ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಗ್ಲ ಪದ ಬಳಕೆಯಿಂದ ಅಪಾರ್ಥ: ನಿರಂಜನಾನಂದಪುರಿ ಸ್ವಾಮೀಜಿ ಕಳವಳ

ಕನ್ನಡ ಭಾಷೆಯ ಬಳಕೆ ಬಗ್ಗೆ ನಿರಂಜನಾನಂದಪುರಿ ಸ್ವಾಮೀಜಿ ಕಳವಳ
Last Updated 7 ಜನವರಿ 2023, 15:45 IST
ಅಕ್ಷರ ಗಾತ್ರ

ಕನಕ-ಶರೀಫ-ಸರ್ವಜ್ಞ ಪ್ರಧಾನ ವೇದಿಕೆ (ಹಾವೇರಿ):: ‘ಸರ್ ನಮ್ಮ ಡಾಟರ್‌ದು ಸೆಕೆಂಡ್‌ ಮ್ಯಾರೇಜ್. ನೀವು ಫಸ್ಟ್‌ ನೈಟ್‌ಗೆ ಬನ್ನಿ...’

ಆಂಗ್ಲ ಪದಗಳ ಬಳಕೆಯಿಂದ ಆಗುವ ಅನರ್ಥದ ಬಗ್ಗೆ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಅವರು ನೀಡಿದ ಉದಾಹರಣೆ ಇದು. 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಶನಿವಾರ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

‘ಕನ್ನಡ ಕೆಟ್ಟ ಪರಿಸ್ಥಿತಿಗೆ ಬಂದು ನಿಂತಿದೆ. ಕನ್ನಡವನ್ನು ಯಾವರೀತಿ ಬಳಸಬೇಕು ಎಂಬ ಅರಿವು ನಮಗೆ ಇರಬೇಕು. ಆಂಗ್ಲ ಪದಗಳ ಬಳಕೆಯಿಂದ ಆಗುವ ಅಪಾರ್ಥಗಳ ಬಗ್ಗೆ ಈ ವೇದಿಕೆಯಲ್ಲಿ ಹೇಳಬೇಕೋ, ಬೇಡವೋ ಗೊತ್ತಿಲ್ಲ’ ಎನ್ನುತ್ತಲೇ ಉದಾಹರಣೆ ನೀಡಿದರು.

‘ಆಂಗ್ಲಭಾಷೆಯ ಅತಿಯಾದ ಬಳಕೆಯಿಂದ ಸಂವಹನ ಅಪಾರ್ಥಕ್ಕೆ ಒಳಗಾಗುತ್ತಿದೆ. ವ್ಯಕ್ತಿಯೊಬ್ಬರು ಮದುವೆ ಆಮಂತ್ರಣ ಪತ್ರಿಕೆ ನೀಡುವಾಗ ಆಂಗ್ಲ ಪದಗಳ ಬಳಕೆ ಅಪಾರ್ಥಕ್ಕೆ ಕಾರಣವಾಯಿತು. ‘ನನ್ನ ಮಗಳದ್ದು ಎರಡನೇ ತಾರೀಖು ಮದುವೆ. ಒಂದನೇ ತಾರೀಖಿಗೆ ಬನ್ನಿ’ ಎಂದು ಅಚ್ಚ ಕನ್ನಡದಲ್ಲಿ ಹೇಳಿದ್ದರೆ ಅನರ್ಥ ಆಗುತ್ತಿರಲಿಲ್ಲ. ಕನ್ನಡ ಅತ್ಯಂತ ಕೆಟ್ಟ ಸ್ಥಿತಿ ತಲುಪಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT