ಬೆಂಗಳೂರು: ಪಂಚರತ್ನ ಯಾತ್ರೆ ಕೈಗೊಂಡಿರುವ ಜೆಡಿಎಸ್‌ನ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ ಅವರಿಗೆ ಯಶವಂತಪುರ ಕ್ಷೇತ್ರದಲ್ಲಿ ಮಂಗಳವಾರ ವಿಶೇಷವಾದ ಹಾರವೊಂದನ್ನು ಹಾಕಲಾಗಿದೆ. ಈ ಮೂಲಕ ‘ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್)’ಯನ್ನು ಉಳಿಸಬೇಕಾಗಿ ರೈತರು ಮಾಜಿ ಸಿಎಂಗೆ ಅಹವಾಲು ಸಲ್ಲಿಸಿದ್ದಾರೆ.
‘ಗುಜರಾತಿಗಳಿಂದ ಕನ್ನಡಿಗರ ಕೆಎಂಎಫ್‌ಅನ್ನು ಉಳಿಸಿ’ ಎಂಬ ಸಾಲು ಇದ್ದ ಬ್ಯಾನರ್ ಅನ್ನು, ಹಾಲು ಮೊಸರಿನ ಪ್ಯಾಕೆಟ್‌ಗಳಿಂದ ತಯಾರಿಸಲಾದ ಹಾರಕ್ಕೆ ಅಳವಡಿಸಿ, ಅದನ್ನು ಕುಮಾರಸ್ವಾಮಿ ಅವರಿಗೆ ಹಾಕಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ, ‘ನಂದಿನಿಯನ್ನು ರಕ್ಷಿಸಿ, ಕೆಎಂಎಫ್ ಕಾಪಾಡಿ... ಎನ್ನುವ ಕಾಳಜಿಯೊಂದಿಗೆ ವಿಶೇಷ ಹಾರ ತಯಾರಿಸಿ ನನಗೆ ಹಾಕಲಾಗಿದೆ. ನಮ್ಮ ನಾಡಿನ ರೈತರ ಜೀವನಾಡಿ ಆಗಿರುವ ನಂದಿನಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳಲಾಗುವುದು ಎಂದು ಮಾತು ಕೊಡುತ್ತೇನೆ’ ಎಂದು ಆಶ್ವಾಸನೆ ನೀಡಿದ್ದಾರೆ.
ಕೆಎಂಎಫ್ ಮತ್ತು ಗುಜರಾತ್‌ನ ಅಮೂಲ್ ವಿಲೀನದ ಪ್ರಸ್ತಾವಗಳು, ನೇಮಕಾತಿಗೆ ಕೋರ್ಟ್‌ನಿಂದ ತಡೆ, ಮೊಸರಿನ ಪ್ಯಾಕೆಟ್‌ಗಳ ಮೇಲೆ ‘ದಹಿ’ ಎಂದು ಉಲ್ಲೇಖಿಸಿ ಕನ್ನಡ ಕಡೆಗಣಿಸಿದ ಕಾರಣಗಳಿಂದಾಗಿ ಕೆಎಂಎಫ್ ವಿವಾದಕ್ಕೆ ಗುರಿಯಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.