ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರತ್ ವರ್ಗಾವಣೆ :ಮರು ಪರಿಶೀಲನೆಗೆ ನಿರ್ದೇಶನ

ನಾಗರಿಕ ಸೇವಾ ಮಂಡಳಿ ಪುನರ್ ಸ್ಥಾಪಿಸಿದ ಸಿಎಟಿ
Last Updated 29 ಮಾರ್ಚ್ 2021, 19:20 IST
ಅಕ್ಷರ ಗಾತ್ರ

ಬೆಂಗಳೂರು: 2014ರಿಂದ ನಿಷ್ಕ್ರಿಯ ಸ್ಥಿತಿಯಲ್ಲಿದ್ದ ನಾಗರಿಕ ಸೇವಾ ಮಂಡಳಿಯನ್ನು(ಸಿಎಸ್‌ಬಿ)ಕೇಂದ್ರ ಆಡಳಿತ ನ್ಯಾಯಮಂಡಳಿ(ಸಿಎಟಿ) ಪುನರ್ ಸ್ಥಾಪಿಸಿದೆ. ಈ ಮಂಡಳಿಯ ಶಿಫಾರಸು ಆಧರಿಸಿ ಐಎಎಸ್ ಅಧಿಕಾರಿ ಬಿ.ಶರತ್ ಅವರ ವರ್ಗಾವಣೆ ಆದೇಶ ಮರುಪರಿಶೀಲಿಸುವಂತೆ ಸರ್ಕಾರಕ್ಕೆ ಸಿಎಟಿ ನಿರ್ದೇಶನ ನೀಡಿದೆ.

ಟಿ.ಎಸ್‌.ಆರ್. ಸುಬ್ರಮಣಿಯನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನಿರ್ದೇಶನಗಳಿಗೆ ಅನುಸಾರವಾಗಿ ಭಾರತೀಯ ಆಡಳಿತ ಸೇವೆ (ಕೇಡರ್‌) ತಿದ್ದುಪಡಿ ನಿಯಮಗಳನ್ನು ಕೇಂದ್ರ ಸರ್ಕಾರ 2014ರಲ್ಲಿ ಜಾರಿಗೆ ತಂದಿದೆ. ಮುಖ್ಯವಾಗಿ ಐಎಎಸ್ ಅಧಿಕಾರಿಗಳ ಕನಿಷ್ಠ ಅಧಿಕಾರಾವಧಿಯನ್ನು ಈ ನಿಯಮಾವಳಿ ಒಳಗೊಂಡಿದೆ. ಈ ನಿಯಮಾವಳಿ ಅಡಿಯಲ್ಲಿ 2014ರ ಜನವರಿ 31ರಲ್ಲಿ ರಾಜ್ಯ ಸರ್ಕಾರವು ಸಿಎಸ್‌ಬಿ ರಚಿಸಿತ್ತು. ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಮಂಡಳಿಗೆ ಅಧ್ಯಕ್ಷರಾಗಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಸದಸ್ಯರಾಗಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ(ಡಿಪಿಎಆರ್‌) ಕಾರ್ಯದರ್ಶಿ ಅವರು ಸಂಯೋಜಕರಾಗಿದ್ದರು. ಆದರೆ, 2014ರ ಮಾರ್ಚ್ 12ರಂದು ಅದನ್ನು ನಿಷ್ಕ್ರಿಯಗೊಳಿಸಲಾಗಿತ್ತು.

‘ಮಂಡಳಿಯನ್ನು ಅನಿರ್ದಿಷ್ಟಾವಧಿ ತನಕ ಅಮಾನ್ಯ ಸ್ಥಿತಿಯಲ್ಲಿ ಇರಿಸುವುದು ಸುಪ್ರೀಂ ಕೋರ್ಟ್ ಆದೇಶಗಳಿಗೆ ವಿರುದ್ಧವಾಗಿದೆ’ ಎಂದು ನ್ಯಾಯಾಂಗ ಸದಸ್ಯ ಸುರೇಶ್‌ಕುಮಾರ್ ಮೊಂಗಾ ಮತ್ತು ಆಡಳಿತ ಸದಸ್ಯ ರಾಕೇಶ್‌ಕುಮಾರ್ ಗುಪ್ತಾ ಅವರನ್ನು ಒಳಗೊಂಡ ಸಿಎಟಿ ಪೀಠ(ಬೆಂಗಳೂರು) ಅಭಿಪ್ರಾಯಪಟ್ಟಿತು.

‘2020ರ ಸೆಪ್ಟೆಂಬರ್ 28ರಂದು ಬಿ.ಶರತ್ ಅವರನ್ನು ವರ್ಗಾವಣೆ ಮಾಡಿ ಹೊರಡಿಸಿರುವ ಆದೇಶವನ್ನು ಮಂಡಳಿಯ ಶಿಫಾರಸು ಆಧರಿಸಿ ಪುನರ್ ಪರಿಶೀಲಿಸಬೇಕು’ ಎಂದು ಸಿಎಟಿ ನಿರ್ದೇಶನ ನೀಡಿತು.

ಶರತ್ ವರ್ಗಾವಣೆ ಪ್ರಕರಣವನ್ನು ವಿಚಾರಣೆ ನಡೆಸಬೇಕು ಎಂದು ಮಂಡಳಿಗೂ ಪೀಠ ಆದೇಶಿಸಿತು. ಈ ಎಲ್ಲಾ ಪ್ರಕ್ರಿಯೆಗಳು ಒಂದು ತಿಂಗಳ ಅವಧಿಯಲ್ಲಿ ಪೂರ್ಣಗೊಳ್ಳಬೇಕು ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT