ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಿ ಕಾಶ್ಮೀರ್ ಫೈಲ್ಸ್‌’ ಸಿನಿಮಾಗೆ ಕಾಂಗ್ರೆಸ್ ವಿರೋಧ ಏಕೆ: ಬಿಜೆಪಿ ಹೇಳಿದ್ದೇನು?

Last Updated 16 ಮಾರ್ಚ್ 2022, 11:44 IST
ಅಕ್ಷರ ಗಾತ್ರ

ಬೆಂಗಳೂರು: ವಿವೇಕ್ ರಂಜನ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್‌’ ಸಿನಿಮಾ ಕುರಿತು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಕೆಸರೆರಚಾಟ ಜೋರಾಗುತ್ತಿದೆ.

‘ದಿ ಕಾಶ್ಮೀರ್ ಫೈಲ್ಸ್‌’ ಸಿನಿಮಾ ಕುರಿತು ವಿಡಿಯೊ ಸಮೇತ ಟ್ವೀಟ್ ಮಾಡಿರುವ ಬಿಜೆಪಿ, ‘ಕಾಶ್ಮೀರ ಪ್ರತ್ಯೇಕತಾವಾದಿಗಳಿಗೆ, ಕಾಶ್ಮೀರಿ ಹಿಂದೂಗಳ ಹತ್ಯಾಕಾಂಡ ನಡೆಸಿದವರಿಗೆ, ಸೇನಾಪಡೆಗಳ ಮೇಲೆ ದಾಳಿ ನಡೆಸಿದವರಿಗೆ ಕಾಂಗ್ರೆಸ್ ಹತ್ತಿರವಾಗಿತ್ತು’ ಎಂದು ಆರೋಪಿಸಿದೆ.

ಸಾಕ್ಷ್ಯ ಇಲ್ಲಿದೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ ಅವರು ಭಯೋತ್ಪಾದಕನೊಂದಿಗೆ ಸಂವಾದ ನಡೆಸುತ್ತಿರುವ ಕ್ಷಣಗಳು!!! ಎಂದು ಬಿಜೆಪಿ ಬರೆದುಕೊಂಡಿದೆ.

ಮನಮೋಹನ್ ಸಿಂಗ್‌ ಅವರು ವ್ಯಕ್ತಿಯೊಬ್ಬರೊಂದಿಗೆ ಸಂವಾದ ನಡೆಸುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಆದರೆ, ಆ ವ್ಯಕ್ತಿ ಯಾರು ಎಂಬುದರ ಬಗ್ಗೆ ಇನ್ನಷ್ಟೇ ಸ್ಪಷ್ಟನೆ ಸಿಗಬೇಕಿದೆ.

ವಿಧಾನ ಮಂಡಲದ ಉಭಯ ಸದನದಲ್ಲಿ ‘ದಿ ಕಾಶ್ಮೀರ್ ಫೈಲ್ಸ್‌’ ಸಿನಿಮಾ ಬಗ್ಗೆ ಕಾಂಗ್ರೆಸ್‌ ಪ್ರತಿರೋಧ ತೋರುತ್ತಿದೆ. ಕಾಶ್ಮೀರಿ ಹಿಂದೂಗಳ ಹತ್ಯಾಕಾಂಡವನ್ನು ಕಾಂಗ್ರೆಸ್ ಪಕ್ಷ ಸಮರ್ಥಿಸುತ್ತಿದೆಯೇ’ ಎಂದು ಬಿಜೆಪಿ ಪ್ರಶ್ನಿಸಿದೆ.

ದಿ ಕಾಶ್ಮೀರಿ ಫೈಲ್ಸ್ ಸಿನಿಮಾ ಕುರಿತು ಕಾಂಗ್ರೆಸ್ ನಾಯಕರು ಉಡಾಫೆಯ ಮಾತುಗಳನ್ನಾಡುವ ಮೂಲಕ ಕಾಶ್ಮೀರದಲ್ಲಿ ಹತ್ಯೆಯಾದ ಕಾಶ್ಮೀರಿ ಪಂಡಿತರ, ದಲಿತರ, ಮುಸಲ್ಮಾನರ ಹತ್ಯೆಯನ್ನು ತುಚ್ಛವಾಗಿಸುತ್ತಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ವಾಸ್ತವವನ್ನು ಒಪ್ಪಿಕೊಳ್ಳಲೂ ಕಾಂಗ್ರೆಸ್‌ ಹಿಂಜರಿಯುತ್ತಿದೆ ಏಕೆಂದರೆ ಇದರ ರೂವಾರಿಗಳು ಅವರೇ ಆಗಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT