ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video: ‘ರೆಸಿಲಿಯಂಟ್‌ ಕರ್ನಾಟಕ’ ಬಿಡುಗಡೆ

ಕೈಗಾರಿಕೆಗಳ ಉತ್ಪಾದನೆಗೆ ತೊಡಕಗಾದಂತೆ ಕೈಗೊಂಡ ಕ್ರಮಗಳ ಚಿತ್ರ
Last Updated 11 ನವೆಂಬರ್ 2020, 21:22 IST
ಅಕ್ಷರ ಗಾತ್ರ

ಬೆಂಗಳೂರು: ಲಾಕ್‌ಡೌನ್‌ ಘೋಷಣೆಯಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಕೈಗಾರಿಕೆಗಳ ಸುಗಮ ಕಾರ್ಯಾಚರಣೆಗೆ ಸರ್ಕಾರ ಕೈಗೊಂಡ ಕ್ರಮಗಳ ಕುರಿತ ಚಿತ್ರ ‘ರೆಸಿಲಿಯಂಟ್‌ ಕರ್ನಾಟಕ’ವನ್ನು ಬೃಹತ್ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಬುಧವಾರ ಬಿಡುಗಡೆ ಮಾಡಿದರು.

‘ಎಂಟು ತಿಂಗಳಿಂದ ಇಡೀ ಜಗತ್ತು ಬದಲಾಗಿದೆ. ಕೋವಿಡ್‌ ವಿರುದ್ಧದ ಹೋರಾಟದ ಜತೆಗೆ, ಆರ್ಥಿಕತೆಗೆ ಹೊಡೆತ ಬೀಳದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಕೋವಿಡ್‌ ಸಮಯದಲ್ಲಿ ಸಾರ್ವನಿಕರಿಗೆ ಅಗತ್ಯ ವಸ್ತುಗಳ ಕೊರತೆ ಆಗದಂತೆ ಎಚ್ಚರ ವಹಿಸಲಾಗಿತ್ತು. ಈ ಎಲ್ಲದನ್ನು ಚಿತ್ರ ಒಳಗೊಂಡಿದೆ’ ಎಂದು ಶೆಟ್ಟರ್‌ ವಿವರಿಸಿದರು.

‘ಲಾಕ್‌ಡೌನ್‌ ಅವಧಿಯಲ್ಲೂ ಉತ್ಪಾದನೆಗೆ ತೊಡಕಗಾದಂತೆ ಉದ್ಯಮಗಳಿಗೆ ಸಹಕಾರ ನೀಡಲಾಗಿತ್ತು. ಜನಜೀವನ ಹಾಗೂ ಆರ್ಥಿಕತೆ ನಡುವೆ ಸಮತೋಲನ ಕಾಯ್ದುಕೊಳ್ಳಲಾಗಿತ್ತು. ಕೈಗಾರಿಕೆಯ ಅಭಿವೃದ್ಧಿಯಲ್ಲಿ ಉತ್ತಮ ಸಾಧನೆ ಮಾಡಿರುವ ರಾಜ್ಯ ನಮ್ಮದು. ಹಲವು ವಲಯಗಳಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ’ ಎಂದರು.

‘ಹೂಡಿಕೆದಾರರನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ, ಹೊಸ ಕೈಗಾರಿಕಾ ನೀತಿ 2020-25 ರೂಪಿಸಿದೆ. ಜತೆಗೆ ಕಾರ್ಮಿಕ ಕಾನೂನಿನಲ್ಲಿ ತಂದಿರುವ ಸುಧಾರಣೆಗಳು ಮತ್ತು ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಗೆ ಹೊಸ ನೀತಿಯಲ್ಲಿರುವ ಅಂಶಗಳು ನೆರವಾಗಲಿವೆ’ ಎಂದರು.

ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, ‘ಅಗತ್ಯ ವಸ್ತುಗಳ ಉತ್ಪಾದಿಸುವ ಕೈಗಾರಿಕೆಗಳಿಗೆ ಸರಬರಾಜು ಸರಪಳಿಯು ತೊಂದರೆ ಆಗದಂತೆ ಎಚ್ಚರ ವಹಿಸಲಾಗಿದೆ. ಕೋವಿಡ್ ಆರಂಭಿಕ ದಿನಗಳಲ್ಲೂ ರಾಜ್ಯ ಸರ್ಕಾರ ಏರೋಸ್ಪೇಸ್ ಮತ್ತು ರಕ್ಷಣಾ ಸಂಸ್ಥೆಗಳ ಕಾರ್ಯಾಚರಣೆಗೆ ಅಗತ್ಯ ಬೆಂಬಲ ಒದಗಿಸಿತ್ತು’ ಎಂದರು.

* ಆರ್ಥಿಕತೆ, ಕೈಗಾರಿಕೆ ಅಭಿವೃದ್ಧಿ ಉತ್ತೇಜಿಸಲು ಹೂಡಿಕೆ ಸ್ನೇಹಿ ನೀತಿ ಹಾಗೂ ಪೂರಕ ಸೌಲಭ್ಯಗಳನ್ನು ಒದಗಿಸಿ ಕಂಪನಿಗಳನ್ನು ಆಹ್ವಾನಿಸುತ್ತೇವೆ.

-ಜಗದೀಶ ಶೆಟ್ಟರ್‌, ಕೈಗಾರಿಕಾ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT