ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ, ಪುನರಾವರ್ತಿತ ಅಭ್ಯರ್ಥಿಗಳ ತೇರ್ಗಡೆಗೆ ಒತ್ತಡ

Last Updated 6 ಜೂನ್ 2021, 21:49 IST
ಅಕ್ಷರ ಗಾತ್ರ

ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ರದ್ದಾದ ಬೆನ್ನಲ್ಲೇ ಪುನರಾವರ್ತಿತ, ಖಾಸಗಿ ಅಭ್ಯರ್ಥಿಗಳನ್ನು ಹಿಂದಿನ ವರ್ಷದ ಫಲಿತಾಂಶ ಆಧರಿಸಿ ತೇರ್ಗಡೆ ಮಾಡಲು ಒತ್ತಡ ಹೆಚ್ಚಾಗುತ್ತಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ಸರಳೀಕರಿಸಿರುವ ಜೊತೆಗೆ, ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ನಡೆಸಲು ಚಿಂತನೆ ನಡೆದಿದೆ. ದ್ವಿತೀಯ ಪಿಯು ಪರೀಕ್ಷೆ ಬರೆಯಲು ಬಯಸುವವರು ಹಾಗೂ ಎಸ್ಸೆಸ್ಸೆಲ್ಸಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಕೋವಿಡ್‌ ಸ್ಥಿತಿ ತಿಳಿಯಾದ ಬಳಿಕ ಪರೀಕ್ಷೆ ನಡೆಯಬಹುದು ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮೂಲಗಳು ತಿಳಿಸಿವೆ.

ಗ್ರೇಡಿಂಗ್ ಜತೆಗೆ ಅಂಕ?: ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಸಿಬಿಎಸ್‌ಇ ಮಾದರಿಯಲ್ಲೇ ಫಲಿತಾಂಶ ನೀಡಲು ಚಿಂತನೆ ನಡೆದಿದೆ. ಎ, ಎ+, ಬಿ, ಬಿ+, ಸಿ, ಸಿ+ ಮಾದರಿಯಲ್ಲಿ ಗ್ರೇಡಿಂಗ್ ಜತೆಗೆ ಅಂಕಗಳನ್ನೂ ನೀಡಲಾಗುತ್ತದೆ. ಪ್ರತಿ ವಿಷಯದ ಗ್ರೇಡಿಂಗ್ ಒಟ್ಟುಗೂಡಿಸಿ ಅಂಕಗಳಿಗೆ ಬದಲಿಸಬೇಕೇ ಅಥವಾ ಪ್ರತಿ ವಿಷಯಕ್ಕೂ ಅಂಕಗಳನ್ನು ನೀಡಿ ನಂತರ, ಗ್ರೇಡಿಂಗ್‌ಗೆ ಪರಿವರ್ತಿಸಬೇಕೇ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ಎಲ್ಲ ಪರೀಕ್ಷಾ ಮಂಡಳಿಗಳಿಗೂ ಪತ್ರ: ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನೀಟ್, ಜೆಇಇ ಸೇರಿದಂತೆ ಆಯಾ ಸಂಸ್ಥೆಗಳು ನಡೆ
ಸುವ ಪರೀಕ್ಷೆಗಳ ಅಂಕವನ್ನು ಮಾತ್ರ ಆಧರಿಸಿ ರ‍್ಯಾಂಕಿಂಗ್ ಪ್ರಕಟಿಸುವಂತೆ ಎಲ್ಲ ಪರೀಕ್ಷಾ ಮಂಡಳಿಗಳಿಗೂ ಪತ್ರ ಬರೆಯಲು ಇಲಾಖೆ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT