ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹1.39 ಕೋಟಿ ಮೌಲ್ಯದ ಸ್ಪಿರಿಟ್ ವಶ

Last Updated 15 ಅಕ್ಟೋಬರ್ 2020, 6:25 IST
ಅಕ್ಷರ ಗಾತ್ರ

ಕೆಜಿಎಫ್‌: ಸುಮಾರು 1.20 ಲಕ್ಷ ಲೀಟರ್ ಸ್ಪಿರಿಟ್‌ನ್ನು ಅಕ್ರಮವಾಗಿ ನಾಲ್ಕು ಟ್ಯಾಂಕರ್‌ಗಳಲ್ಲಿ ಸಾಗಿಸುತ್ತಿದ್ದ ಪ್ರಕರಣವನ್ನು ಅಬಕಾರಿ ದಳದ ಸಿಬ್ಬಂದಿ ಮಂಗಳವಾರ ರಾತ್ರಿ ರಾಜ್ಯದ ಗಡಿಯಲ್ಲಿ ಪತ್ತೆ ಹಚ್ಚಿದ್ದಾರೆ.

ವಶಪಡಿಸಿಕೊಂಡಿರುವ ಸ್ಪಿರಿಟ್‌ನ ಮೌಲ್ಯ ಸುಮಾರು ₹1.39ಕೋಟಿ ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳು ಅಂದಾಜು ಮಾಡಿದ್ದಾರೆ.

ನ್ಯೂಟ್ರಲ್‌ ಸ್ಪಿರಿಟ್‌ ಎಂದು ಹೇಳಲಾಗುವ ಸ್ಪಿರಿಟ್‌ನ್ನು ಆಂಧ್ರಪ್ರದೇಶದಿಂದ ಕೇರಳಕ್ಕೆ ಸಾಗಿಸಲಾಗುತ್ತಿತ್ತು. ರಾಜ್ಯದ ಗಡಿ ಭಾಗದಲ್ಲಿರುವ ಪಂತರ ಹಳ್ಳಿ ಪೆಟ್ರೋಲ್ ಬಂಕ್ ಬಳಿ ನಾಲ್ಕು ಮಹೀಂದ್ರ ಟ್ಯಾಂಕರ್ ಗಳನ್ನು ಪತ್ತೆ ಹಚ್ಚಿದ ಅಬಕಾರಿ ಅಧಿಕಾರಿಗಳು ರಹದಾರಿಯಿಲ್ಲದೆ ಕರ್ನಾಟಕದಲ್ಲಿ ಸಂಚರಿಸುತ್ತಿದ್ದ ಕಾರಣದಿಂದಾಗಿ ವಶಪಡಿಸಿಕೊಂಡರು. ಈ ಸಂಬಂಧ ನವಾಜಾ ಜಾನಿ, ಗೋಪಾಲ ರಾವ್‌, ರಮೇಶ್ ಮತ್ತು ವೀರಾಂಜನೇಯಲು ಎಂಬುವರನ್ನು ಬಂಧಿಸಲಾಗಿದೆ.

ಅಬಕಾರಿ ಇಲಾಖೆಯ ಅಧಿಕಾರಿಗಳಾದ ನರಸಿಂಹಮೂರ್ತಿ, ಎಂ.ಆರ್.ಸುಮಾ, ತಿಮ್ಮಾರೆಡ್ಡಿ, ಲಕ್ಷ್ಮಣ ಮಾದಾರ, ಮಂಜುನಾಥ, ಅಂಬಾಸಾ ಮಾದಾರ, ಹನುಮಂತ ವಾಗ್ಮೋರೆ, ನವೀನ್‌, ಶಿವಶಂಕರ್‌, ಗಿರೀಶ್ ಬಾಬು, ನರಸಿಂಹ, ಲೋಕೇಶ್‌, ಸುಬ್ರಹ್ಮಣಿ, ಅಶೋಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT