ಮಂಗಳವಾರ, ನವೆಂಬರ್ 30, 2021
23 °C

ಈಗಿನದ್ದು ಡುಪ್ಲಿಕೇಟ್ ಕಾಂಗ್ರೆಸ್‌: ರೇವಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂದಗಿ (ವಿಜಯಪುರ): ‘ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಈಗ ಅಯೋಮಯ. ಜೆಡಿಎಸ್‌ನ ವ್ಯಕ್ತಿಯನ್ನು ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನಾಗಿ ಮಾಡಿರುವುದು ನೋಡಿದರೆ ಆ ಪಕ್ಷಕ್ಕೆ ಎಂಥ ದುಸ್ಥಿತಿ ಬಂದಿದೆ ಎಂಬುದು ಗೊತ್ತಾಗುತ್ತದೆ. ಈಗಿನದ್ದು ಮೂಲ ಕಾಂಗ್ರೆಸ್ ಅಲ್ಲ;ಡುಪ್ಲಿಕೇಟ್ ಕಾಂಗ್ರೆಸ್’ ಎಂದು ಶಾಸಕ ಎಚ್.ಡಿ.ರೇವಣ್ಣ ಟೀಕಿಸಿದರು.

ಇಲ್ಲಿ ಶುಕ್ರವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷ ಕೋಮುವಾದಿಗಳ ಜೊತೆ ಮಂಡ್ಯ-ತುಮಕೂರು ಚುನಾವಣೆಯಲ್ಲಿ ಶಾಮೀಲಾಗಿ ಹೊಂದಾಣಿಕೆ ರಾಜಕೀಯ ಮಾಡಿಕೊಂಡಿತು. ಕುಮಾರಸ್ವಾಮಿಗೆ ಮುಖ್ಯಮಂತ್ರಿಯಾಗುವ ಆಸೆ ಇರದಿದ್ದರೂ ಕಾಂಗ್ರೆಸ್ ನವರೇ ಬಂದು ಕೋಮುವಾದಿಗಳನ್ನು ದೂರಿಡಲು ಮುಖ್ಯಮಂತ್ರಿಯಾಗಲು ಕೇಳಿಕೊಂಡಿದ್ದರು. ಮನೆ, ಮನೆಯಲ್ಲಿ ಒಡೆದು ಆಳುವಂತಹ ಕೀಳುಮಟ್ಟದ ಸಂಸ್ಕೃತಿ ಕಾಂಗ್ರೆಸ್ ಪಕ್ಷದ್ದು’ ಎಂದು ವಾಗ್ದಾಳಿ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು