ಶುಕ್ರವಾರ, ಮಾರ್ಚ್ 24, 2023
30 °C

ಎಎಪಿ ರಾಜ್ಯ ಅಧ್ಯಕ್ಷರಾಗಿ ಪೃಥ್ವಿ ರೆಡ್ಡಿ ಮರುನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆಮ್‌ ಆದ್ಮಿ ಪಕ್ಷದ(ಎಎಪಿ) ನೂತನ ಪದಾಧಿಕಾರಿಗಳ ಪಟ್ಟಿಯನ್ನು ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ಹಾಗೂ ದೆಹಲಿ ಶಾಸಕ ದಿಲೀಪ್ ಪಾಂಡೆ ಘೋಷಿಸಿದರು.

ಎಎಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಪೃಥ್ವಿ ರೆಡ್ಡಿ ಅವರನ್ನು ಮರು ನೇಮಕ ಮಾಡಲಾಗಿದೆ.

‘ಸಂಚಿತ್ ಸಹಾನಿ(ಪ್ರಧಾನ ಕಾರ್ಯದರ್ಶಿ), ಜೆ. ಹರಿಹರನ್ (ಖಜಾಂಚಿ), ‘ಮುಖ್ಯಮಂತ್ರಿ’ ಚಂದ್ರು (ಪ್ರಚಾರ ಮತ್ತು ಜನಸಂಪರ್ಕ ಸಮಿತಿ ಅಧ್ಯಕ್ಷ), ಭಾಸ್ಕರ್‌ ರಾವ್ (ಪ್ರಣಾಳಿಕೆ ಸಮಿತಿಯ ಅಧ್ಯಕ್ಷ), ಬ್ರಿಜೇಶ್ ಕಾಳಪ್ಪ (ಮಾಧ್ಯಮ ಮತ್ತು ಸಂವಹನಾ ಉಸ್ತುವಾರಿ), ಜಗದೀಶ್.ವಿ. ಸದಂ (ಮಾಧ್ಯಮ ಉಸ್ತುವಾರಿ), ಬಿ.ಟಿ. ನಾಗಣ್ಣ, ಮೋಹನ್ ದಾಸರಿ, ರವಿಚಂದ್ರ ನೆರಬೆಂಚಿ, ಶಿವರಾಯಪ್ಪ ಜೋಗಿನ್, ಜಾಫರ್‌ ಮೊಯಿನುದ್ದೀನ್ (ಕಾರ್ಯಾಧ್ಯಕ್ಷರು) ಅವರನ್ನು ಪದಾಧಿಕಾರಿಗಳನ್ನಾಗಿ ನೇಮಿಸಲಾಗಿದೆ’ ಎಂದು ದಿಲೀಪ್‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ವಿಜಯ ಶರ್ಮಾ, ಚೆನ್ನಪ್ಪ ಗೌಡ, ವೆಂಕಟೇಶ್, ವಿಶ್ವನಾಥ್ ಬಿ.ಎಲ್., ರೋಹನ್ ಐನಾಪುರ, ರುದ್ರಯ್ಯ ನವಲಿ ಹಿರೇಮಠ, ಸಾ.ಸಿ. ಬೆನಕನಹಳ್ಳಿ, ಉಮಾಶಂಕರ್, ವಿ. ಲಕ್ಷ್ಮೀಕಾಂತ ರಾವ್, ವಿವೇಕಾನಂದ ಸಾಲಿನ್ಸ್  ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಜಿಲ್ಲಾಧ್ಯಕ್ಷರು: ‘ಶಂಕರ ಹೆಗಡೆ(ಬೆಳಗಾವಿ), ಕೆ.ಎಂ. ಕಲಾದಗಿ(ಬಾಗಲಕೋಟೆ), ಅನಂತ್ ಕುಮಾರ್ ಬುಗಡಿ(ಧಾರವಾಡ), ಸಂಜೀವ ಕುಲಕರ್ಣಿ(ಗದಗ), ಫರೀದ್ ನದಾಫ್(ಹಾವೇರಿ), ಬಾಲಕೃಷ್ಣ ನಾಯಕ(ಉತ್ತರ ಕನ್ನಡ), ಡಾಲ್ಫಿನ್ ಡಿಸೋಜಾ(ಉಡುಪಿ), ಅಶೋಕ ಅಡಮಲೆ(ದಕ್ಷಿಣ ಕನ್ನಡ), ಅವಿನಾಶ ಕಮಲಾಪುರ(ಬೀದರ್), ಎಲ್.ಎಸ್. ಪಾಟೀಲ(ಕಲಬುರಗಿ), ಮರಗೆಪ್ಪ ಸಾಲಿಕೇರಿ(ಯಾದಗಿರಿ), ಭೋಗೇಶ್ ಸೊಲ್ಲಾಪುರ(ವಿಜಯಪುರ), ಬಸವರಾಜ ಗುತ್ತೇದಾರ(ರಾಯಚೂರ),ಹುಸೇನಸಾಬ್ ಗಂಗ್ನಾಳ(ಕೊಪ್ಪಳ), ಕಾಳಿದಾಸ ಜೊನ್ನಾಳ(ವಿಜಯನಗರ), ಟಿ. ಕಿರಣಕುಮಾರ(ಬಳ್ಳಾರಿ), ಚಂದ್ರು ಬಿ (ದಾವಣಗೆರೆ), ಫಾರೂಕ್ ಅಲಿ(ಚಿತ್ರದುರ್ಗ), ಪ್ರೇಮಕುಮಾರ್ ಎ.ಆರ್.(ತುಮಕೂರು), ಮಳ್ಳೂರು ಶಿವಣ್ಣ(ಚಿಕ್ಕಬಳ್ಳಾಪುರ), ವಿಜಯ ಕುಮಾರ್(ಕೋಲಾರ), ಲೋಹಿತ್(ಬೆಂಗಳೂರು ಗ್ರಾಮಾಂತರ), ಶಿವಕುಮಾರ್(ಮಂಡ್ಯ), ನಾಗೇಂದ್ರಗೌಡ (ರಾಮನಗರ), ರಂಗಯ್ಯ ಎಲ್(ಮೈಸೂರು), ಭೋಜಣ್ಣ ಸೋಮಯ್ಯ(ಕೊಡಗು), ರಾಜಶೇಖರ(ಚಾಮರಾಜನಗರ), ಕೆ. ಕಿರಣ(ಶಿವಮೊಗ್ಗ), ಹೇಮಂತ್ ಕುಮಾರ್ ಎಂ.ಎಸ್.(ಚಿಕ್ಕಮಗಳೂರು), ಆನಂದ ಟಿ.ಪಿ(ಹಾಸನ), ಸತೀಶ್ ಮೋಹನ್(ಬೆಂಗಳೂರು ನಗರ).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು