ಶನಿವಾರ, ಜನವರಿ 23, 2021
22 °C

ರೋಹಿಣಿ ಗೋಡ್‌ಬೋಲೆಗೆ ಫ್ರಾನ್ಸ್‌ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಫ್ರಾನ್ಸ್‌ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಆರ್ಡೆ ನ್ಯಾಷನಲ್‌ ಡ್ಯು ಮೆರಿಟೆ’ಗೆ ಭಾರತೀಯ ಭೌತವಿಜ್ಞಾನಿ ರೋಹಿಣಿ ಗೋಡ್‌ಬೋಲೆ ಭಾಜನರಾಗಿದ್ದಾರೆ.

ಇವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ(ಐಐಎಸ್‌ಸಿ) ಸೆಂಟರ್‌ ಫಾರ್ ಹೈ ಎನರ್ಜಿ ಫಿಸಿಕ್ಸ್‌ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭೌತವಿಜ್ಞಾನ ಕ್ಷೇತ್ರದಲ್ಲಿ ಭಾರತ ಮತ್ತು ಫ್ರಾನ್ಸ್‌ ದೇಶಗಳ ಸಹಯೋಗಕ್ಕೆ ರೋಹಿಣಿ ಅಪಾರ ಕೊಡುಗೆ ನೀಡಿದ್ದರು. ಅಲ್ಲದೆ, ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರಿಗೆ ನೀಡಿದ ಅನನ್ಯ ಪ್ರೋತ್ಸಾಹವನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ.

‘ಈ ಪ್ರಶಸ್ತಿಗೆ ಭಾಜನಳಾಗಿರುವುದು ಅಚ್ಚರಿ ತಂದಿದೆ. ನಮ್ಮಲ್ಲಿ ಪದ್ಮ ಪುರಸ್ಕಾರಗಳಿಗೆ ಸಮಾನವಾಗಿರುವ ಪ್ರಶಸ್ತಿಯಾಗಿದೆ. ಎರಡೂ ದೇಶಗಳ ವಿಜ್ಞಾನ ಕ್ಷೇತ್ರ ಹಿಂದಿನಿಂದಲೂ ಕೆಲಸ ಮಾಡುತ್ತಲೇ ಬಂದಿದ್ದೇನೆ’ ಎಂದು ರೋಹಿಣಿ ಪ್ರತಿಕ್ರಿಯಿಸಿದ್ದಾರೆ.

ಗೋಡ್‌ಬೋಲೆ 1952 ರಲ್ಲಿ ಪುಣೆಯಲ್ಲಿ ಜನಿಸಿದರು. ಪುಣೆ ವಿಶ್ವವಿದ್ಯಾಲಯದಲ್ಲಿ ಭೌತ ವಿಜ್ಞಾನದಲ್ಲಿ ಬಿಎಸ್‌ಸಿ ಪದವಿ, ಐಐಟಿ ಬಾಂಬೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅಮೆರಿಕದ ಸ್ಟೋನಿ ಬ್ರೂಕ್‌ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಮಾಡಿದರು. ಕಳೆದ ಕೆಲ ದಶಕಗಳಿಂದ ಐಐಎಸ್‌ಸಿಯಲ್ಲಿ ಪ್ರಾಧ್ಯಾಪಕರಾಗಿದ್ದು, ಬೆಂಗಳೂರಿನಲ್ಲೇ ನೆಲೆಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು