ಬೆಂಗಳೂರು: ಸಿದ್ದರಾಮಯ್ಯ ಮುಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆಟವೇ ನಡೆಯುತ್ತಿಲ್ಲ ಎಂದು ಬಿಜೆಪಿ ಟೀಕಿಸಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಡಿಕೆಶಿ ಅವರೇ ನೀವು ಹೇಳಿದಂತೆಯೇ ಆಗಲಿದೆ. ನೀವು ಊಟ ತಯಾರಿಸಿಡಿ, ಊಟ ಮಾಡಲು ಬೇರೆಯವರು ತುದಿಗಾಲಲ್ಲಿ ನಿಂತಿದ್ದಾರೆ. ಸಿದ್ದರಾಮಯ್ಯ ಅವರೆದುರು ಡಿಕೆಶಿ ಇಷ್ಟೊಂದು ಅಸಹಾಯಕ ಎನಿಸಿಕೊಳ್ಳಬಾರದಿತ್ತು’ ಎಂದು ತಿಳಿಸಿದೆ.

‘ಮೊದಲೆಲ್ಲ, ಕಾಂಗ್ರೆಸ್ ನಾಯಕರ ಕಾರ್ಯಕ್ರಮ ಡಿಕೆಶಿ ಪರವಾಗಿರುತ್ತಿತ್ತು. ಈಗ ಆ ಕಾರ್ಯಕ್ರಮಗಳು ಸಿದ್ದರಾಮಯ್ಯ ಪರವಾಗಿ ರೂಪುಗೊಳ್ಳುತ್ತಿವೆ. ಶಾಸಕರ ಧ್ವನಿಗಳೂ ಸಿದ್ದರಾಮಯ್ಯ ಪರವಾಗಿ ಮೊಳಗುತ್ತಿದೆ. ಮುಂದೆ ಕನಕಪುರದಲ್ಲೂ ಸಿದ್ದರಾಮಯ್ಯ ಹವಾ ಮೂಡಿಸುವರೇ?’ ಎಂದು ಬಿಜೆಪಿ ಪ್ರಶ್ನಿಸಿದೆ.

‘ಪರಿಷತ್ ಟಿಕೆಟ್ ವಿಚಾರದಲ್ಲೂ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವಿನ ಮುನಿಸು ತಾರಕಕ್ಕೇರಿದೆ. ಸಿದ್ದರಾಮಯ್ಯ ಮುಂದೆ ಕೆಪಿಸಿಸಿ ಅಧ್ಯಕ್ಷರ ಆಟವೇ ನಡೆಯುತ್ತಿಲ್ಲ ಎಂಬ ಪರಿಸ್ಥಿತಿ ಕಾಂಗ್ರೆಸ್ ಪಕ್ಷದಲ್ಲಿದೆ. ಡಿಕೆಶಿ ನೀವು ಅಷ್ಟೊಂದು ಅಸಹಾಯಕರೇ?’ ಎಂದು ಬಿಜೆಪಿ ಕೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.