ಶನಿವಾರ, ಜೂನ್ 19, 2021
26 °C

ಕೋವಿಡ್‌ ನಿರ್ವಹಣೆ: ಶಾಸಕರ ಅನುದಾನ ಬಳಕೆಗೆ ಸರ್ಕಾರ ಅನುಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿ ವೃದ್ಧಿ ಯೋಜನೆಯಡಿ ಪ್ರತಿ ಕ್ಷೇತ್ರಕ್ಕೆ ನೀಡಿರುವ ₹2 ಕೋಟಿ ಅನುದಾನದಲ್ಲಿ ಕನಿಷ್ಠ ಶೇ 25 ರಷ್ಟನ್ನು ಕೋವಿಡ್‌ ನಿರ್ವಹಣೆಗೆ ಅಗತ್ಯ ಇರುವ ಪರಿಕರ ಮತ್ತು ಆಸ್ಪತ್ರೆಗಳ ಸುಧಾರಣೆಗೆ ಬಳಸಲು ಸರ್ಕಾರ ಅನುಮತಿ ನೀಡಿದೆ.

ಹಲವು ಶಾಸಕರು ಈ ಸಂಬಂಧ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದರು. ಕೋವಿಡ್‌ಗೆ ಅಗತ್ಯವಿರುವ ವೈದ್ಯಕೀಯ ಉಪಕರಣಗಳನ್ನು ಖರೀದಿಸಿ ಸರ್ಕಾರಿ ಆಸ್ಪತ್ರೆಗಳಿಗೆ ಕೊಡಲು ಸಾಧ್ಯವಾಗುತ್ತದೆ. ಆಮ್ಲಜನಕ ಸಾಂದ್ರಕಗಳು, ಹಾಸಿಗೆ ವ್ಯವಸ್ಥೆ ಸೇರಿ ವಿವಿಧ ರೀತಿಯ ಕಾರ್ಯಗಳನ್ನು ಈ ಅನುದಾನದ ಮೂಲಕ ಮಾಡಬಹುದಾಗಿದೆ.

ಶಾಸಕರು ಶೇ 25 ರಷ್ಟು ಹಣವನ್ನು ಬಳಸಬಹುದಾಗಿದೆ ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ. ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯ ಒಟ್ಟು ಮೊತ್ತ ₹600 ಕೋಟಿ ಆಗುತ್ತದೆ. ಇದರಲ್ಲಿ ಶೇ 25ರಷ್ಟು ಎಂದರೆ ₹150 ಕೋಟಿಯಷ್ಟಾಗಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು