ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಚುನಾವಣೆಗೆ ಮುಹೂರ್ತ ನಿಗದಿ: ಮೇ 10 ಮತದಾನ, 13ಕ್ಕೆ ಮತ ಎಣಿಕೆ

ವೇಳಾಪಟ್ಟಿ ಪ್ರಕಟಿಸಿದ ಆಯೋಗ
Last Updated 29 ಮಾರ್ಚ್ 2023, 19:18 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುಹೂರ್ತ ನಿಗದಿ ಯಾಗಿದೆ. ರಾಜ್ಯದಲ್ಲಿ ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯ ಲಿದೆ. ಮೇ 13ರಂದು ಮತ ಎಣಿಕೆ ಜರುಗಲಿದೆ.

ಈ ವಿಧಾನಸಭೆಯ ಅವಧಿ ಮೇ 24ರಂದು ಕೊನೆಗೊಳ್ಳಲಿದ್ದು, ಚುನಾವಣೆಯ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ ಬುಧವಾರ ಪ್ರಕಟಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌, ‘ಬುಧವಾರ ದಿಂದಲೇ ನೀತಿಸಂಹಿತೆ ಜಾರಿಗೆ ಬಂದಿದೆ. ನೀತಿಸಂಹಿತೆ ನಿಬಂಧನೆಗಳು ಎಲ್ಲ ಅಭ್ಯರ್ಥಿಗಳು, ಎಲ್ಲ ರಾಜಕೀಯ ಪಕ್ಷಗಳು ಹಾಗೂ ರಾಜ್ಯ ಸರ್ಕಾರಕ್ಕೆ ಅನ್ವಯಿಸುತ್ತದೆ. ಕರ್ನಾಟಕ ಸರ್ಕಾರಕ್ಕೆ ಸಂಬಂಧಿಸಿದ ಘೋಷಣೆಗಳು, ನೀತಿ ಹಾಗೂ ನಿರ್ಧಾರಗಳು ಸೇರಿದಂತೆ ಮಾದರಿ ನೀತಿಸಂಹಿತೆಯು ಕೇಂದ್ರ ಸರ್ಕಾರಕ್ಕೂ ಅನ್ವಯಿಸುತ್ತದೆ’ ಎಂದು ಸ್ಪಷ್ಟಪಡಿಸಿದರು.

‘ಬುಡಕಟ್ಟು ಪ್ರದೇಶಗಳಲ್ಲಿ (ಜೇನುಕುರುಬರು, ಬೆಟ್ಟಕುರುಬರು) ಮತದಾನಕ್ಕೆ ಉತ್ತೇಜಿಸಲು 40 ಮತ ಗಟ್ಟೆಗಳನ್ನು (ಎಥ್ನಿಕ್‌ ಪೋಲಿಂಗ್ ಸ್ಟೇಷನ್‌) ಸ್ಥಾಪಿಸಲಾಗುತ್ತದೆ. ತೃತೀಯ ಲಿಂಗಿಗಳ ಪಾಲ್ಗೊಳ್ಳುವಿಕೆಗೆ ವಿಶೇಷ ಒತ್ತು ನೀಡಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT