ಗುರುವಾರ , ಮಾರ್ಚ್ 23, 2023
23 °C

ತಮಿಳುನಾಡಿನಲ್ಲಿ ಪಡಿತರ ಚೀಟಿದಾರರಿಗೆ ₹1,000 ಪೊಂಗಲ್‌ ಉಡುಗೊರೆ

ಪಿಟಿಐ Updated:

ಅಕ್ಷರ ಗಾತ್ರ : | |

ಚೆನ್ನೈ: ಮುಂದಿನ ತಿಂಗಳ ಪೊಂಗಲ್‌ ಹಬ್ಬದ ನಿಮಿತ್ತ ಪಡಿತರ ಚೀಟಿ ಹೊಂದಿರುವವರಿಗೆ ₹1,000  ಉಡುಗೊರೆ ನೀಡುವುದಾಗಿ ತಮಿಳುನಾಡು ಸರ್ಕಾರ ಘೋಷಿಸಿದೆ.

‘ಅಕ್ಕಿ ಪಡಿತರ ಚೀಟಿ ಹೊಂದಿರುವವರು ಪೊಂಗಲ್‌ ಉಡುಗೊರೆ ಪಡೆಯಲು ಅರ್ಹರು. ಶ್ರೀಲಂಕಾ ಪುನರ್ವಸತಿ ಕೇಂದ್ರದಲ್ಲಿ ಇರುವವರಿಗೂ ಈ ಉಡುಗೊರೆ ಸಿಗಲಿದೆ. ಇದಕ್ಕಾಗಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ’ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

ಫಲಾನುಭವಿಗಳಿಗೆ ಪೊಂಗಲ್‌ ಪ್ರಯುಕ್ತ 1 ಕೆ.ಜಿ ಅಕ್ಕಿ ಮತ್ತು ಸಕ್ಕರೆಯನ್ನೂ ಸರ್ಕಾರ ನೀಡಲಿದೆ.  ಪಡಿತರ ಚೀಟಿ ಹೊಂದಿರುವ  2.19 ಕೋಟಿ ಜನ ಇದರ ಪ್ರಯೋಜನ ಪಡೆಯಲಿದ್ದಾರೆ. ಇದಕ್ಕಾಗಿ ₹2,356.67 ಕೋಟಿ ವ್ಯಯಿಸಲಾಗುವುದು ಎಂದು ಪ್ರಕಟಣೆ ಹೇಳಿದೆ.
ಜ.15ರಂದು ರಾಜ್ಯದಲ್ಲಿ ಪೊಂಗಲ್‌ ಹಬ್ಬ ನಡೆಯಲಿದೆ. ಜ.2ರಂದು ಮುಖ್ಯಮಂತ್ರಿ ಸ್ಟಾಲಿನ್‌ ಉಡುಗೊರೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು