ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರದಿಂದ ಶಿಕ್ಷಕರ ವರ್ಗ; ಕೌನ್ಸೆಲಿಂಗ್‌ಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ

Last Updated 26 ನವೆಂಬರ್ 2021, 20:09 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಮತ್ತು ಪ್ರೌಢಶಾಲೆ ಮುಖ್ಯ ಶಿಕ್ಷಕರ ಸಾಮಾನ್ಯ ವರ್ಗಾವಣೆಯ ಪರಿಷ್ಕೃತ ವೇಳಾಪಟ್ಟಿಯನ್ನು ಶುಕ್ರವಾರ ಹೊರಡಿಸಿದ್ದು, ಇದೇ 29ರಿಂದ ಕೌನ್ಸೆಲಿಂಗ್‌ ನಡೆಯಲಿದೆ.

ಈ ಮೊದಲು ಸ್ಥಳ ಆಯ್ಕೆಗಾಗಿ ನ.24ರಿಂದ ನಡೆಯಬೇಕಿದ್ದ ಕೌನ್ಸೆಲಿಂಗ್ ಅನ್ನು ಮುಂದೂಡಲಾಗಿತ್ತು.

ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದ ವಿಭಾಗದ ಜಿಲ್ಲಾ ಹಂತದ ವರ್ಗಾವಣೆ ಪ್ರಕ್ರಿಯೆಗಳು ಇದೇ 29ರಂದು ಆರಂಭವಾಗಲಿವೆ. ಅಂತಿಮ ಆದ್ಯತಾ ಪಟ್ಟಿಯಂತೆ ಕೋರಿಕೆ ಸಲ್ಲಿಸಿರುವ ವರ್ಗಾವಣೆಗಳು ನಡೆಯಲಿವೆ. ಡಿ. 4ರಂದು ಈ ಪ್ರಕ್ರಿಯೆ ಮುಗಿಯಲಿದೆ. ಈ ಸಾಲಿನಲ್ಲಿ ಸಲ್ಲಿಸಿರುವ ಹೊಸ ಅರ್ಜಿಗಳಿಗೆ 2022ರ ಜ. 19ರಿಂದ 27ರವರೆಗೆ ಕೌನ್ಸೆಲಿಂಗ್‌ ನಡೆಯಲಿದೆ.

ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದ ನಿರ್ದಿಷ್ಟ ಹುದ್ದೆಗಳಲ್ಲಿ ಕನಿಷ್ಠ 3ರಿಂದ 5 ವರ್ಷ ಸೇವೆ ಸಲ್ಲಿಸಿದವರಿಗೆ ಡಿ. 5ರಿಂದ ಹಾಗೂ ಹೊಸ ಅರ್ಜಿಗಳಿಗೆ ಜ. 18ರಿಂದ 30ರವರೆಗೆ ಕೌನ್ಸೆಲಿಂಗ್ ನಡೆಯಲಿದೆ. ಪರಸ್ಪರ ವರ್ಗಾವಣೆ ಕೌನ್ಸೆಲಿಂಗ್‌ ಜ. 19ಕ್ಕೆ ನಡೆಯಲಿದೆ.

ವಿಭಾಗೀಯ ಹಂತದ ಕೌನ್ಸೆಲಿಂಗ್‌ ಡಿ.16ರಿಂದ ಹಾಗೂ ಅಂತರ್‌ ವಿಭಾಗೀಯ ಹಂತದ ವರ್ಗಾವಣೆಯ ಕೌನ್ಸೆಲಿಂಗ್‌ ಡಿ.24ರಿಂದ ನಡೆಯಲಿದೆ.

ಪ್ರೌಢಶಾಲಾ ವಿಭಾಗ: ಪ್ರೌಢಶಾಲಾ ಶಿಕ್ಷಕರ ಹಂತದ ಜಿಲ್ಲಾ ಹಂತದ ವರ್ಗಾವಣೆ ಡಿ. 2ರಿಂದ ನಡೆಯಲಿದೆ.ಪ್ರೌಢಶಾಲಾ ಶಿಕ್ಷಕರ ವೃಂದದ ನಿರ್ದಿಷ್ಟ ಹುದ್ದೆಗಳಲ್ಲಿ ಕನಿಷ್ಠ 3ರಿಂದ 5 ವರ್ಷಗಳ ಸೇವೆ ಸಲ್ಲಿಸಿದವರ ಕೌನ್ಸೆಲಿಂಗ್‌ ಡಿ.6ರಿಂದ ಆರಂಭವಾಗಲಿದೆ. ವಿಭಾಗೀಯ ಹಂತದ ವರ್ಗಾವಣೆ ಪ್ರಕ್ರಿಯೆಗಳು ಡಿ.20ರಿಂದ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT