ರಾಹುಲ್ ತಡೆಯಲು ಪೊಲೀಸ್ ಬಳಕೆ: ಸುರ್ಜೇವಾಲಾ ಟೀಕೆ

ಬೆಳಗಾವಿ: ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಾರ್ಚ್ 20ರಂದು ಕರ್ನಾಟಕದಲ್ಲಿ ಯುವಜನರಿಗೆ ದೊಡ್ಡ ಕೊಡುಗೆ ಘೋಷಣೆ ಮಾಡಲಿದ್ದಾರೆ. ಹೆದರಿರುವ ಬಿಜೆಪಿ ನಾಯಕರು ಅವರನ್ನು ತಡೆಯಲು ಪೊಲೀಸರನ್ನು ಉಪಯೋಗಿಸಿದ್ದಾರೆ’ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಕಿಡಿ ಕಾರಿದರು.
ಲೈಂಗಿಕ ದೌರ್ಜನ್ಯ ಕುರಿತ ಹೇಳಿಕೆಗಾಗಿ ರಾಹುಲ್ ಗಾಂಧಿ ಅವರಿಂದ ಹೆಚ್ಚಿನ ವಿವರಗಳಿಗಾಗಿ ಪೊಲೀಸರು ದೆಹಲಿಯ ಅವರ ನಿವಾಸಕ್ಕೆ ತೆರಳಿದ್ದರ ಕುರಿತು ಭಾನುವಾರ ಇಲ್ಲಿ ಅವರು ಪ್ರತಿಕ್ರಿಯಿಸಿದರು.
‘ಯುವಜನರನ್ನು ರಾಹುಲ್ ಗಾಂಧಿ ಜಾಗೃತಗೊಳಿಸುತ್ತಿದ್ದಾರೆ. ಅವರನ್ನು ತಡೆಯಲು ಸರ್ವಾಧಿಕಾರಿ ಯತ್ನಿಸುತ್ತಿದ್ದಾರೆ. ಸರ್ವಾಧಿಕಾರಿಗೆ ಭೀತಿಯಾದಾಗಲೆಲ್ಲ ಪೊಲೀಸರನ್ನು ಬಳಸುತ್ತಾರೆ. ರಾಹುಲ್ ಮನೆಗೆ ಪೊಲೀಸರನ್ನು ಕಳುಹಿಸಿದ್ದೂ ಇದೇ ಕಾರಣಕ್ಕೆ’ ಎಂದು ದೂರಿದರು.
‘ದೆಹಲಿಯಲ್ಲಿನ ಸರ್ವಾಧಿಕಾರಿ ಏನೇ ಯತ್ನಿಸಿದರೂ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರ ಬಾಯಿ ಮುಚ್ಚಲು ಸಾಧ್ಯವಿಲ್ಲ. ಹೆಚ್ಚೆಂದರೆ ಇವರು ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡಬಹುದು. ರಾಹುಲ್ ಘೋಷಿಸಲಿರುವ ಕೊಡುಗೆಗೆ ದೇಶದಾದ್ಯಂತ ಬೇಡಿಕೆ ಬರಲಿದೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.