ಸೋಮವಾರ, ಮಾರ್ಚ್ 27, 2023
31 °C

ಮಠಾಧೀಶರು ಜಾತಿ ಸೋಂಕಿನಿಂದ ಮುಕ್ತರಾಗಲಿ: ಕುಂ. ವೀರಭದ್ರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾಡಿ (ಕಲಬುರಗಿ ಜಿಲ್ಲೆ): ‘ಸಮಾಜಕ್ಕೆ ಮಾರ್ಗದರ್ಶನ ಮಾಡುವ ಮಠಗಳು ಹಾಗೂ ಮಠಾಧೀಶರು ಜಾತಿ, ಧರ್ಮಗಳ ಸೋಂಕಿನಿಂದ ಮುಕ್ತರಾಗಿ ಎಲ್ಲರನ್ನೂ ಅಪ್ಪಿಕೊಳ್ಳುವ ಶ್ರೇಷ್ಠ ಗುಣ ಹೊಂದಿರಬೇಕು’ ಎಂದು ಸಾಹಿತಿ ಕುಂ. ವೀರಭದ್ರಪ್ಪ ಅಭಿಪ್ರಾಯಪಟ್ಟರು.

ವಾಡಿ ಸಮೀಪದ ನಾಲವಾರ ಗ್ರಾಮದಲ್ಲಿ ಭಾನುವಾರ ಕೋರಿಸಿದ್ಧೇಶ್ವರ ಶಿವಯೋಗಿ‌ಗಳ ಜಾತ್ರೆಯ ಉದ್ಘಾಟನೆಯಲ್ಲಿ 2023ರ ’ಶ್ರೀಸಿದ್ಧ ತೋಟೇಂದ್ರ ಸಾಹಿತ್ಯ ರತ್ನ‘ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ಮಠದ ಪರಂಪರೆ ಹೊಂದಿರುವ ಭಾರತದಲ್ಲಿ ಅಕ್ಷರದ ಅರಿವು ಮೂಡಿಸುವಲ್ಲಿ ಮಠಗಳು ಬಹುದೊಡ್ಡ ಪಾತ್ರ ವಹಿಸುತ್ತಿವೆ’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು