ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನ ಪ್ರಕಾಶ್‌ ರಾಠೋಡ್‌ರಿಂದ ಸದನದಲ್ಲಿ ಅಶ್ಲೀಲ ಫೋಟೊ ವೀಕ್ಷಣೆ ?

ಕಾಂಗ್ರೆಸ್‌ನ ಪ್ರಕಾಶ್‌ ರಾಠೋಡ್‌ ವಿರುದ್ಧ ಟೀಕೆ
Last Updated 29 ಜನವರಿ 2021, 17:00 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನ ಪರಿಷತ್‌ನಶುಕ್ರವಾರ ಕಲಾಪದ ವೇಳೆ ಕಾಂಗ್ರೆಸ್‌ ಸದಸ್ಯ ಪ್ರಕಾಶ್‌ ಕೆ. ರಾಠೋಡ್‌, ಮೊಬೈಲ್‌ ವೀಕ್ಷಣೆಯಲ್ಲಿ ಮಗ್ನರಾಗಿದ್ದುದು ಸುದ್ದಿವಾಹಿನಿಗಳ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಅವರು ‘ಅಶ್ಲೀಲ ಫೋಟೊ’ ವೀಕ್ಷಿಸುತ್ತಿದ್ದರು ಎಂದು ವಾಹಿನಿಗಳು ಸುದ್ದಿ ಬಿತ್ತರಿಸಿವೆ.

ಪ್ರಶ್ನೋತ್ತರ ಕಲಾಪದ ವೇಳೆ ಪ್ರಕಾಶ್ ರಾಠೋಡ್‌ ಅವರು ಮೊಬೈಲ್‌ ವೀಕ್ಷಿಸುತ್ತಿರುವುದನ್ನು ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಸುದ್ದಿವಾಹಿನಿಗಳ ಛಾಯಾಗ್ರಾಹಕರು ಸೆರೆ ಹಿಡಿದಿದ್ದಾರೆ. ಶಾಸಕರು ತಮ್ಮ ಮೊಬೈಲ್‌ನಲ್ಲಿದ್ದ ಫೋಟೊಗಳನ್ನು ‘ಸ್ಕ್ರಾಲ್‌’ ಮಾಡುತ್ತಿರುವುದು ದೃಶ್ಯದಲ್ಲಿದೆ. ಆದರೆ, ಅವರು ತಮ್ಮ ಮೊಬೈಲ್‌ನಲ್ಲಿ ಎಂತಹ ಚಿತ್ರ ನೋಡುತ್ತಿದ್ದರು ಎಂಬುದು ಸುದ್ದಿವಾಹಿನಿಗಳ ಕ್ಯಾಮೆರಾಗಳಲ್ಲಿ ಸೆರೆಯಾಗಿಲ್ಲ.

ಬಿತ್ತರವಾದ ಸುದ್ದಿಗೆ ಪ್ರತಿಕ್ರಿಯಿಸಿರುವ ಪ್ರಕಾಶ್ ರಾಠೋಡ್‌, ‘ನಾನು ಗ್ರಾಮೀಣಾಭಿವೃದ್ಧಿ ಸಚಿವರಿಗೆ ಕೇಳಿದ್ದ ಪ್ರಶ್ನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಮೊಬೈಲ್‌ನಲ್ಲಿ ಇರಿಸಿಕೊಂಡಿದ್ದೆ. ಅದನ್ನು ನೋಡಲು ಮೊಬೈಲ್‌ ತೆಗೆದಿದ್ದೆ. ಆಗ ಮೊಬೈಲ್‌ ಗ್ಯಾಲರಿ ಭರ್ತಿಯಾಗಿತ್ತು. ಕೆಲವು ದಾಖಲೆಗಳನ್ನು ಡಿಲೀಟ್‌ ಮಾಡಲು ಪ್ರಯತ್ನಿಸಿದೆ. ಆಗ ಮೊಬೈಲ್‌ ಗ್ಯಾಲರಿಯನ್ನು ಸ್ಕ್ರಾಲ್‌ ಮಾಡಿದ್ದನ್ನೇ ತಪ್ಪಾಗಿ ಬಿಂಬಿಸಲಾಗಿದೆ’ ಎಂದರು.

ತಾವು ಯಾವುದೇ ರೀತಿಯ ಅಶ್ಲೀಲ ಫೋಟೊ ಅಥವಾ ನೀಲಿಚಿತ್ರವನ್ನು ಸದನದಲ್ಲಿ ವೀಕ್ಷಿಸಿಲ್ಲ. ತಮ್ಮ ಮೊಬೈಲ್‌ನಲ್ಲಿ ಅಂತಹ ಯಾವ ವಿಡಿಯೊ, ಫೋಟೊ ಕೂಡ ಇರಲಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT