ಶನಿವಾರ, ಮೇ 21, 2022
26 °C

ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಲು ಒತ್ತಡ ಹಾಕಿದ್ದರೆ ಹೇಳಲಿ: ಪ್ರತಾಪ ಸಿಂಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ‘ರಾಮಮಂದಿರ ನಿರ್ಮಾಣಕ್ಕೆ ಬಹಳಷ್ಟು ಮುಸ್ಲಿಮರು ಹಾಗೂ ಕ್ರಿಶ್ಚಿಯನ್‌ ಸಮುದಾಯದವರೇ ಸಂತೋಷದಿಂದ ದೇಣಿಗೆ ನೀಡುತ್ತಿರುವಾಗ, ರಾಜಕಾರಣಿಗಳು ಸಣ್ಣತನ ತೋರುವುದು ಸಲ್ಲದು. ದೇಣಿಗೆ ವಿಚಾರದಲ್ಲಿ ಮನೆ ಬಳಿಗೆ ಬಂದು ಯಾರ ಮೇಲೆದಾರೂ ಒತ್ತಡ ಹೇರಿದ್ದರೆ ಬಹಿರಂಗವಾಗಿ ಹೇಳಲಿ’ ಎಂದು ಸಂಸದ ಪ್ರತಾಪ ಸಿಂಹ ಸವಾಲು ಹಾಕಿದರು.

‘ಸೈದ್ಧಾಂತಿಕವಾಗಿ ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಂಡಿರಲಿ. ಅವರು ರಾಮಮಂದಿರ ನಿರ್ಮಾಣಕ್ಕೆ ಸಂತೋಷದಿಂದ ದೇಣಿಗೆ ಕೊಟ್ಟರೆ ಮಾತ್ರ ತೆಗೆದುಕೊಳ್ಳುತ್ತೇವೆ. ಕೊಡದಿದ್ದರೆ ಬೇಸರವನ್ನೂ ಮಾಡಿಕೊಂಡಿಲ್ಲ. ಕಾರ್ಯಕರ್ತರು ಬಂದು ಕೇಳಿದಾಗ ಒತ್ತಡದ ಭಾವನೆ ಬಂತು ಎನ್ನುವರು ಧೈರ್ಯವಾಗಿ ಹೇಳಲಿ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು