ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಮೈಸೂರಿನಲ್ಲಿದ್ದೇನೆ, ಸುಮಲತಾ ಮಂಡ್ಯದಲ್ಲಿದ್ದಾರೆಯೇ: ಪ್ರತಾಪ ಸಿಂಹ ಪ್ರಶ್ನೆ

Last Updated 9 ಜುಲೈ 2021, 13:31 IST
ಅಕ್ಷರ ಗಾತ್ರ

ಮಡಿಕೇರಿ: ‘ನಾನು ಮೈಸೂರು – ಕೊಡಗು ಸಂಸದ ಎಂಬ ಬಗ್ಗೆ ಜನರಿಗೆ ಯಾವುದೇ ಗೊಂದಲವಿಲ್ಲ. ಆದರೆ, ಮಂಡ್ಯ ಸಂಸದೆ ಸುಮಲತಾ ಅವರು ಮಂಡ್ಯದಲ್ಲಿ ಇದ್ದಾರೋ? ಇಲ್ಲವೋ? ಎಂಬ ಬಗ್ಗೆಯೇ ಜನರಿಗೇ ಗೊಂದಲವಿದೆ’ ಎಂದು ಸಂಸದ ಪ್ರತಾಪ ಸಿಂಹ ಟೀಕಿಸಿದರು.

‘ಪ್ರತಾಪ ಸಿಂಹ ಮೈಸೂರು ಸಂಸದರೋ ಅಥವಾ ಮಂಡ್ಯ ಸಂಸದರೋ’ ಎಂಬ ಸುಮಲತಾ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ನಾನು ಮೈಸೂರಿನಲ್ಲೇ ನೆಲೆಸಿದ್ದೇನೆ. ಕ್ಷೇತ್ರದಾದ್ಯಂತ ಸಂಚಾರ ನಡೆಸಿ ಅಭಿವೃದ್ಧಿ ಕೆಲಸಗಳನ್ನೂ ಮಾಡುತ್ತಿದ್ದೇನೆ. ಮತ ಹಾಕಿದವರಿಗೇಮಂಡ್ಯದ ಸಂಸದರ ಬಗ್ಗೆ ಗೊಂದಲವಿದೆ’ ಎಂದರು.

‘ಕೆಆರ್‌ಎಸ್‌ ಬಿರುಕು ಬಿಟ್ಟಿದೆ ಎಂದು ಹೇಳುವ ಮೊದಲು ಪರಿಶೀಲಿಸಬೇಕಿತ್ತು. ಮಾಹಿತಿ ತಪ್ಪಾಗಿದ್ದರೆ ಸಂಸದರು ಒಪ್ಪಿಕೊಳ್ಳಲಿ. ಕೆಆರ್‌ಎಸ್‌ಗೆ ಕೊಡಗು ಜಿಲ್ಲೆಯಿಂದಲೇ ನೀರು ಹೋಗಬೇಕು. ರಾಜ್ಯದ ವಿಚಾರದ ಬಗ್ಗೆ ಗೊಂದಲ ಸೃಷ್ಟಿಸಬಾರದು’ ಎಂದರು.

‘ಮೈಸೂರು ಜಿಲ್ಲಾಧಿಕಾರಿ ವರ್ಗಾವಣೆ ನಮ್ಮ ಜಿಲ್ಲೆಯ ವಿಚಾರ, ನಿಮಗ್ಯಾಕೆ’ ಎಂದು ಹರಿಹಾಯ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT