ಮೈಸೂರು: 'ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶ ಸಬ್ ಕಾ ವಿಕಾಸ್ ಅಲ್ಲ, ಸಬ್ ಕಾ ಸರ್ವನಾಶ್ ಆಗಿದೆ' ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.

ಜಿಲ್ಲೆಯ ನಂಜನಗೂಡು ತಾಲ್ಲೂಕಿನ ವರುಣಾ ವಿಧಾನಸಭಾ ಕ್ಷೇತ್ರದ ತಗಡೂರು ಗ್ರಾಮದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿಯಿಂದ ಸೋಮವಾರ ಆಯೋಜಿಸಿದ್ದ ಸ್ವಾತಂತ್ರ್ಯ ನಡಿಗೆ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, 'ದೇಶವಿಂದು ಆರ್ಥಿಕ ಹಾಗೂ ಸಾಮಾಜಿಕವಾಗಿ ಬೆಳೆದಿರುವುದಕ್ಕೆ ಕಾಂಗ್ರೆಸ್ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ನೀಡಿದ ಸಂವಿಧಾನ ಕಾರಣ. ಮೋದಿ ಪ್ರಧಾನಿಯಾಗಿದ್ದು ಮತ್ತು ನಾನು ಮುಖ್ಯಮಂತ್ರಿ ಆಗಿದ್ದು ಸಂವಿಧಾನದ ಕಾರಣದಿಂದಲೇ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ನಾವೆಲ್ಲರೂ ಇಂದು ಸ್ವಾತಂತ್ರ್ಯದ ಗಾಳಿಯನ್ನು ಉಸಿರಾಡುತ್ತಿದ್ದರೆ ಅದಕ್ಕೆ ಕಾರಣ ಕಾಂಗ್ರೆಸ್. ಈ ವಿಷಯದಲ್ಲಿ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರ ಕೊಡುಗೆಯೇನೂ ಇಲ್ಲ' ಎಂದು ತಿಳಿಸಿದರು.

'ಬಿಜೆಪಿಯವರಾಗಲಿ, ಆರ್‌ಎಸ್‌ಎಸ್‌ನವರಾಗಲಿ ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಾಣ ತ್ಯಾಗ ಮಾಡಿಲ್ಲ. ಆ ರೀತಿ ಮಾಡಿರುವ ಯಾರಾದರೂ ಇದ್ದರೆ ತೋರಿಸಲಿ. ಅಂಥವರು ಈಗ ನಮಗೆ ದೇಶಭಕ್ತಿಯ ಪಾಠ ಮಾಡುತ್ತಿದ್ದಾರೆ' ಎಂದು ವ್ಯಂಗ್ಯವಾಡಿದರು. 'ದೇಶಕ್ಕೆ ಆರ್‌ಎಸ್‌ಎಸ್‌ನವರ ಕೊಡುಗೆ ಏನು' ಎಂದು ಪ್ರಶ್ನಿಸಿದರು.

'ಹಿಂದೆಲ್ಲಾ ರಾಷ್ಟ್ರಧ್ವಜವನ್ನು ಗೌರವಿಸದೇ, ಒಪ್ಪದೆ ಈಗ ಹರ್ ಘರ್ ತಿರಂಗಾ ಎಂದು ಹೇಳುತ್ತಿರುವುದು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರ ನಾಟಕ ಅಲ್ಲವೇ? ಮೋದಿಗೆ ನಾಚಿಕೆ ಆಗೋಲ್ಲವೇ? ಆರ್‌ಎಸ್‌ಎಸ್ ಕೇಂದ್ರ ಕಚೇರಿಯಲ್ಲಿ ರಾಷ್ಟ್ರಧ್ವಜವನ್ನು 52 ವರ್ಷಗಳವರೆಗೆ ಹಾರಿಸಿರಲಿಲ್ಲ. ಅವರು ಭಗವಾಧ್ವಜ ಹಾರಿಸುತ್ತಿದ್ದರು. ಈಗ ರಾಷ್ಟ್ರಧ್ವಜದ ಬಗ್ಗೆ ಮಾತನಾಡುತ್ತಿದ್ದಾರೆ' ಎಂದು ಟೀಕಿಸಿದರು. 'ಇಂತಹ ಬಿಜೆಪಿಯವರಿಗೆ ಮತ ಹಾಕಬೇಕಾ? ಎಂದು ಕೇಳಿದರು.

'ಬಿಜೆಪಿ, ಆರ್‌ಎಸ್‌ಎಸ್ ಈ ದೇಶದ ಹಾಗೂ ನಮ್ಮ ಬಾವುಟದ ಪರವಾಗಿ ಇರುವವರಲ್ಲ. ಕೈ ಮುಗಿದು ಕೇಳಿಕೊಳ್ಳುತ್ತೇನೆ, ನೀವ್ಯಾರೂ ಬಿಜೆಪಿಗೆ ಹೋಗಬೇಡಿ. ನಮ್ಮಲ್ಲಿ ಯಾರೋ ಇಷ್ಟವಿಲ್ಲ ಎಂಬ ಕಾರಣಕ್ಕೆ ಬೇರೆಡೆಗೆ ಹೋಗಬೇಡಿ' ಎಂದು ಕಾರ್ಯಕರ್ತರು ಮತ್ತು ಮುಖಂಡರನ್ನು ಕೋರಿಕೊಂಡರು.

'ನಾನು ದೇಶಕ್ಕೆ ಸ್ವಾತಂತ್ರ್ಯ ಬರುವುದಕ್ಕಿಂತ 12 ದಿನ ಮುಂಚೆ ಹುಟ್ಟಿದವನು. ನರೇಂದ್ರ ಮೋದಿ ಸ್ವಾತಂತ್ರ್ಯ ಬಂದ ನಂತರ ಹುಟ್ಟಿರುವ ಗಿರಾಕಿ' ಎಂದು ವ್ಯಂಗ್ಯವಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.