ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಈ ವರ್ಷವೂ ಬಾಲಕಿಯರದ್ದೇ ಮೇಲುಗೈ

ಶೇ 71.08 ಫಲಿತಾಂಶ 
Last Updated 11 ಆಗಸ್ಟ್ 2020, 8:38 IST
ಅಕ್ಷರ ಗಾತ್ರ
ADVERTISEMENT
""
""
""

ಬೆಂಗಳೂರು: 2019–20ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು,ಶೇ 71.08ರಷ್ಟು ಫಲಿತಾಂಶ ಬಂದಿದೆ.5.82 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಸಚಿವ ಎಸ್.ಸುರೇಶ್‌ಕುಮಾರ್‌ ಹೇಳಿದರು.

‘ಕೊರೊನಾ ಸೋಂಕಿನ ಕಾರಣದಿಂದ ಪರೀಕ್ಷೆ ಬರೆಯುವುದಿಲ್ಲ ಎಂದು ಬಹಳಷ್ಟು ಜನ ಆತಂಕದಲ್ಲಿದ್ದರು. ಆದರೂ, ಯಶಸ್ವಿಯಾಗಿ ಪರೀಕ್ಷೆ ನಡೆಸಲಾಯಿತು. 18,067 ವಿದ್ಯಾರ್ಥಿಗಳು ಮೊದಲು ಪರೀಕ್ಷೆ ಬರೆಯದೆ, ಪೂರಕ ಪರೀಕ್ಷೆಗೆ ಕುಳಿತಿದ್ದರು. ಒಟ್ಟು ಪರೀಕ್ಷೆಗೆ ಹಾಜರಾದವರು 8.11 ಲಕ್ಷ ಜನ ಪರೀಕ್ಷೆಗೆ ಹಾಜರಾಗಿದ್ದರು. 227 ಮೌಲ್ಯಮಾಪನ ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯಿತು. 52,219 ಮೌಲ್ಯಮಾಪಕರು ಉತ್ತರಪತ್ರಿಕೆಗಳ ಮೌಲ್ಯಮಾಪನ ಮಾಡಿದ್ದಾರೆ’ ಎಂದರು.

kseeb.kar.nic.in, karresults.nic.in ಮತ್ತುresults.nic.in ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ಲಭ್ಯವಿದೆ.ಮಂಗಳವಾರ ಬೆಳಿಗ್ಗೆ ಆಯಾ ಶಾಲೆಗಳಲ್ಲಿ ಫಲಿತಾಂಶ ನೋಡಬಹುದು.

ಚಿಕ್ಕಬಳ್ಳಾಪುರದಲ್ಲಿ ಅತಿಹೆಚ್ಚು ಮತ್ತು ಯಾದರಿಗಿಯಲ್ಲಿ ಅತಿ ಕಡಿಮೆ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ತನ್ಮಯಿ ಐ.ಪಿ. (ಸೇಂಟ್ ಜೋಸೆಫ್ ಕಾನ್ವೆಂಟ್, ಚಿಕ್ಕಮಗಳೂರು)

ಈ ಬಾರಿಯೂ ಬಾಲಕಿಯರದೇ ಮೇಲುಗೈ
ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳ ಪೈಕಿ5,82,316 ಮಂದಿ ಉತ್ತೀರ್ಣರಾಗಿದ್ದು, 2,28,734ಅನುತ್ತೀರ್ಣರಾಗಿದ್ದಾರೆ.ಈ ಬಾರಿ ಒಟ್ಟು ಶೇ.71.80 ಫಲಿತಾಂಶ ಬಂದಿದೆ.ಕಳೆದ ಸಾಲಿನಲ್ಲಿಶೇ 73.70 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು.ಶೇ. 66.41ಬಾಲಕರು ಮತ್ತುಶೇ.77.74ಬಾಲಕಿಯರು ಉತ್ತೀರ್ಣರಾಗಿದ್ದಾರೆ.

ಒಟ್ಟು227 ಮೌಲ್ಯಮಾಪನ ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆದಿತ್ತು. 52,219 ಮೌಲ್ಯಮಾಪಕರು 8 ಲಕ್ಷ ವಿದ್ಯಾರ್ಥಿಗಳಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸಿದ್ದರು.

ಜುಲೈ 13ರಿಂದ ಮೌಲ್ಯಮಾಪನ ಪ್ರ‌ಕ್ರಿಯೆ ಆರಂಭವಾಗಿತ್ತು.ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್‌ಡೌನ್ ಇದ್ದ ಕಾರಣ ಎರಡು ದಿನ ತಡವಾಗಿ ಮೌಲ್ಯಮಾಪನ ಆರಂಭವಾಗಿತ್ತು.

ಫಲಿತಾಂಶ ವಿವರ
ಕನ್ನಡ ಮಾಧ್ಯಮದಲ್ಲಿ ಶೇ. 70.49
ಇಂಗ್ಲಿಷ್ ಮಾಧ್ಯಮದಲ್ಲಿ ಶೇ. 84.98

6 ಮಂದಿಗೆ ಶೇ.100ಅಂಕ
ಈ ಬಾರಿ ಒಟ್ಟು ಆರು ವಿದ್ಯಾರ್ಥಿಗಳು ಶೇ. 100 ಅಂಕ ಗಳಿಸಿದ್ದಾರೆ. ಕಳೆದ ಸಾಲಿನಲ್ಲಿ ಇಬ್ಬರು ಈ ಸಾಧನೆ ಮಾಡಿದ್ದರು. 11 ವಿದ್ಯಾರ್ಥಿಗಳು 624 ಅಂಕ ಗಳಿಸಿಕೊಂಡಿದ್ದಾರೆ. 45 ವಿದ್ಯಾರ್ಥಿಗಳು 623 ಅಂಕ ಪಡೆದಿದ್ದಾರೆ. 117 ವಿದ್ಯಾರ್ಥಿಗಳು 620 ಅಂಕ ಗಳಿಸಿದ್ದಾರೆ.
1. ಸನ್ನಿಧಿ ಮಹಾಬಲೇಶ್ವರ ಹೆಗಡೆ (ಸರ್ಕಾರಿ ಮಾರಿಕಾಂಬಾ ಪಿಯು ಕಾಲೇಜು, ಶಿರಸಿ)
2. ಚೈತನ್ಯ ಕೆ.ಎಸ್. (ಸೇಂಟ್ ಮೇರಿ ಹೈಸ್ಕೂಲ್, ಬೆಂಗಳೂರು)
3. ನಿಖಿಲೇಶ್ ಎಂ.ಮರಳಿ (ಪೂರ್ಣಪ್ರಜ್ಞ ಶಿಕ್ಷಣ ಕೇಂದ್ರ, ಬೆಂಗಳೂರು)
4. ಧೀರಜ್ ರೆಡ್ಡಿ ಎಂ.ಪಿ. (ಸತ್ಯಸಾಯಿ ಸರಸ್ವತಿ ಇಂಗ್ಲಿಷ್ ಮಾಧ್ಯಮ ಶಾಲೆ, ಮಂಡ್ಯ)
5. ಅನುಷ್ ಎ.ಎಲ್. (ಕುಮಾರಸ್ವಾಮಿ ಇಂಗ್ಲಿಷ್ ಮೀಡಿಯಂ ಸ್ಕೂಲ್, ಸುಳ್ಯ)
6. ತನ್ಮಯಿ ಐ.ಪಿ. (ಸೇಂಟ್ ಜೋಸೆಫ್ ಕಾನ್ವೆಂಟ್, ಚಿಕ್ಕಮಗಳೂರು)

624 ಅಂಕ ಗಳಿಸಿದವರು
ಬೆಂಗಳೂರಿನ ಜಿ.ಕೆ. ಅಮೋಘ್, ಪ್ರಣವ್‌ ವಿಜಯ್‌ ನಾಡಿಗೇರ, ಎಂ.ಡಿ. ವೀಣಾ, ನಿಹಾರಿಕಾ ಸಂತೋಷ್‌ ಕುಲಕರ್ಣಿ, ಎ.ಎಸ್. ಸ್ಫೂರ್ತಿ, ಉತ್ತರ ಕನ್ನಡದ ಅನಿರುದ್ಧ್‌ ಸುರೇಶ್‌ ಗುತ್ತೀಕರ್, ತುಮಕೂರಿನ ಜಿ.ಎಂ. ಮಹೇಶ್, ಉಡುಪಿಯ ಸುರಭಿ ಎಸ್.ಶೆಟ್ಟಿ, ದಕ್ಷಿಣ ಕನ್ನಡದ ಸುಮುಖ ಸುಬ್ರಹ್ಮಣ್ಯ ಶೆಟ್ಟಿ, ನಿಧಿ ರಾವ್, ಶಿವಮೊಗ್ಗದ ಟಿ.ಎಸ್. ಅಭಿರಾಮ 625ಕ್ಕೆ 624 ಅಂಕಗಳನ್ನು ಪಡೆದಿದ್ದಾರೆ.

ಅನುಷ್ ಎ.ಎಲ್. (ಕುಮಾರಸ್ವಾಮಿ ಇಂಗ್ಲಿಷ್ ಮೀಡಿಯಂ ಸ್ಕೂಲ್, ಸುಳ್ಯ)

ಒಟ್ಟು 1,550 ಶಾಲೆಗಳು ಶೇ 100ರ ಫಲಿತಾಂಶ ಪಡೆದಿವೆ. ಕಳೆದ ವರ್ಷ 1626 ಶಾಲೆಗಳು ಶೇ 100ರ ಫಲಿತಾಂಶ ಪಡೆದಿದ್ದವು.
ಶೇ 100ರ ಫಲಿತಾಂಶ ಪಡೆದ ಶಾಲೆಗಳ ವಿವರ
* ಸರ್ಕಾರಿ ಶಾಲೆಗಳು- 501
* ಅನುದಾನಿತ - 139
* ಅನುದಾನ ರಹಿತ - 910

ಒಟ್ಟು 62 ಶಾಲೆಗಳು ಶೂನ್ಯ ಫಲಿತಾಂಶ ದಾಖಲಿಸಿವೆ. ಕಳೆದ ವರ್ಷ 46 ಶಾಲೆಗಳು ಶೂನ್ಯ ಫಲಿತಾಂಶ ಪಡೆದಿದ್ದವು.
ಶೂನ್ಯ ಫಲಿತಾಂಶ ಪಡೆದ ಶಾಲೆಗಳ ವಿವರ.
* ಸರ್ಕಾರಿ ಶಾಲೆಗಳು - 4
*ಅನುದಾನಿತ - 11
* ಅನುದಾನ ರಹಿತ - 47

ಜಿಲ್ಲೆಗಳಿಗೆ ರ‍್ಯಾಂಕಿಂಗ್‌ ಬದಲು ಗ್ರೇಡ್‌
ಇದೇ ಮೊದಲ ಬಾರಿಗೆ ಜಿಲ್ಲೆಗಳಿಗೆ ಗ್ರೇಡ್‌ ನೀಡಲಾಗಿದೆ. ರ‍್ಯಾಂಕಿಂಗ್‌ ಬದಲು, ಎ,ಬಿ ಮತ್ತು ಸಿ ಎಂದು ಗ್ರೇಡ್‌ ಕೊಡಲಾಗಿದೆ. ಒಂದು ಜಿಲ್ಲೆಯ ಒಟ್ಟು ಫಲಿತಾಂಶದಲ್ಲಿ ಶೇ 40ರಷ್ಟು, ಉಳಿದ ಪ್ರಮಾಣವನ್ನು ಅತ್ಯುನ್ನತ ದರ್ಜೆ ಮತ್ತು ಪ್ರಥಮ ದರ್ಜೆ ಪಡೆದ ವಿದ್ಯಾರ್ಥಿಗಳ ಸಂಖ್ಯೆಯ ಆಧಾರದ ಮೇಲೆ ಗ್ರೇಡ್ ನೀಡಲಾಗಿದೆ. ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮಧುಗಿರಿ, ಮಂಡ್ಯ, ಚಿತ್ರದುರ್ಗ, ಕೋಲಾರ, ಉಡುಪಿ, ರಾಮನಗರ, ಹಾಸನ, ಉತ್ತರ ಕನ್ನಡ ಜಿಲ್ಲೆ ‘ಎ’ ಗ್ರೇಡ್‌ನಲ್ಲಿವೆ.

ರಾಮನಗರಕ್ಕೆ ಎ ಗ್ರೇಡ್
ರಾಮನಗರ:
ಜಿಲ್ಲೆಯು ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಎ ಗ್ರೇಡ್ ನೊಂದಿಗೆ ಎಂಟನೇ ಸ್ಥಾನ ಪಡೆದಿದೆ‌. ಕಳೆದ ವರ್ಷ ಜಿಲ್ಲೆಯು ಎರಡನೇ ಸ್ಥಾನ ಗಳಿಸುವ ಮೂಲಕ ರಾಜ್ಯದ ಗಮನ ಸೆಳೆದಿತ್ತು. ಈ ವರ್ಷ ಆರು ಸ್ಥಾನ ಕೆಳಕ್ಕೆ ಕುಸಿದಿದೆ.

ಮಧುಗಿರಿ ‘ಎ’, ತುಮಕೂರು ‘ಬಿ’ ಗ್ರೇಡ್
ತುಮಕೂರು:
ಮಧುಗಿರಿ ಶೈಕ್ಷಣಿಕ ಜಿಲ್ಲೆಯು ‘ಎ’ ಮತ್ತು ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆ ‘ಬಿ’ ಗ್ರೇಡ್ ಫಲಿತಾಂಶಕ್ಕೆ ಭಾಜನವಾಗಿದೆ. ಕುಣಿಗಲ್ ತಾಲ್ಲೂಕಿನ ಜ್ಞಾನ ಭಾರತಿ ಪ್ರೌಢಶಾಲೆಯ ವಿದ್ಯಾರ್ಥಿ ಮಹೇಶ್ 624 ಅಂಕ ಪಡೆಯುವ ಮೂಲಕ ಜಿಲ್ಲೆಯಲ್ಲಿ (ಎರಡೂ ಶೈಕ್ಷಣಿಕ ಜಿಲ್ಲೆ ಸೇರಿ) ಹೆಚ್ಚು ಅಂಕ ಪಡೆದಿದ್ದಾರೆ.

ಚಿಕ್ಕೋಡಿಗೆ ‘ಬಿ’, ಬೆಳಗಾವಿಗೆ ‘ಸಿ’ ಗ್ರೇಡ್
ಬೆಳಗಾವಿ:
ಈ ಬಾರಿಯ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ‘ಬಿ’ ಗ್ರೇಡ್ ಹಾಗೂ ಬೆಳಗಾವಿ ಶೈಕ್ಷಣಿಕ ಜಿಲ್ಲೆಯು ‘ಸಿ’ ಗ್ರೇಡ್ ಗಳಿಸಿದೆ.

ಕೊರೊನಾ ಸೋಂಕಿನ ಆತಂಕದ ನಡುವೆಯೂ ‍ಪರೀಕ್ಷೆ ನಡೆದಿತ್ತು. ಈ ಬಾರಿ ‘ಗ್ರೇಡ್‌ ಪರಿಚಯಿಸಲಾಗಿದೆ.

2018-19ನೇ ಸಾಲಿನ ಪರೀಕ್ಷೆಯಲ್ಲಿ ಶೇ 77.43 ಫಲಿತಾಂಶದೊಂದಿಗೆ 24ನೇ ಸ್ಥಾನ ಗಳಿಸಿದ್ದ ಬೆಳಗಾವಿ, ಈ ಬಾರಿ ‘ಸಿ’ ಗ್ರೇಡ್‌ಗೆ ಕುಸಿದಿದೆ. ಕಳೆದ ಸಾಲಿನ ಪರೀಕ್ಷೆಯಲ್ಲಿ ಶೇ 84.09 ಫಲಿತಾಂಶದೊಂದಿಗೆ 13ನೇ ಸ್ಥಾನ ಪಡೆದಿದ್ದ ಚಿಕ್ಕೋಡಿ ಈ ಬಾರಿ ‘ಬಿ’ ಗ್ರೇಡ್‌ನಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT