ಬಾಗಲಕೋಟೆ: ಸುಳ್ಳು ಹೇಳಿದ್ದರಿಂದಲೇ ಸಿದ್ದರಾಮಯ್ಯ ಅವರ ಸ್ಥಿತಿ ಓಡು ಮಗಾ ಓಡು ಎನ್ನುವಂತಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಟೀಕಿಸಿದರು

ಬಿಜೆಪಿಗರು ಸುಳ್ಳಿಗರು ಎಂಬ ಸಿದ್ದರಾಮಯ್ಯ ಅವರ ಟೀಕೆಗೆ ಉತ್ತರಿಸಿದ ಅವರು, ಸುಳ್ಳು ಹೇಳುತ್ತಿರುವುದರಿಂದಲೇ ಕ್ಷೇತ್ರದಿಂದ ಕ್ಷೇತ್ರಕ್ಕೆ ಓಡುತ್ತಿದ್ದಾರೆ ಎಂದರು.

ವರುಣಾದಿಂದ ಚಾಮುಂಡೇಶ್ವರಿಗೆ, ಅಲ್ಲಿಂದ ಬಾದಾಮಿಗೆ, ಈಗ ಅಲ್ಲಿಂದ ಕೋಲಾರಕ್ಕೆ ಹೋಗುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.

ಬಾದಾಮಿಯಲ್ಲಿ ಹೇಳಿದ ಭರವಸೆ ಈಡೇರಿಸದ್ದರಿಂದ ಸೋಲಿನ ಭೀತಿಯಿಂದ ಓಡಿ ಹೋಗುತ್ತಿದ್ದಾರೆ. ಕಲಾದಗಿಗೂ ಬಾದಾಮಿ ಜನರು ಬಂದು ಅಹವಾಲು ಸಲ್ಲಿಸಿದ್ದಾರೆ. ಇದು ಅವರು ಕೆಲಸ ಮಾಡದ್ದನ್ನು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.

ಕೆಲಸ ಮಾಡಿದರೆ ಜನ ಪ್ರೀತಿಯಿಂದ ನೋಡುತ್ತಾರೆ. ಕೆಲಸ ಮಾಡದೆ ಪ್ರೀತಿ ತೋರಿಸು ಎಂದರೆ ಯಾರು ತೋರಿಸುತ್ತಾರೆ. ಜನರ ಪ್ರೀತಿ ಗಳಿಸಿ ಒಂದೆಡೆ ನಿಲ್ಲಬೇಕು ಎಂದು ಟೀಕಿಸಿದರು.

ಸಿದ್ದರಾಮಯ್ಯ ಅಧಿಕಾರ ಬಂದಾಗ ಭಾಷಣ ಮಾಡಿಕೊಂಡು ತಿರುಗಾಡುತ್ತಾರೆ. ಅಧಿಕಾರ ಹೋದ ಮೇಲೆ ಕ್ಷೇತ್ರಕ್ಕೆ ಬಂದು ಇನ್ನೊಂದು ಅವಕಾಶ ಕೊಡಿ ಎನ್ನುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.