ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ₹ 50.23 ಕೋಟಿ ಮೌಲ್ಯದ ಡ್ರಗ್ಸ್ ನಾಶ

ಮಾದಕವಸ್ತು ವಿರೋಧಿ ದಿನದಲ್ಲಿ ಸಚಿವ ಬೊಮ್ಮಾಯಿ
Last Updated 26 ಜೂನ್ 2021, 19:11 IST
ಅಕ್ಷರ ಗಾತ್ರ

ಬೆಂಗಳೂರು: ‘ಕಳೆದ 12 ತಿಂಗಳಿನಲ್ಲಿ ಜಪ್ತಿ ಮಾಡಿರುವ ₹ 50.23 ಕೋಟಿ ಮೌಲ್ಯದ ಮಾದಕ ವಸ್ತುವನ್ನು (ಡ್ರಗ್ಸ್) ನ್ಯಾಯಾಲಯದ ಆದೇಶದನ್ವಯ ನಾಶಪಡಿಸಲಾಗಿದ್ದು, ಇದು ದೇಶದಲ್ಲೇ ಐತಿಹಾಸಿಕ ದಾಖಲೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಮಾದಕ ವಸ್ತು ಮಾರಾಟ ಹಾಗೂ ಸಾಗಣೆ ವಿರುದ್ಧ ರಾಜ್ಯದ ಪೊಲೀಸರು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಎನ್‌ಡಿಪಿಎಸ್ ಕಾಯ್ದೆಯಡಿ2020ರಲ್ಲಿ 4,066 ಪ್ರಕರಣ ದಾಖಲಿಸಿಕೊಂಡಿದ್ದು, 5,291 ಮಂದಿಯನ್ನು ಪೊಲೀಸರು ಬಂಧಿ ಸಿದ್ದಾರೆ. 3 ಸಾವಿರ ಕೆ.ಜಿ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ಇದು ಐತಿಹಾಸಿಕ ದಾಖಲೆ ಆಗಿದೆ’ ಎಂದೂ ಅವರು ತಿಳಿಸಿದರು.

‘ಡಾರ್ಕ್ ವೆಬ್ ಮೂಲಕ ನಡೆ ಯುತ್ತಿರುವ ಜಾಲವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸುತ್ತಿ
ದ್ದಾರೆ. ಬೆಂಗಳೂರಿನ ಎಂಟು ವಿಭಾಗ ಹಾಗೂ ಸಿಸಿಬಿಯ ಪ್ರತ್ಯೇಕ ದಳವು ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದೆ. ಆರು ತಿಂಗಳಿನಲ್ಲಿ 382 ಪ್ರಕರಣಗಳು ದಾಖಲಾಗಿವೆ’ ಎಂದೂ ಹೇಳಿದರು.

ಪೊಲೀಸರಿಗೆ ಮೆಚ್ಚುಗೆ: ‘ಡ್ರಗ್ಸ್ ವಿರುದ್ಧದ ನಮ್ಮ ಹೋರಾಟದಲ್ಲಿ ರಾಜ್ಯದ ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ‌. ಸಾಮಾನ್ಯವಾಗಿ ಇದುವರೆಗೂ ಬೇರೆ ಬೇರೆ ವಿಭಾಗಗಳು, ಅಪರಾಧ ತಡೆ ಕುರಿತು ಜಾಗೃತಿ ಮೂಡಿಸುತ್ತಿದ್ದವು. ಆದರೆ, ಈಗ ರಾಜ್ಯದ ಪೊಲೀಸರು ಅಪರಾಧ ಪತ್ತೆಗೆ ಒತ್ತು ನೀಡಿದ್ದಾರೆ. ಡ್ರಗ್ಸ್ ವಿಚಾರದಲ್ಲಿ ಎಲ್ಲರನ್ನೂ ಜಾಗೃತಗೊಳಿಸುತ್ತಿದ್ದಾರೆ’ ಎಂದೂ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹಾಗೂ ಪೊಲೀಸ್ ಕಮಿಷನರ್ ಕಮಲ್ ಪಂತ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT