ಶುಕ್ರವಾರ, ಜುಲೈ 30, 2021
23 °C

ಕೋವಿಡ್ ಸಮಯದಲ್ಲೂ ಬೇರೆ ಕ್ಷೇತ್ರ ಹುಡುಕುತ್ತಿರುವ ಸಿದ್ದರಾಮಯ್ಯ: ಬಿಜೆಪಿ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಿದ್ದರಾಮಯ್ಯ ಉಂಡಮನೆಯ ಜಂತಿ ಎಣಿಸುವ ಜಾಯಮಾ‌ನದವರೆಂದು ದೇವೇಗೌಡರು ಈ ಹಿಂದೆ ಆರೋಪಿಸಿದ್ದರು. ಅದು ಈಗ ನಿಜವಾಗುತ್ತಿದೆ. ರಾಜಕೀಯ ಪುನರ್ಜನ್ಮ ನೀಡಿದ ಬಾದಾಮಿಯಿಂದ ಪಲಾಯನ ಮಾಡುವುದಕ್ಕೆ ಸಿದ್ದರಾಮಯ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಟ್ವೀಟ್ ಮೂಲಕ ಟೀಕಿಸಿದೆ.


ಸಿದ್ದರಾಮಯ್ಯನವರೇ ಅವರೇ, ನೀವೆಷ್ಟು ಕೃತಘ್ನರು ಎಂಬುದೀಗ ಮನದಟ್ಟಾಗುತ್ತಿದೆ.

 

ರಾಜಕೀಯ ಜೀವನ‌ ಮುಗಿದೇ ಹೋಯಿತು ಎನ್ನುವಾಗ ಸಿದ್ದರಾಮಯ್ಯನವರ ಕೈ ಹಿಡಿದದ್ದು ಬಾದಾಮಿ ಕ್ಷೇತ್ರದ ಜನತೆ. 
ಆದರೆ, ಕೈ ಹಿಡಿದ ಜನರಿಗೆ ಸಂಕಟದ ಸಂದರ್ಭದಲ್ಲಿ ಅನ್ಯಾಯ ಮಾಡಿದರು. ಕ್ಷೇತ್ರದ ಜನತೆ ಕೋವಿಡ್‌ನಿಂದ ಕಂಗೆಟ್ಟಿರುವಾಗ ಮತ್ತೊಂದು ವಲಸೆಗೆ ಲೆಕ್ಕ ಹಾಕುತ್ತಾ ಕುಳಿತಿರುವುದು ಬಾದಾಮಿ ಜನತೆಗೆ ಮಾಡಿರುವ ಅವಮಾನ ಎಂದು ಟೀಕಿಸಿದೆ.

ಇದೇವೇಳೆ, ದಿನಪತ್ರಿಕೆಯೊಂದರ ವರದಿಯ ಚಿತ್ರ ಟ್ವೀಟ್ ಮಾಡಿರುವ ಬಿಜೆಪಿ, ಕೋವಿಡ್ ಸಮಯದಲ್ಲೂ ಸಿದ್ದರಾಮಯ್ಯ ಮತ್ತೊಂದು ವಲಸೆಗೆ ಸಿದ್ದತೆ ನಡೆಸುತ್ತಿದ್ದಾರೆ ಎಂದು ಈ ಮೊದಲೇ ಹೇಳಿದ್ದೆವು. ಈಗ ಆ ಲೆಕ್ಕಾಚಾರ ಸತ್ಯವಾಗಿದೆ ಎಂಬುದಕ್ಕೆ ಸಾಕ್ಷಿ ಲಭಿಸಿದೆ. ಖುದ್ದು ಚಾಮರಾಜ ಪೇಟೆ ಶಾಸಕರೇ(ಜಮೀರ್ ಅಹಮ್ಮದ್) ಸಿದ್ದರಾಮಯ್ಯಗೆ ಆಹ್ವಾನ ನೀಡಿದ್ದಾರೆ. ಸಿಎಂ ಕನಸು ಇನ್ನೂ ಬಿಟ್ಟಿಲ್ವೇ ಸಿದ್ದರಾಮಯ್ಯ? ಎಂದು ಬಿಜೆಪಿ ವ್ಯವ್ಯ ಮಾಡಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು