, ಪ್ರತಿನಿತ್ಯ ಅಪಾರ ಪ್ರಮಾಣದ ಕಸವನ್ನು ಈ ಘಟಕಗಳಲ್ಲಿ ಸುರಿಯಲಾಗುತ್ತಿದೆ. ಕೊಳಚೆ
ನೀರು ಜಲಮೂಲಗಳಿಗೆ ಸೇರುತ್ತಿದೆ. ಜಲಮೂಲಗಳ ಮಾಲಿನ್ಯ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕೈಗೊಂಡ ಉಪಕ್ರಮ
ಗಳು ಸಾಲದು. ತ್ಯಾಜ್ಯ ನೀರುಸಂಸ್ಕರಣಾ ಘಟಕಗಳ ನಿರ್ಮಾಣಕಾಮಗಾರಿ ಸಹಗಡುವಿನೊಳಗೆ ಆಗಿಲ್ಲ’ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿದೆ.

‘1,427 ದಶಲಕ್ಷ ಲೀಟರ್ ತ್ಯಾಜ್ಯ ನೀರು ಸಂಸ್ಕರಣೆ ಆಗುತ್ತಿಲ್ಲ. ಇದಕ್ಕೆ ₹2,856 ಕೋಟಿ ಪರಿಹಾರ ಪಾವತಿಸಬೇಕು. ಭೂಭರ್ತಿ ಘಟಕಗಳಲ್ಲಿ 178.50 ಲಕ್ಷ ಟನ್‌ ಹಳೆಯ ಕಸ ಹಲವು ಸಮಯಗಳಿಂದ ಉಳಿದುಕೊಂಡಿದೆ. ಈ ಕಸವನ್ನು ವೈಜ್ಞಾನಿಕ ವಿಲೇವಾರಿ ಮಾಡದ ಕಾರಣಕ್ಕೆ ₹540 ಕೋಟಿ ಪಾವತಿಸಬೇಕು. ಒಟ್ಟು ಪರಿಹಾರದ ಮೊತ್ತ ₹3,400 ಕೋಟಿ ಆಗಲಿದೆ. ಬೆಂಗಳೂರಿನ ಚಂದಾಪುರ ಕೆರೆ ಸಂರಕ್ಷಣೆಗೆ ಕ್ರಮ ಕೈಗೊಳ್ಳದ ಕಾರಣಕ್ಕೆ ₹500 ಕೋಟಿ ಪರಿಹಾರವನ್ನು ಅಕ್ಟೋಬರ್‌ 10ರಂದು ವಿಧಿಸಲಾಗಿದೆ. ಕರ್ನಾಟಕ ಸರ್ಕಾರವು ಎರಡು ತಿಂಗಳೊಳಗೆ ಪ್ರತ್ಯೇಕ ಖಾತೆ ತೆರೆದು ₹2900 ಕೋಟಿಯನ್ನು ಅದರಲ್ಲಿ ಇಡಬೇಕು. ಮುಖ್ಯ ಕಾರ್ಯದರ್ಶಿ ಅವರು ಮೇಲ್ವಿಚಾರಣೆ ವಹಿಸಬೇಕು. ಈ ಮೊತ್ತವನ್ನು ಕಸದ ವೈಜ್ಞಾನಿಕ ವಿಲೇವಾರಿಗೆ ಬಳಸಿ 6 ತಿಂಗಳಲ್ಲಿ ಪ್ರಗತಿ ತೋರಿಸಬೇಕು’ ಎಂದು ಪೀಠ ನಿರ್ದೇಶಿಸಿದೆ. ವಿವಿಧ ಇಲಾಖೆಗಳ ಸಹಯೋಗದಲ್ಲಿ ಮುಖ್ಯ ಕಾರ್ಯದರ್ಶಿ ಯವರು ಕಾರ್ಯಕ್ರಮಗಳ ಯೋಜನೆ, ಕಾರ್ಯಗತಗೊಳಿಸುವಿಕೆ, ಮೇಲ್ವಿ ಚಾರಣೆಗೆ ಒಂದು ತಿಂಗಳೊಳಗೆ ಸಮಗ್ರ ಯೋಜನೆ ರೂಪಿಸಬೇಕು ಎಂದಿದೆ.

ಪರಿಸರಕ್ಕೆ ನಿರಂತರ ಹಾನಿ ನಿವಾರಿಸಲು, ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಅನುಸರಿಸಲು ಎನ್‌ಜಿಟಿ ಕಾಯ್ದೆಯ ಸೆಕ್ಷನ್ 15 ರ ಅಡಿ ಪರಿಹಾರ ನೀಡುವುದು ಅಗತ್ಯವಾಗಿದೆ ಎಂದಿದೆ. ರಾಜ್ಯವು ಕಾನೂನು ಮತ್ತು ನಾಗರಿಕರಿಗೆ ತಮ್ಮ ಕರ್ತವ್ಯ
ಗಳನ್ನು ಅರಿತುಕೊಳ್ಳಲು ಮತ್ತು ತಮ್ದದೇ ಹಂತದಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಲು ಇದು ಉತ್ತಮ ಸಮಯ ಎಂದು ಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT