ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ: ಅಂತಿಮ ವರದಿ ಬಳಿಕ ಸ್ಪಷ್ಟತೆ– ಸಿ.ಎಂ ಬೊಮ್ಮಾಯಿ

Last Updated 1 ಜನವರಿ 2023, 20:27 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಹಿಂದುಳಿದ ವರ್ಗಗಳ ಆಯೋಗದ ಮಧ್ಯಂತರ ವರದಿ ಅನ್ವಯ ಮೀಸಲಾತಿ ಘೋಷಿಸಲಾಗಿದೆ. ಅಂತಿಮ ವರದಿ ಬಂದಾಗ‌ ಎಲ್ಲವೂ ಸ್ಪಷ್ಟವಾಗ
ಲಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಭಾನುವಾರ ನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಕೆಲವು ಹಿಂದುಳಿದ ವರ್ಗಗಳಿಗೆ ಅನೇಕ ವರ್ಷಗಳಿಂದ ಶಿಕ್ಷಣ‌ ಮತ್ತು ಉದ್ಯೋಗದಲ್ಲಿ ಹಿನ್ನಡೆಯಾಗಿತ್ತು. ಅವರಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ಮೀಸಲಾತಿ ಘೋಷಣೆ ಮಾಡಿದ್ದೇವೆ. ಈಗಿರುವ ಹಿಂದುಳಿದ ವರ್ಗಗಳ ಮೀಸಲಾತಿಗೆ ಯಾವ ತೊಂದರೆಯೂ ಆಗದಂತೆ ನೋಡಿಕೊಳ್ಳುತ್ತೇವೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಇದನ್ನು ಮಾಡಲು ಸಾಧ್ಯವಾಗಿರಲಿಲ್ಲ. ನಾವು ಮಾಡಿದ್ದಕ್ಕೆ ಅವರಿಗೆ ಸಮಸ್ಯೆಯಾಗಿದೆ’ ಎಂದರು.

ಸಾಮಾಜಿಕ ಸುಸ್ಥಿರತೆ ಕದಡಲಿದೆ: ವೀರಪ್ಪ ಮೊಯಿಲಿ ಕಳವಳ

ಮಂಗಳೂರು: ‘ರಾಜ್ಯದಲ್ಲಿ ಒಕ್ಕಲಿಗ ಹಾಗೂ ಲಿಂಗಾಯತರಿಗೆ ಮೀಸಲಾತಿ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ರಾಜಕೀಯ ಸಮಯಸಾಧಕತನವನ್ನು ಪ್ರದರ್ಶಿಸಿದೆ. ಈ ನಿರ್ಧಾರ ಸಾಮಾಜಿಕ ಸುಸ್ಥಿರತೆಯನ್ನು ಕದಡಲಿದೆ’ ಎಂದು ಕಾಂಗ್ರೆಸ್‌ ಮುಖಂಡ ಎಂ.ವೀರಪ್ಪ ಮೊಯಿಲಿ ಕಳವಳ ವ್ಯಕ್ತಪಡಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ‘ಮೀಸಲಾತಿ ಪರಿಷ್ಕರಣೆ ವಿಚಾರದಲ್ಲಿ ಯಾವರೀತಿ ನಡೆದುಕೊಳ್ಳಬೇಕು ಎಂಬ ಬಗ್ಗೆ ನಾನು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರ ಸ್ಪಷ್ಟ ನೀತಿಯನ್ನು ರೂಪಿಸಿತ್ತು. ಅದೇ ಮಾದರಿಯ ವ್ಯವಸ್ಥೆ ರೂಪಿಸುವಂತೆ ಸುಪ್ರೀಂ ಕೋರ್ಟ್‌ ಕೂಡಾ ಆದೇಶ ಮಾಡಿದೆ. ಮೀಸಲಾತಿಯ ಕುರಿತು ಸಚಿವ ಸಂಪುಟ ನಿರ್ಧಾರ ಕೈಗೊಳ್ಳಲು ಅವಕಾಶವಿಲ್ಲ. ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ಆಧರಿಸಿ ಕೇಂದ್ರದ ಅಥವಾ ರಾಜ್ಯದ ಶಾಶ್ವತ ಆಯೋಗಗಳೇ ಈ ಬಗ್ಗೆ ನಿರ್ಧಾರ ತಳೆಯಬೇಕು’ ಎಂದರು.

‘ರಾಜ್ಯ ಸರ್ಕಾರವು ಮೀಸಲಾತಿಯ ಬಗ್ಗೆ ವಿವೇಚನಾರಹಿತ ನಿರ್ಧಾರ ತಳೆದಿದೆ. ಇದೊಂದು ಪಾಪದ ಕೆಲಸ. ಒಂದು ಪ್ರವರ್ಗವನ್ನು ಕಿತ್ತು ಹಾಕುವುದು, ಇನ್ನೊಂದನ್ನು ಸೇರ್ಪಡೆಗೊಳಿಸುವುದು ಸರಿಯಲ್ಲ. ಇದು ಸಮಾಜವನ್ನು ಕವಲುದಾರಿಯತ್ತ ಕೊಂಡೊಯ್ಯಲಿದೆ’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT