ಗುರುವಾರ , ಜನವರಿ 27, 2022
20 °C

Mekedatu: ಸಿದ್ದರಾಮಯ್ಯ ವಿಶ್ರಾಂತಿ: ಪಾದಯಾತ್ರೆಗೆ ಗೈರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅಸ್ವಸ್ಥಗೊಂಡಿದ್ದು, ಮೇಕೆದಾಟು ಪಾದಯಾತ್ರೆಯಲ್ಲಿ ಮಂಗಳವಾರದಿಂದ ( ಜ.11) ಭಾಗವಹಿಸಲಿದ್ದಾರೆ. 

ಪಾದಯಾತ್ರೆಯ ಉದ್ಘಾಟನೆಯಲ್ಲಿ ಭಾಗವಹಿಸಿದ್ದ ಅವರು, ಸ್ವಲ್ಲ ದೂರದವರೆಗೆ ನಡೆದಿದ್ದರು. ಬಳಿಕ, ಅನಾರೋಗ್ಯದ ಕಾರಣಕ್ಕೆ ಅರ್ಧದಿಂದಲೇ ಪಾದಯಾತ್ರೆಯಿಂದ ವಾಪಾಸಾಗಿದ್ದರು. 

ಸುಸ್ತು, ಜ್ವರದಿಂದ ಬಳಲಿದ್ದ ಅವರು ಬೆಂಗಳೂರಿಗೆ ವಾಪಾಸಾಗಿ ಕುಟುಂಬದ ವೈದ್ಯರಿಂದ ಚಿಕಿತ್ಸೆ ಪಡೆದು, ಅವರ ಸಲಹೆಯಂತೆ ವಿಶ್ರಾಂತಿ ಪಡೆದಿದ್ದರು. 

ವೈದ್ಯರ ಸಲಹೆ ಮೇರೆಗೆ ಸಿದ್ದರಾಮಯ್ಯ ಅವರು ಸೋಮವಾರ ಕೂಡಾ ತಮ್ಮ‌ ಮನೆಯಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. ಮಂಗಳವಾರದಿಂದ ಮತ್ತೆ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.‌

ಇದನ್ನೂ ಓದಿ: 


 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು