ಬೆಂಗಳೂರು: ನಟ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ– ರೇವತಿ ದಂಪತಿಗೆ ಪುತ್ರ ಜನಿಸಿದ್ದಾನೆ. ಪುತ್ರನ ಆಗಮನಕ್ಕೆ ಖುಷಿಯಾಗಿರುವ ನಿಖಿಲ್. ಮಗುವನ್ನು ಕೈಯಲ್ಲಿ ಎತ್ತಿಕೊಂಡಿರುವ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ನಿಖಿಲ್ ಪತ್ನಿ ರೇವತಿ ಅವರ ಸೀಮಂತ ನಡೆದಿತ್ತು.
‘ನಮ್ಮ ಬದುಕಿನ ಈ ವಿಶೇಷ ಸಂದರ್ಭವನ್ನು ಜಗತ್ತಿನ ಎಲ್ಲರೊಂದಿಗೆ ಹಂಚಿಕೊಳ್ಳಲು ತುಂಬಾ ಸಂತೋಷವೆನಿಸುತ್ತಿದೆ. ಲವ್‌ಯೂ ಮೈ ಸನ್’ ಎಂದು ನಿಖಿಲ್ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ನಿಖಿಲ್ ಸಂಭ್ರಮ, ಮಗುವಿನ ಆಗಮನಕ್ಕೆ ಅಭಿಮಾನಿಗಳು ಶುಭಕೋರಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.