ಬೆಂಗಳೂರು: ‘ವಿಡಿಯೊದಲ್ಲಿರುವುದು ನಾನೇ. ಆದರೆ, ಯುವತಿಯ ಸಹಮತದೊಂದಿಗೆ ಲೈಂಗಿಕ ಸಂಪರ್ಕ ನಡೆಸಿದ್ದೆ’ ಎಂದು ಪ್ರಕರಣದ ಆರೋಪಿಯಾಗಿರುವ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಹೇಳಿಕೆ ನೀಡಿದ್ದು, ಈ ಮೂಲಕ ಸಿ.ಡಿ. ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ.

‘ಕೆಲಸದ ಆಮಿಷವೊಡ್ಡಿದ್ದ ಸಚಿವರು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ’ ಎಂದು ಸಂತ್ರಸ್ತೆ ನೀಡಿರುವ ದೂರಿನಡಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ತನಿಖೆಯನ್ನು ತನಿಖಾಧಿಕಾರಿ ಎಂ.ಸಿ.ಕವಿತಾ ನಡೆಸುತ್ತಿದ್ದಾರೆ. ಅವರ ಎದುರು ವಿಚಾರಣೆಗೆ ಹಾಜರಾಗಿದ್ದ ರಮೇಶ ಜಾರಕಿಹೊಳಿ, ನಾಲ್ಕು ಪುಟಗಳ ಹೇಳಿಕೆ ನೀಡಿದ್ದಾರೆ. ವೈದ್ಯಕೀಯ ಪರೀಕ್ಷೆಗೂ ಒಳಪಟ್ಟಿದ್ದಾರೆ.

ಹೇಳಿಕೆ ವಿವರ

‘ನಾನು ಸಚಿವನಾಗಿದ್ದಾಗ, ಜಲಾಶಯಗಳ ವಿಡಿಯೊ ಚಿತ್ರೀಕರಣ ಮಾಡುವ ವಿಚಾರವಾಗಿ ಯುವತಿಯೇ ನನ್ನನ್ನು ಸಂಪರ್ಕಿಸಿದ್ದಳು. ನನ್ನ ಮೊಬೈಲ್ ನಂಬರ್ ಪಡೆದು ಮಾತನಾಡಲಾರಂಭಿಸಿದ್ದಳು. ಉತ್ತರ ಕರ್ನಾಟಕದವಳು ಎಂದು ಹೇಳಿದ್ದಕ್ಕೆ ನಾನೂ ಮಾತನಾಡುತ್ತಿದ್ದೆ’ ಎಂದು ರಮೇಶ ಹೇಳಿರುವುದಾಗಿ ಎಸ್‌ಐಟಿ ಮೂಲಗಳು ತಿಳಿಸಿವೆ.

‘ಪ್ರತಿ ಬಾರಿ ಕರೆ ಮಾಡಿದಾಗಲೂ ಯುವತಿ ಲೈಂಗಿಕವಾಗಿ ಮಾತನಾಡಿ ಪ್ರಚೋದಿಸುತ್ತಿದ್ದಳು. ಆಕೆಯ ಮಾತು ಹಾಗೂ ನಡತೆ ನೋಡಿ ಸಲುಗೆಯಿಂದ ಮಾತನಾಡಲಾರಂಭಿಸಿದೆ. ಕೆಲ ಬಾರಿ ಯುವತಿಯೇ ನಗ್ನವಾಗಿ ವಿಡಿಯೊ ಕರೆ ಮಾಡಿ ಅಂಗಾಂಗ ತೋರಿಸುತ್ತಿದ್ದಳು. ಅದರಿಂದಲೂ ನಾನು ಪ್ರಚೋದನೆಗೊಂಡಿದ್ದೆ. ಆಕೆ ಒತ್ತಾಯದಿಂದ ನನ್ನನ್ನು ಭೇಟಿಯಾಗಬೇಕೆಂದು ಕೆಲ ಬಾರಿ ಮಲ್ಲೇಶ್ವರದಲ್ಲಿರುವ ಅಪಾರ್ಟ್‌ಮೆಂಟ್ ಸಮುಚ್ಚಯದ ಫ್ಲ್ಯಾಟ್‌ಗೆ ಬಂದಿದ್ದಳು. ಅದೇ ಸಂದರ್ಭದಲ್ಲಿ ಆಕೆಯೇ ನನ್ನ ಜೊತೆಗೆ ಲೈಂಗಿಕ ಸಂಪರ್ಕ ನಡೆಸಲು ಒಪ್ಪಿದ್ದಳು. ಅದೇ ಕಾರಣಕ್ಕೆ ಲೈಂಗಿಕ ಸಂಪರ್ಕ ನಡೆಸಿದೆ.’

‘ನಮ್ಮಿಬ್ಬರ ಲೈಂಗಿಕ ಸಂಪರ್ಕದ ವಿಡಿಯೊವನ್ನು ಯಾರು ಚಿತ್ರೀಕರಣ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಕಾಣದ ಕೈಗಳು ಷಡ್ಯಂತ್ರ ರೂಪಿಸಿ, ಹನಿಟ್ರ್ಯಾಪ್‌ಗೆ ಬೀಳಿಸಿದ್ದಾರೆ. ಕೋಟ್ಯಂತರ ರೂಪಾಯಿ ಹಣಕ್ಕೂ ಕೆಲವರು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ನನ್ನ ಹೆಸರಿಗೆ ಕಳಂಕ ತಂದು ರಾಜಕೀಯವಾಗಿ ಮುಗಿಸುವ ಉದ್ದೇಶ ಇದರ ಹಿಂದಿದೆ. ಇದಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿರುವ ಮಾಹಿತಿಯೂ ಇದೆ. ಸಹಮತದ ಲೈಂಗಿಕ ಸಂಪರ್ಕವನ್ನೇ ಅತ್ಯಾಚಾರವೆಂದು ಬಿಂಬಿಸಿ ನನ್ನನ್ನು ಆರೋಪಿಯನ್ನಾಗಿ ಮಾಡಲು ಹೊರಟಿರುವವರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದೂ ರಮೇಶ ಹೇಳಿರುವುದಾಗಿ ಎಸ್‌ಐಟಿ ಮೂಲಗಳು ತಿಳಿಸಿವೆ.

ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಎಸ್‌ಐಟಿ ಹಿರಿಯ ಅಧಿಕಾರಿಯೊಬ್ಬರು, ‘ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಈ ಹಂತದಲ್ಲಿ ಯಾವುದೇ ಮಾಹಿತಿ ಬಹಿರಂಗಪಡಿಸಲಾಗದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.